ಅರಾಮಾಗಿರಿ ಹಾಗೇ ಹುಷಾರಾಗಿರಿ: ತುಂಗಾತರಂಗ ಕಳಕಳಿ ಮಾತಿದು

ಬೆಂಗಳೂರು:
ರಾಜ್ಯದಲ್ಲಿ ಕರೊನಾ ಸೋಂಕಿನ ದರ ಕಡಿಮೆಯಾಗಿದ್ದು, ಅಕ್ಟೋಬರ್​ 1 ರಿಂದ ಶಾಲೆಗಳಿಗೆ ಮತ್ತು ಸಿನಿಮಾ ಮಂದಿರಗಳಿಗೆ ಪೂರ್ಣ ಸಾಮರ್ಥ್ಯದಲ್ಲಿ ನಡೆಯುವ ಅವಕಾಶ ಒದಗಿಸಲಾಗುವುದು. ಗಾಂಧಿ ಜಯಂತಿಯ ನಂತರ(ಅ.3 ರಿಂದ) ಪಬ್​ಗಳಿಗೆ ತೆರೆಯಲು ಅವಕಾಶ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಇಂದು ನಡೆದ ಕೋವಿಡ್​ ಸ್ಥಿತಿಗತಿ ಕುರಿತ ಉನ್ನತ ಮಟ್ಟದ ಸಭೆಯ ನಂತರ ಅವರು ರಾಜ್ಯ ಸರ್ಕಾರ ಕೈಗೊಂಡ ತೀರ್ಮಾನಗಳ ಮಾಹಿತಿ ನೀಡಿದರು.

ರಾಜ್ಯದಲ್ಲಿ ಈಗ ಸರಾಸರಿ ಶೇ. 0.66 ಕೋವಿಡ್ ಪ್ರಮಾಣ ಇದೆ. ಆದ್ದರಿಂದ ಹಲವು ನಿರ್ಬಂಧಗಳನ್ನು ಸಡಿಲೀಕರಿಸಲಾಗಿದೆ. ಪಾಸಿಟಿವ್ ರೇಟ್ 2% ಗಿಂತ ಹೆಚ್ಚಿದಲ್ಲಿ, ಆ ಜಿಲ್ಲೆಗಳಲ್ಲಿ ಸಿನಿಮಾ ಮಂದಿರಗಳು, ಪಬ್​ಗಳು ಕ್ಲೋಸ್ ಆಗುತ್ತವೆ ಎಂದರು.
ದೇವಸ್ಥಾನಗಳಲ್ಲಿ ಸೇವೆ ಆರಂಭಕ್ಕೆ ಆಯಾ ಜಿಲ್ಲಾಧಿಕಾರಿಗಳು ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ದಸರಾ ಬಗ್ಗೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲಾಗುವುದು. ಗಡಿ ಭಾಗದ ಜಿಲ್ಲೆಗಳಲ್ಲಿ ತೀವ್ರ ನಿಗಾ ಮುಂದುವರಿಸಲಾಗುವುದು. 6 ರಿಂದ 12ನೇ ತರಗತಿವರೆಗೆ ಪೂರ್ಣ ಪ್ರಮಾಣದಲ್ಲಿ ವಾರದಲ್ಲಿ ಥದು ದಿನ ಶಾಲೆ ನಡೆಸಲು ಅವಕಾಶವಿರುತ್ತದೆ. 1 ರಿಂದ 5ನೇ ತರಗತಿವರೆಗಿನ ಶಾಲೆಗಳ ಪುನರಾರಂಭ ಸದ್ಯಕ್ಕಿಲ್ಲ ಎಂದು ಬೊಮ್ಮಾಯಿ ತಿಳಿಸಿದರು.

ಪರಿಷ್ಕೃತ ಮಾರ್ಗಸೂಚಿ ಇಲ್ಲಿದೆ ನೋಡಿ

ಶಾಲೆಗಳಲ್ಲಿ 100% ಹಾಜರಾತಿ: 6ನೇ ತರಗತಿಯಿಂದ ರಿಂದ 8ನೇ ತರಗತಿವರೆಗೆ ಶೇ. 100 ರಷ್ಟು ಹಾಜರಾತಿಯೊಂದಿಗೆ ವಾರದಲ್ಲಿ ಐದು ದಿನಗಳು ಶಾಲೆ ನಡೆಸಲು ಅವಕಾಶ. ಸೋಮವಾರದಿಂದ ಶುಕ್ರವಾರದವರೆಗೆ ಶಾಲಾ ಕಾಲೇಜುಗಳಿಗೆ ಅನುಮತಿ ನೀಡಲಾಗಿದೆ.

ಸಿನಿಮಾ ಮಂದಿರಗಳು
ಅಕ್ಟೋಬರ್ 1 ರಿಂದ ಶೇ. 1 ಕ್ಕಿಂತ ಕಡಿಮೆ ಕರೊನಾ ಪಾಸಿಟಿವಿಟಿ ಇರುವ ಜಿಲ್ಲೆಗಳಲ್ಲಿ ಸಿನಿಮಾ ಮಂದಿರಗಳಲ್ಲಿ 100% ಸೀಟು ಭರ್ತಿಗೆ ಅನುಮತಿ ನೀಡಲಾಗಿದೆ. ಶೇ.1 ಕ್ಕಿಂತ ಜಾಸ್ತಿ ಇರೋ 4 ರಿಂದ 5 ಜಿಲ್ಲೆಗಳಲ್ಲಿ ಮಾತ್ರ 50% ಸೀಟಿಂಗ್ ಅನುಮತಿ ಮುಂದುವರಿಯಲಿದೆ.

ಕ್ಲಬ್, ಪಬ್ ಓಕೆ…!
ಕ್ಲಬ್​-ಪಬ್​ಗಳು ಓಪನ್
ಅಕ್ಟೋಬರ್​ 3 ರಿಂದ
ಮತ್ತು ಪಬ್​ಗಳಿಗೆ ತೆರೆಯಲು ಅವಕಾಶ ನೀಡಲಾಗಿದೆ. ಪ್ರವೇಶಕ್ಕೆ ಕನಿಷ್ಠ ಒಂದು ಡೋಸ್​ ಲಸಿಕೆ ಹಾಕಿಸಿಕೊಂಡಿರಬೇಕು. ಆದರೆ ಗರ್ಭಿಣಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಪ್ರವೇಶಾವಕಾಶವಿಲ್ಲ.
ಸಂ- ತುಂಗಾತರಂಗ ದಿನಪತ್ರಿಕೆ, ಶಿವಮೊಗ್ಗ ಕರ್ನಾಟಕ.
9448256183

By admin

ನಿಮ್ಮದೊಂದು ಉತ್ತರ

error: Content is protected !!