ಸಾಗರ : ತಾಲ್ಲೂಕಿನ ಆಲಳ್ಳಿ ಗ್ರಾಮದ ಹೊಸಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ

ಭಾನುವಾರ ನಡೆದಿದೆ. ಆಲಳ್ಳಿ ಗ್ರಾಮದ ಪುನಿತ್ (೧೧) ಮತ್ತು ಮುಳುಕೇರಿ ಗ್ರಾಮದ ಲೇಖನ್ (೧೩) ಮೃತ ಬಾಲಕರಾಗಿದ್ದಾರೆ.\

ಮುಳುಕೇರಿ ಗ್ರಾಮದ ಷಣ್ಮುಖ ಅವರ ಪುತ್ರ ಲೇಖನ್ (೧೩) ಮತ್ತು ಆಲಳ್ಳಿ ಗ್ರಾಮದ ಗಣೇಶ್ ಅವರ ಪುತ್ರ ಪುನೀತ್ (೧೧) ಇಬ್ಬರೂ ಒಂದೇ ಕುಟುಂಬದವರಾಗಿದ್ದು, ಮಧ್ಯಾಹ್ನ ಊಟವಾದ ನಂತರ ಊರ ಸಮೀಪದ ಕೆರೆಗೆ ಈಜಲು ತೆರಳಿದ್ದರು.

ಮುಳುಕೇರಿ ಗ್ರಾಮದ ಷಣ್ಮುಖ ಅವರ ಪುತ್ರ ಪುತ್ರ ಲೇಖನ್ ರಜೆ ಹಿನ್ನೆಲೆಯಲ್ಲಿ ಆಲಳ್ಳಿಗೆ ಆಗಮಿಸಿದ್ದರು. ಇಬ್ಬರೂ ಊರಿನ ಕೆರೆಯಲ್ಲಿ ಈಜಲು

ಹೋದಾಗ ಈ ದುರ್ಘಟನೆ ಸಂಭವಿಸಿದೆ. ಮಕ್ಕಳು ಸಾಕಷ್ಟು ಹೊತ್ತಾದರೂ ಮನೆಗೆ ಬರದೆ ಇರುವ ಹಿನ್ನೆಲೆಯಲ್ಲಿ ಕುಟುಂಬದವರು ಹುಡುಕಾಟ ನಡೆಸಿದಾಗ ಕೆರೆಯಲ್ಲಿ ಕಾಲುಜಾರಿ ಬಿದ್ದು ಮುಳುಗಿ ಮೃತಪಟ್ಟಿರುವುದು ಪತ್ತೆಯಾಗಿದೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.