
ಶಿವಮೊಗ್ಗ,ನ.27: ಭಾರತದ ಪ್ರತಿಷ್ಠಿತ ಆಭರಣ ಸಂಸ್ಥೆಯಾದ ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲರ್ಸ್ ವತಿಯಿಂದ ನಗರದ ಹೋಟೆಲ್ ರಾಯಲ್ ಆರ್ಕಿಡ್ ಸಭಾಂಗಣದಲ್ಲಿ ನ. 27ರಿಂದ 30 ರವರೆಗೆ 4 ದಿನಗಳ ಕಾಲ ವಿಶೇಷ ಚಿನ್ನಾಭರಣಗಳ ಪ್ರದರ್ಶನ ಮತ್ತು ಮಾರಾಟವನ್ನು ಹಮ್ಮಿಕೊಳ್ಳಲಾಗಿದೆ.

ಶುಕ್ರವಾರ ಬೆಳಗ್ಗೆ ರಾಯಲ್ ಆರ್ಕಿಡ್ ಸೆಂಟ್ರಲ್ನಲ್ಲಿ ಚಿನ್ನಾಭರಣಗಳ ಪ್ರದರ್ಶನ ಮೇಳವನ್ನು ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯೆ ಬಲ್ಕಿಶ್ ಬಾನು, ಸಿ. ಕೃಷ್ಣಯ್ಯ ಚೆಟ್ಟಿ ಸಂಸ್ಥೆಯವರು 155 ವರ್ಷಗಳಿಂದ ಚಿನ್ನಾಭರಣಗಳನ್ನು ಮಾರಾಟ ಮಾಡುತ್ತಾ ಬಂದಿದ್ದಾರೆ. ಇದು ಕೇವಲ ಪ್ರದರ್ಶನ ಮತ್ತು ಮಾರಾಟವಲ್ಲದೇ, ವಿಶಿಷ್ಟ ರೀತಿಯ ಕಲಾ ಕೌಶಲ್ಯ, ಪರಂಪರೆ ಬಿಂಬಿಸುತ್ತದೆ ಎಂದರು.

ಈ ಮೇಳದಲ್ಲಿ ಅಪರೂಪದ ರತ್ನ, ಪ್ರಕಾಶಮಾನವಾದ ಮುತ್ತುಗಳು, ರಾಜಮನೆತನದಳ ಪಚ್ಚೆಗಳು, ಮಾಣಿಕ್ಯಗಳು, ವೈಢೂರ್ಯ, ವಜ್ರ ಹೀಗೆ ವಿಭಿನ್ನ ಬಗೆಯ ಆಭರಣಗಳು ಇಲ್ಲಿವೆ. ಇವೆಲ್ಲವೂ ಸಂಪ್ರದಾಯ ಮತ್ತು ಭಾವನೆಗಳಿಗೆ ಜೀವ ತುಂಬುವಂತಿವೆ ಎಂದರು.

ಅಂಗಡಿಯ ಮುಖ್ಯಸ್ಥ ಗೋಪಾಲ ಸಿಂಗ್ ಮಾತನಾಡಿ, ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಭರಣಗಳು ಎಂದರೆ ವಿಶ್ವಾಸ ಮತ್ತು ನಂಬಿಕೆಗೆ ಅರ್ಹವಾಗಿವೆ. ಅದರಲ್ಲೂ ಶಿವಮೊಗ್ಗದ ಗ್ರಾಹಕರೊಂದಿಗೆ ನಮ್ಮ ಸಂಸ್ಥೆಯ ಸಂಪರ್ಕ ಅನ್ಯೋನ್ಯವಾಗಿದೆ. ಇದನ್ನು ಮತ್ತಷ್ಟು ಗಟ್ಟಿಗೊಳಿಸಲು ಈ ಪ್ರದರ್ಶನ ಹಮ್ಮಿಕೊಂಡಿದ್ದೇವೆ ಎಂದರು.

ಗ್ರೂಪ್ನ ಪಿಆರ್ಒ ಮುಖ್ಯಸ್ಥರಾದ ತೇಜಸ್ ಕಲ್ರಾ ಮಾತನಾಡಿ, ಇದೊಂದು ವಿಶೇಷ ಮತ್ತು ವಿಶಿಷ್ಟ ಪ್ರದರ್ಶನ, ನಾಳ್ಕು ದಿನಗಳ ಕಾಲ ಏರ್ಪಡಿಸಿದ್ದೇವೆ. ಶಿವಮೊಗ್ಗದ ಗ್ರಾಹಕರಿಗಾಗಿ ವಿಶೇಷ ಕೊಡುಗೆಗಳಿವೆ. ಬೆಳ್ಳಿ ಆಭರಣದ ಮೇಲೆ ಶೇ. 2, ಚಿನ್ನದ ಆಭರಣದ ಮೇಲೆ ಶೇ. 4ರಷ್ಟು, ವಜ್ರದ ಆಭರಣದ ಮೇಲೆ ಶೇ. 6ರಷ್ಟು ರಿಯಾಯಿತಿ ನೀಡಲಾಗುತ್ತದೆ. ಗ್ರಾಹಕರು ಇದರ ಪ್ರಯೋಜನ ಪಡೆಯಬೇಕೆಂದು ಕೋರಿದರು.

