
ಶಿವಮೊಗ್ಗ: ಪ್ರಾಂಶುಪಾಲರ ಹುದ್ದೆಗೋಸ್ಕರ ಶಿಕಾರಿಪುರದ ಕುಮಧ್ವತಿ ಬಿಎಡ್ ಕಾಲೇಜಿನ ಎನ್ಸಿಇಟಿ ಮಾನ್ಯತೆ ರದ್ದಾಗಿದೆ.
ರೆಗ್ಯೂಲೇಷನ್ ಆಕ್ಟ್ ಪ್ರಕಾರ ಶೇ.55 ರಷ್ಟು ಕಡಿಮೆ ಅಂಕ ಪಡೆದವರಿಗೆ ಪ್ರಾಂಶುಪಾಲರನ್ನಾಗಿ ಮಾಡುವ ಹಾಗಿಲ್ಲ. ಆದರೂ ಪ್ರಾಂಶುಪಾಲರಾದ ಜಯಶ್ರೀ ರಕ್ಕಸಗಿ ಹಾಗೂ ಉಪನ್ಯಾಸಕ ಕಿರಣ್ ಕುಮಾರ್ ಕೆ ಅವರಿಗೆ ಹುದ್ದೆ ನೀಡಲಾಗಿತ್ತು.

ನಿಯಮಬಾಹಿರವಾಗಿ ಕುಮಧ್ವತಿ ಟ್ರಸ್ಟ್ನ ಆಡಳಿತ ಮಂಡಳಿ ಈ ಇಬ್ಬರನ್ನು ನೇಮಿಸಿಕೊಂಡಿತ್ತು ಹಾಗೂ ಮಾನ್ಯತೆ ಪಡೆಯಲು ಸರಿಯಾದ ದಾಖಲಾತಿ, ಕಟ್ಟಡ ವಿನ್ಯಾಸದ ಒಪ್ಪಿಗೆ ಪಡೆದುಕೊಂಡಿರಲಿಲ್ಲ. ಕಾಲೇಜಿನ ಆಡಳಿತ ಮಂಡಳಿ ಕಟ್ಟಡ ಹಾಗೂ ಜಾಗದ ಕುರಿತು ಅಫಿಡೆವಿಟ್ ಸಲ್ಲಿಸಿಲ್ಲ. ಹಾಗಾಗೀ ಎನ್ಸಿಟಿ ಕಾಲೇಜಿನ ಮಾನ್ಯತೆ ರದ್ದುಪಡಿಸಿದೆ.
