ಶಿವಮೊಗ್ಗ,ಅ.09:
ನಗರದಲ್ಲಿ ೪೦೦ಕ್ಕೂ ಹೆಚ್ಚು ಶಾಲಾ ಮಕ್ಕಳ ಮತ್ತು ಕಾಲೇಜು ವಿದ್ಯಾರ್ಥಿಗಳ ಬಸ್ಸುಗಳು ಹಾಗೂ ೮೦ಕ್ಕೂ ಹೆಚ್ಚು ಸಿಟಿ ಬಸ್ಗಳು ಸಂಚಾರ ಮಾಡುತ್ತಿದ್ದು, ಅಲ್ಲಿನ ಚಾಲಕರಿಗೆ ಹಾಗೂ ಸಿಬ್ಬಂದಿಗಳಿಗೆ ಸರಿಯಾಗಿ ಪಾಠ ಹೇಳಿಕೊಡಿ ಎಂದು . ಚನ್ನಬಸಪ್ಪ ಒತ್ತಾಯಿಸಿದ್ದಾರೆ.

ನಗರದ ಮಕ್ಕಳು ಮತ್ತು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದವರು ವಿದ್ಯಾಭ್ಯಾಸಕ್ಕೆ ಶಿವಮೊಗ್ಗ ನಗರಕ್ಕೆ ಬರುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ, ಆದರೆ ಶಿವಮೊಗ್ಗದಲ್ಲಿ ಜನಸಂಖ್ಯೆ ದಿನ ಕಳೆದಂತೆ ಹೆಚ್ಚಾಗುತ್ತಿದೆ ಎಂದು ಅವರು ಆರ್.ಟಿ.ಓ.ಗೆ ಸಲ್ಲಿಸಿದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇತ್ತೀಚೆಗೆ ಸಾರ್ವಜನಿಕರು ಸಹ ಸಿಟಿ ಬಸ್ನಲ್ಲಿ ಹೆಚ್ಚಾಗಿ ಓಡಾಡುತ್ತಾರೆ. ಶಾಲಾ ಮತ್ತು ಕಾಲೇಜು ಬಸ್ಗಳ ಡ್ರೈವರ್ಗಳು ನಿಯಮ ಪಾಲಿಸುತ್ತಿಲ್ಲ. ೫೦ಕಿ.ಮೀ. ಗಿಂತ ಹೆಚ್ಚು ವೇಗವಾಗಿ ಬಸ್ ಚಲಾಯಿಸುತ್ತಿದ್ದಾರೆ. ಇವರಿಗೆ ಹೇಳುವವರು ಕೇಳುವವರೂ ಇಲ್ಲದಂತಾಗಿದೆ.

ಜೊತೆಗೆ ವಾಹನಗಳ ಸಂಚಾರ ಮಿತಿಮೀರಿದೆ ಆದ್ದರಿಂದ ಸಿಟಿ ಬಸ್ ನವರು ಮತ್ತು ಶಾಲಾ ಮಕ್ಕಳ ಮತ್ತು ಕಾಲೇಜು ಬಸ್ಗಳ ಚಾಲಕರು

ನಿಗದಿ ಪಡಿಸಿದ ಜಾಗದಲ್ಲಿ ನಿಲ್ಲಿಸದೆ ಮನಸಿಗೆ ಬಂದ ರೀತಿಯಲ್ಲಿ ಎಲ್ಲಿ ಬೇಕಾದರಲ್ಲಿ ವಾಹನಗಳನ್ನು ನಿಲ್ಲಿಸುತ್ತಾರೆ. ಇದರಿಂದ ಅಪಘಾತ ಹೆಚ್ಚಾಗುವ ಸಾಧ್ಯತೆ ಇದ್ದು, ಸಾರ್ವಜನಿಕರ ಮತ್ತು ಮಕ್ಕಳ ಹಿತದೃಷ್ಟಿಯಿಂದ ಬಸ್ ಮಾಲೀಕರುಗಳಿಗೆ ನೋಟಿಸ್ ನೀಡಿ ಸಂಬಂಧಪಟ್ಟ

ಇಲಾಖೆಯಿಂದ ಸುರಕ್ಷಿತ ನಿಯಮಗಳನ್ನು ಪಾಲಿಸಲು ವಾಹನ ಚಾಲಕರಿಗೆ ಮತ್ತು ಮಾಲೀಕರಿಗೆ ಎಚ್ಚರಿಕೆ ನೀಡಬೇಕೆಂದು ಶಿವಮೊಗ್ಗ ಆರ್ ಟಿ ಓ ಆಯುಕ್ತರಿಗೆ ಚನ್ನಬಸಪ್ಪ ಒತ್ತಾಯಿಸಿದ್ದಾರೆ.