filter: 0; fileterIntensity: 0.0; filterMask: 0; hdrForward: 0; highlight: false; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: -1;weatherinfo: null;temperature: 39;


ತುಂಗಾತರಂಗ ವರದಿ
ಶಿವಮೊಗ್ಗ,ಅ.03:
ಯಾವುದೇ ಹಿಂಬಾಗಿಲ “ಪವರ್” ಇಲ್ದಿದ್ದರೂ, ಪಕ್ಷಕ್ಕೆ ಸಲ್ಲಿಸಿದ ಸೇವೆ ಗಮನಿಸಿರುವ ಕಾಂಗ್ರೆಸ್ ಪಕ್ಷ ಸಿ.ಜಿ. ಮಧುಸೂಧನ್ ಅವರಿಗೆ ಶಿವಮೊಗ್ಗ ಭದ್ರಾವತಿ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು, ಇಂದು ಅಪಾರ ಬೆಂಬಲಿಗರು ಹಾಗೂ ಅಭಿಮಾನಿಗಳು ಮತ್ತು ಪಕ್ಷದ ಹಿರಿಯ ನಾಯಕರ ಜೊತೆ ಪಕ್ಷದ ಕಚೇರಿಯಿಂದ ಬೃಹತ್ ಮೆರವಣಿಗೆ ಮೂಲಕ ಸೂಡಾ ಕಚೇರಿಗೆ ಬಂದು ಅಧಿಕಾರ ಸ್ವೀಕರಿಸಿದರು.
ಜವಳಿ ನಿಗಮದ ಅಧ್ಯಕ್ಷ ಹಾಗೂ ಮಧುಸೂದನ್ ಅವರ ಆತ್ಮೀಯ ಸ್ನೇಹಿತ ಚೇತನ್ ಅವರ ನೇತೃತ್ವದಲ್ಲಿ ನಡೆದ ಬೃಹತ್ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯ ಕಾಂಗ್ರೆಸ್ ಪಕ್ಷದ ಯುವ ವಿಶೇಷವಾಗಿ ಎನ್ ಎಸ್ ಯು ಐ ಯುವ ತಂಡ ಮೆರವಣಿಗೆ ನಡೆಸಿತು.
ಇದನ್ನ ನೋಡಿ
https://youtube.com/shorts/2Qsbo-DolDQ?si=SGRwrhezDioqwoHN
ಶಿವಮೊಗ್ಗ ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿ ಮಧುಸೂದನ್ ಅಧಿಕಾರ ಸ್ವೀಕಾರ ಸಂಭ್ರಮ
ಹನಸವಾಡಿ ಮೂಲದ ಮಧುಸೂದನ್ ಶಿಕ್ಷಕಿ ಗಿರಿಜಮ್ಮ ಹಾಗೂ ಮೆಸ್ಕಾಂ ಉದ್ಯೋಗಿ ಗಂಗಾಧರಪ್ಪ ಅವರ ಸುಪುತ್ರ. ಕಳೆದ 25 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಮೂಲಕ ಸಕ್ರಿಯ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದು, ವಿದ್ಯಾರ್ಥಿ ಸಂಘಟನೆಗಳ ಮೂಲಕ ಪಕ್ಷವನ್ನು ಬಲಿಷ್ಠಗೊಳಿಸಿದ್ದು ಹಾಗೂ ಪಕ್ಷಕ್ಕಾಗಿ ಇರುವ ನಿಷ್ಠೆಯನ್ನು ಗಮನಿಸಿ ಕಾಂಗ್ರೆಸ್ ಪಕ್ಷದ ಪ್ರಮುಖರು ಮಧುಸೂದನ್ ಅವರಿಗೆ ಅತಿ ದೊಡ್ಡ ಜವಾಬ್ದಾರಿ ನೀಡಿರುವುದು ಪಕ್ಷದ ಪಾಳೆಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.
ಇಂದು ನಡೆದ ಸಮಾರಂಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಸಿ. ಯೋಗೀಶ್ ಪ್ರಮುಖರಾದ ಬಸವೇಶ್ ಸಂಗಮೇಶ್ ಆರ್. ಪ್ರಸನ್ನ ಕುಮಾರ್, ಇಸ್ಮಾಯಿಲ್ ಖಾನ್ ನೇತ್ರಾವತಿ, ಶೇಷಾದ್ರಿ, ಚೇತನ್ ಸೇರಿದಂತೆ ಅಪಾರ ಹಿರಿಯರು ಹಾಗೂ ಅಪಾರ ಯುವ ಪಡೆ ಪಾಲ್ಗೊಂಡಿತ್ತು.

ಮಧು ಅವರಿಗೆ ಶಿವಮೊಗ್ಗ ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿ ಒಂದಷ್ಟು ಜನ ಮೆಚ್ಚುಗೆಯ ಹಾಗೂ ಜನರ ನೆನಪಿನಲ್ಲಿ ಉಳಿಯುವಂತಹ ಕೆಲಸಗಳನ್ನು ಮಾಡಲಿ ಎಂದು ಪ್ರಮುಖರ ಹಾಗೂ ಹಿತೈಷಿಗಳ ಶುಭ ಹಾರೈಕೆಯಾಗಿದೆ.