ಶಿವಮೊಗ್ಗ: ನಗರದ ಹೆಸರಾಂತ ಆರಾಧನಾ ಕ್ಷೇತ್ರವಾದ ಶ್ರೀ ಕೇದಿಗೆಮಂಡಿ ಚೌಡೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ನವರಾತ್ರಿಯ ಎರಡನೇ ದಿನದ ಅಂಗವಾಗಿ ಶ್ರೀ ಕೇದಿಗೆಮಂಡಿ ಚೌಡೇಶ್ವರಿ ಅಮ್ಮನವರಿಗೆ ಬ್ರಹ್ಮಚಾರಿಣಿ ದೇವಿಯ ರೂಪದಲ್ಲಿ ವಿಶೇಷ ಅಲಂಕಾರ ನೆರವೇರಿಸಲಾಗಿದ್ದು, ಬಿಳಿ ಬಣ್ಣದ ಅಲಂಕಾರದಲ್ಲಿ ದೇವಿಯು ಭಕ್ತರ ಕಣ್ಮನ ಸೆಳೆದರು.