
ಶಿವಮೊಗ್ಗ,ನ.27:
ನಗರದ ಪಾರ್ಕ್ ಬಡಾವಣೆಯಲ್ಲಿರುವ ಮಾತೃವಾತ್ಸಲ್ಯ ಆಸ್ಪತ್ರೆಯನ್ನು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗಿ ನವೀಕರಿಸಲಾಗಿದ್ದು, ನವೆಂಬರ್ 29ರ ಭಾನುವಾರ ಹಿರಿಯ ವೈದ್ಯರಿಂದ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಆಸ್ಪತ್ರೆಯ ಮುಖ್ಯಸ್ಥ ಡಾ. ಪೃಥ್ವಿ ತಿಳಿಸಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರಿಯ ವೈದ್ಯರಾದ ಡಾ. ಟಿ. ನಾರಾಯಣ್, ಡಾ. ಎಸ್.ಐ. ಬಿರಾದರ್, ಡಾ. ನಿರ್ಮಲ, ಡಾ. ರಜನಿ ಪೈ, ಡಾ. ಶಿವರಾಮ ಕೃಷ್ಣ, ಡಾ. ಬಿ. ಲಕ್ಷ್ಮೀನಾರಾಯಣಾಚಾರ್ ಹಾಗೂ ಡಾ. ಧನಂಜಯ ಸರ್ಜಿ ಅವರು ಆಸ್ಪತ್ರೆಯನ್ನು ಉದ್ಘಾಟಿಸಲಿದ್ದಾರೆ ಎಂದರು.

ಮಾತೃವಾತ್ಸಲ್ಯ ಹೆಲ್ತ್ ಕೇರ್ನಲ್ಲಿ ಒಟ್ಟು 100 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. 30ಕ್ಕೂ ಹೆಚ್ಚು ಸುಸಜ್ಜಿತ ಐಸಿಯು ಹಾಸಿಗೆಗಳು, ಆಧುನಿಕ ಕ್ಯಾತ್ ಲ್ಯಾಬ್ ಹಾಗೂ ಮಾಡ್ಯುಲರ್ ಆಪರೇಷನ್ ಥಿಯೇಟರ್ಗಳನ್ನು ಹೊಂದಿದೆ. ಕ್ಯಾತ್ ಲ್ಯಾಬ್ ನಲ್ಲಿ ಆಂಜಿಯೋಗ್ರಾಮ್, ಆಂಜಿಯೋಪ್ಲಾಸ್ಟಿ, ಪೇಸ್ ಮೇಕರ್ ಅಳವಡಿಕೆ ಸೇರಿದಂತೆ ಹೃದಯ ಸಂಬಂಧಿತ ಚಿಕಿತ್ಸೆಗಳನ್ನು ನೀಡಲು ಸೌಲಭ್ಯ ಕಲ್ಪಿಸಲಾಗಿದೆ. ರಕ್ತನಾಳಗಳ ಒಳಭಾಗವನ್ನು ಪರಿಶೀಲಿಸಿ ಚಿಕಿತ್ಸೆ ನೀಡಲು ಸಹಾಯಕವಾಗುವ ಐಯುಸ್ ಎಂಬ ಆಧುನಿಕ ಸಾಧನವನ್ನೂ ಅಳವಡಿಸಲಾಗಿದೆ ಎಂದು ತಿಳಿಸಿದರು.

ಮಾಡ್ಯುಲರ್ ಆಪರೇಷನ್ ಥಿಯೇಟರ್ನಲ್ಲಿ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳನ್ನು ನಡೆಸಲು ಅಗತ್ಯವಾದ ಆಧುನಿಕ ಸೌಲಭ್ಯಗಳಿವೆ. ಯಾವುದೇ ಗಂಭೀರ ಪ್ರಕರಣಗಳನ್ನು ನಿರ್ವಹಿಸುವ ಸಾಮಥ್ರ್ಯ ಹೊಂದಿರುವ ತಜ್ಞ ವೈದ್ಯರ ತಂಡ ಆಸ್ಪತ್ರೆಯಲ್ಲಿದೆ ಎಂದು ಹೇಳಿದರು.

ಆಸ್ಪತ್ರೆಯಲ್ಲಿ ಜನರಲ್ ಮೆಡಿಸಿನ್, ಎಮರ್ಜೆನ್ಸಿ ಮೆಡಿಸಿನ್, ಕಾರ್ಡಿಯಾಲಜಿ, ಜನರಲ್ ಸರ್ಜರಿ, ಲ್ಯಾಪರೋಸ್ಕೋಪಿ, ಸ್ತ್ರೀರೋಗ ಮತ್ತು ಪ್ರಸೂತಿ, ಮಕ್ಕಳ ವಿಭಾಗ, ಮೂಳೆ ರೋಗ, ಮೂತ್ರ ರೋಗ, ಚರ್ಮ ರೋಗ, ನರರೋಗ ಹಾಗೂ ಮೆದುಳು ಶಸ್ತ್ರಚಿಕಿತ್ಸೆ ಸೇರಿದಂತೆ ಹಲವು ವಿಭಾಗಗಳನ್ನು ಆರಂಭಿಸಲಾಗಿದೆ. ರೋಗಿಗಳಿಗೆ ಒಂದೇ ಸೂರಿನಡಿ ವಿವಿಧ ವೈದ್ಯಕೀಯ ಸೇವೆಗಳು ದೊರೆಯುವಂತೆ ವ್ಯವಸ್ಥೆ ಮಾಡಲಾಗಿದೆ. 24 ಗಂಟೆಗಳ ಸಿಟಿ ಸ್ಕ್ಯಾನ್, ಎಕ್ಸ್ರೇ, ಅಲ್ಟ್ರಾಸೌಂಡ್, ಎಕೋ ಸ್ಕ್ಯಾನ್, ರೇಡಿಯಾಲಜಿ, ಔಷಧಾಲಯ ಹಾಗೂ ಪ್ರಯೋಗಾಲಯ ಮತ್ತು ಡಯಾಗ್ನೋಸ್ಟಿಕ್ ಸೇವೆಗಳು ಲಭ್ಯವಿರಲಿವೆ ಎಂದರು.

ಆಸ್ಪತ್ರೆಯಲ್ಲಿ ಹೃದಯರೋಗ ತಜ್ಞರಾದ ಡಾ. ಮಹೇಶ್ ಮೂರ್ತಿ ಮತ್ತು ಡಾ. ಮಿಥುನ್, ಸ್ತ್ರೀರೋಗ ತಜ್ಞರಾದ ಡಾ. ಗೀತಾರಾಣಿ ಮತ್ತು ಡಾ. ನಾಗಮಣಿ, ಮಕ್ಕಳ ತಜ್ಞೆ ಡಾ. ವಿದ್ಯಾ, ಲ್ಯಾಪರೋಸ್ಕೋಪಿಕ್ ಸರ್ಜನ್ ಡಾ. ಸಂತೋಷ್ ಭೂಪಾಲ್, ರೇಡಿಯಾಲಜಿಸ್ಟ್ ಡಾ. ಸಿಂಧೂ, ವೈದ್ಯರಾದ ಡಾ. ಸಚಿನ್ ಹಾಗೂ ತುರ್ತು ಚಿಕಿತ್ಸಾ ತಜ್ಞ ಡಾ. ಭರತ್ ಸೇರಿದಂತೆ ಹಲವು ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಆಸ್ಪತ್ರೆಯಲ್ಲಿ ಖಾಸಗಿ ವಿಮಾ ಕಂಪನಿಗಳ ಕ್ಯಾಶ್ಲೆಸ್ ಚಿಕಿತ್ಸೆ ಸೌಲಭ್ಯ ಲಭ್ಯವಿದೆ. ಆಯುಷ್ಮಾನ್ ಭಾರತ್ ಸೇರಿದಂತೆ ಸರ್ಕಾರಿ ಆರೋಗ್ಯ ಯೋಜನೆಗಳ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ಅನುಮೋದನೆ ದೊರೆಯುವ ನಿರೀಕ್ಷೆಯಿದೆ ಎಂದು ಡಾ. ಪೃಥ್ವಿ ತಿಳಿಸಿದರು.

ಬೆಂಗಳೂರು ಮಾದರಿಯಲ್ಲಿ ಹಿರಿಯ ತಜ್ಞ ವೈದ್ಯರನ್ನು ಒಳಗೊಂಡ ತಂಡದ ಮೂಲಕ ಕೈಗೆಟುಕುವ ದರದಲ್ಲಿ ಚಿಕಿತ್ಸೆ ನೀಡುವುದು ಆಸ್ಪತ್ರೆಯ ಉದ್ದೇಶವಾಗಿದೆ. ಗಂಭೀರ ಹಾಗೂ ಕ್ಲಿಷ್ಟಕರ ಆರೋಗ್ಯ ಸಮಸ್ಯೆಗಳಿಗೂ ಸೂಕ್ತ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದರು.
50ಕ್ಕೂ ಹೆಚ್ಚು ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ಸಾರ್ವಜನಿಕರಿಗೆ ಪಾಕಿರ್ಂಗ್ ಸಮಸ್ಯೆಯಾಗದಂತೆ ಆಸ್ಪತ್ರೆಯ ಎಡಭಾಗದಲ್ಲಿ ಸುಮಾರು 8,000ರಿಂದ 9,000 ಚದರ ಅಡಿ ಜಾಗವನ್ನು ಬಾಡಿಗೆಗೆ ಪಡೆಯಲಾಗಿದೆ. ಇಲ್ಲಿ ಸುಮಾರು 50ರಿಂದ 60 ಕಾರುಗಳು ಹಾಗೂ 30ರಿಂದ 40 ದ್ವಿಚಕ್ರ ವಾಹನಗಳನ್ನು ನಿಲ್ಲಿಸಬಹುದಾಗಿದೆ.
ಮುಖ್ಯ ರಸ್ತೆಯಿಂದ, ಕನ್ಸರ್ವೆನ್ಸಿ ರಸ್ತೆಯಿಂದ ಹಾಗೂ ಕಾಂಗ್ರೆಸ್ ಕಚೇರಿ ಕಡೆಯಿಂದ ಪಾರ್ಕಿಂಗ್ಗೆ ಪ್ರವೇಶ ವ್ಯವಸ್ಥೆ ಕಲ್ಪಿಸಲಾಗಿದೆ.

ಆಂಬ್ಯುಲೆನ್ಸ್ಗಳಿಗೆ ಮಾತ್ರ ಆಸ್ಪತ್ರೆಯ ಮುಂಭಾಗದಲ್ಲಿ ಅವಕಾಶ ನೀಡಲಾಗುವುದು. ಉಳಿದ ವಾಹನಗಳನ್ನು ಪಾಕಿರ್ಂಗ್ ಸ್ಥಳಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದರು.
ತಾವು ಈ ಹಿಂದೆ ಮೆಟ್ರೋ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ್ದು, ಸುಮಾರು 11 ವರ್ಷಗಳ ಅನುಭವದ ಬಳಿಕ ಹೊಸದಾಗಿ ಮಾತೃವಾತ್ಸಲ್ಯ ಹೆಲ್ತ್ ಕೇರ್ ಆರಂಭಿಸಲಾಗಿದೆ ಎಂದು ಡಾ. ಪೃಥ್ವಿ ಹೇಳಿದರು.
ಈ ಹಿಂದೆ ಮಾತೃವಾತ್ಸಲ್ಯ ಆಸ್ಪತ್ರೆಯಲ್ಲಿ ಮಹಿಳೆಯರು ಮತ್ತು ಮಕ್ಕಳ ವಿಭಾಗ ಮಾತ್ರ ಕಾರ್ಯನಿರ್ವಹಿಸುತ್ತಿತ್ತು. ಸುಮಾರು 40ರಿಂದ 50 ಹಾಸಿಗೆಗಳಿದ್ದ ಆಸ್ಪತ್ರೆಯನ್ನು ಇದೀಗ 100 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗಿ ವಿಸ್ತರಿಸಲಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಪತ್ರಕರ್ತರು ಹಾಗೂ ಅವರ ಕುಟುಂಬದವರಿಗಾಗಿ ಆರೋಗ್ಯ ತಪಾಸಣಾ ಶಿಬಿರಗಳನ್ನು ಮುಂದುವರಿಸುವುದರ ಜೊತೆಗೆ, ವಿವಿಧ ಕಾಯಿಲೆಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಡಾ. ಮಹೇಶಮೂರ್ತಿ, ಡಾ. ಗೀತಾ ರವಿ, ಡಾ. ನಾಗಮಣಿ, ಡಾ. ಮಿಥುನ್ ಎನ್., ಡಾ. ಭರತ್, ಡಾ. ವಿದ್ಯಾ, ಡಾ. ಸಿಂಧೂರಶ್ಮಿ ಇದ್ದರು.