ಶಿವಮೊಗ್ಗ ನಗರದ ಸೋಮಿನಕೊಪ್ಪ ಭೋವಿ ಕಾಲೋನಿಯಲ್ಲಿ ನೂತನವಾಗಿ ನಿರ್ಮಿಸಿದ್ದ ಶ್ರೀ ಆಂಜನೇಯ ಹಾಗೂ ಯಲ್ಲಮ್ಮ ದೇವಾಲಯದ ಗೋಪುರ ಕಳಸ ಪ್ರತಿಷ್ಠಾಪೆನೆ ವೈಭವದಿಂದ ನಡೆಯಿತು.


ನಿನ್ನೆಯಿಂದ ರಾತ್ರಿಯೀಡಿ ಹೋಮ, ಹವನ, ಗಣಹೋಮ ಹಾಗೂ ದೇವರುಗಳ ಮೆರವಣಿಗೆಯನ್ನು ನಡೆಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಜಿ.ಪಂ.ಸದಸ್ಯ ಕೆ.ಇ.ಕಾಂತೇಶ್, ಪಾಲಿಕೆ ಸದಸ್ಯೆ ಆಶಾ ಚಂದ್ರಪ್ಪ, ಮಾಜಿ ಸೂಡಾ ಅಧ್ಯಕ್ಷ ವಿ.ರಾಜು, ಉದ್ಯಮಿಗಳಾದ ಎಸ್.ಆರ್.ಸೋಮು, ಸ್ಮಾರ್ಟ್‌ಸಿಟಿ ಇನ್ಪ್ರಾ ಡೆವಲಪರ‍್ಸ್‌ನ
ಜಗದೀಶ್ ಆರ್. ಪಂಡಿತ್, ಹನುಮಂತಪ್ಪ ಆರ್, ನಾಗರಾಜ್, ಎಂ.ಕೆ.ಎಸ್.ಶಂಕ್ರಣ್ಣ, ದೇವಸ್ಥಾನ ಕಮಿಟಿಯ ಅಧ್ಯಕ್ಷ ಯಲ್ಲಪ್ಪ, ಉಪಾಧ್ಯಕ್ಷ ರುದ್ರೇಶ್, ಕಾರ್ಯದರ್ಶಿ ಸುರೇಶ್, ಸಹಕಾರ್ಯದರ್ಶಿ ಈರಪ್ಪ ಈ, ಮೋಹನ್, ಹಾಗೂ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!