ಶಿವಮೊಗ್ಗ: ಅಂತೂ ಇಂತೂ ಕಲ್ಲು ಕೋರೆಗಳ ಅನು ಮತಿ ನವೀಕರಣ ವಿಚಾರವಾಗಿ ಜಿಲ್ಲಾ ಉಸ್ತು ವಾರಿ ಸಚಿವರ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತುರ್ತು ಸಭೆ ನಡೆಸಿದ್ದು, ಯಕೋ ಸೆನ್ಸಿಟೀವ್ ಝೋನ್‌ನ ಅಡಿಯ ಪ್ರಶ್ನೆಗೆ ಹೈಕೋರ್ಟ್‌ನಿಂದ ಅನುಮತಿ ಪಡೆದ ನಾಲ್ಕು ಕೋರೆಗಳನ್ನು ನವೀಕರಿಸಲು ಸೂಚಿಸಿದ್ದಾರೆ.


ನಿನ್ನೆ ಬೆಳಗ್ಗೆ ಜಿಲ್ಲಾಧಿಕಾರಿ ಕಛೇರಿ ಸಭಾಂಗ ಣದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಕಲ್ಲುಕೋರೆಗಳ ನವೀಕರಣದ ವಿಚಾರವಾಗಿ ಎಲ್ಲಾ ಕೋರೆಗಳ ಮಾಲೀಕರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಕಾನೂನಾತ್ಮಕ ಚೌಕಟ್ಟಿನಲ್ಲಿ ಕೋರೆಗಳು ನಡೆದು ಕ್ರಶರ್‌ಗಳ ಬಳಕೆಯಾಗು ವಂತೆ ನೋಡಿಕೊಳ್ಳಲು ಸೂಚಿಸಿದರು. ಆರಂಭ ದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಕೋರೆ ಮಾಲೀ ಕರ ನಡುವೆ ಒಂದಿಷ್ಟು ವಾದ-ವಿವಾದಗಳು ನಡೆದವು. ಅಂತಿಮವಾಗಿ ೪೪ ಕೋರೆಗಳಲ್ಲಿ ಹೈಕೋರ್ಟ್ ಆದೇಶಿಸಿರುವ ೪ ಕೋರೆಗಳನ್ನು ನ್ಯಾಯಾಲಯದ ನಿರ್ದೇಶನದಡಿಯಲ್ಲಿ ಹಾಗೂ ಕಾನೂನಾತ್ಮಕವಾಗಿ ನಡೆಸಲು ಸೂಚಿಸಿದ್ದಾರೆ.


ಕಳೆದ ಶನಿವಾರವೇ ತುಂಗಾ ತರಂಗ ಪತ್ರಿಕೆ ಈ ವಿಚಾರವಾಗಿ ವಿಶೇಷ ವರದಿಯೊಂದನ್ನು ನೀಡಿತ್ತು. ‘ಕ್ರಶರ್‌ಗಳಿಗೆ ಅನುಮತಿ ನೀಡಿದ ಜಿಲ್ಲಾಡಳಿತ ಕೋರೆಗಳ ವಿಚಾರದಲ್ಲೇಕೆ ದಿವ್ಯ ಮೌನ ತಾಳಿದೆ’ ‘ಕೋರೆಗಳಿಲ್ಲದಿದ್ದರೆ ಕ್ರಶರ್ ನಡೆಸುವುದಾದರೂ ಹೇಗೆ ಎಂದು ಜಿಲ್ಲಾಡಳಿ ತಕ್ಕೆ ಪ್ರಶ್ನಿಸಿತ್ತು.
ನ್ಯಾಯಾಲಯದ ನಿರ್ದೇಶನದಂತೆ ಕೋರೆಗಳನ್ನು ಆರಂಭಿಸಲು ತೀರ್ಮಾನಿಸಿರುವ ಕ್ರಮವನ್ನು ಜಿಲ್ಲಾ ಸ್ಟೋನ್ ಕ್ರಶರ್ ಮಾಲೀಕರ ಸಂಘ ಸ್ವಾಗತಿಸಿರುವದಲ್ಲದೇ ನಾಲ್ಕು ಕೋರೆಗಳ ಜೊತೆ ನ್ಯಾಯಾಲಯದಲ್ಲಿ ದಾವೆ ಹೂಡಿರುವ ಇನ್ನೂ ೪೦ ಕೋರೆಗಳಿಗೆ ಅನುಮತಿ ನೀಡಬೇಕೆಂದು ವಿನಂತಿಸಿದರು.
ಪ್ರಸಕ್ತ ನಾಲ್ಕು ಕೋರೆಗಳಿಗೆ ಅವಕಾಶ ನೀಡಲಾಗಿದ್ದು, ಇವು ಬಫರ್ ಝೋನ್‌ನಲ್ಲಿ ಬರಲಿವೆ ಎಂಬ ಕಾರಣಕ್ಕೆ ಅರ್ಜಿಗಳನ್ನು ತಿರಸ್ಕರಿ ಸಲಾಗಿತ್ತು. ಅಂದು ತಿರಸ್ಕೃತಗೊಂಡಿದ್ದ ದಾವೆ ಯನ್ನು ಅರ್ಜಿದಾರರು ರಾಜ್ಯ ಉಚ್ಛನ್ಯಾಯಾಲ ಯದಲ್ಲಿ ಪ್ರಶ್ನಿಸಿದ್ದರು. ಈಗ ನ್ಯಾಯಾಲವು ಕೆಲ ಸ್ಪಷ್ಟಿಕರಣದೊಂದಿಗೆ ಸೂಚನೆ ನೀಡಿ ಜಿಲ್ಲಾಧಿ ಕಾರಿಗಳಿಗೆ ಆರಂಭಿಸುವ ಅನುಮತಿ ನೀಡಲು ತಿಳಿಸಿದೆ. ಒಟ್ಟಾರೆ ನಿನ್ನೆ ನಡೆದ ಸಭೆ ಶಿವಮೊಗ್ಗ ಹೊರವಲಯದ ಅಬ್ಬಲಗೆರೆ, ಕಲ್ಲುಗಂಗೂರು, ದೇವಕಾತಿಕೊಪ್ಪ, ಗೆಜ್ಜೇನಹಳ್ಳಿ, ಹುಣಸೋಡು ವ್ಯಾಪ್ತಿಯ ಕ್ರಶರ್ ಮಾಲೀಕರಿಗೆ ಲಾಭವಾಗಲಿದೆ ಎನ್ನಲಾಗಿದೆ.

ತುಂಗಾ ತರಂಗ ಮೊದಲೇ ಸುದ್ದಿಯ ಸುಳಿವು ನೀಡಿತ್ತು.

By admin

ನಿಮ್ಮದೊಂದು ಉತ್ತರ

error: Content is protected !!