
ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆಯ ನೌಕರರ ಸಂಘದ ಅಧ್ಯಕ್ಷರಾದ , ಯುಜಿಡಿ ವಿಭಾಗದ ಎನ್. ಗೋವಿಂದಣ್ಣ ಅವರಿಗೆ ರೆವೆನ್ಯೂ ಇನ್ಸ್ಪೆಕ್ಟರ್ ಹುದ್ದೆಗೆ ಬಡ್ತಿ ದೊರೆತಿದ್ದು, ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯ ಆಯುಕ್ತರಾದ ಮಾಯಣ್ಣಗೌಡರು ಅಭಿನಂದನೆ ಸಲ್ಲಿಸಿದ್ದಾರೆ.

ಪಾಲಿಕೆಯ ನೌಕರರ ಸಂಘದ ಅಧ್ಯಕ್ಷರಾಗಿ ಗುರುತಿಸಿಕೊಂಡಿರುವ ಗೋವಿಂದಣ್ಣ ಅವರಿಗೆ ಬಡ್ತಿ ದೊರೆತಿರುವುದು ಸಂತಸದ ಸಂಗತಿಯಾಗಿದೆ. ಅವರ ಮುಂದಿನ ವೃತ್ತಿಜೀವನ ಸುಗಮವಾಗಿರಲಿ ಹಾಗೂ ಹೊಸ ಹುದ್ದೆಯಲ್ಲಿ ಇನ್ನಷ್ಟು ಯಶಸ್ಸು ಗಳಿಸಲಿ ಎಂದು ಆಯುಕ್ತ ಮಾಯಣ್ಣಗೌಡರು ಶುಭ ಹಾರೈಸಿದರು.

ಹೊಸ ಜವಾಬ್ದಾರಿಯೊಂದಿಗೆ ಕಾರ್ಯನಿರ್ವಹಿಸಲಿರುವ ಗೋವಿಂದಣ್ಣ ಅವರು ಸಾರ್ವಜನಿಕರಿಗೆ ಉತ್ತಮ ಸೇವೆ ಸಲ್ಲಿಸುವುದರ ಜೊತೆಗೆ, ಇಲಾಖೆಯ ಕರ್ತವ್ಯಗಳನ್ನು ದಕ್ಷತೆ ಮತ್ತು ಜವಾಬ್ದಾರಿಯಿಂದ ನಿರ್ವಹಿಸಿ ಇನ್ನಷ್ಟು ಸಾಧನೆ ಮಾಡಲಿ ಎಂದು ಹಾರೈಸಿದರು.

ಗೋವಿಂದಣ್ಣ ಅವರಿಗೆ ಬಡ್ತಿ ದೊರೆತಿರುವುದು ಪಾಲಿಕೆಯ ವಲಯದಲ್ಲಿ ಸಂತಸ ಮೂಡಿಸಿದ್ದು, ಅವರ ಮುಂದಿನ ಸೇವಾ ಬದುಕಿಗೆ ಶುಭಾಶಯಗಳು ವ್ಯಕ್ತವಾಗಿವೆ.