ಶಿವಮೊಗ್ಗ,ನ.17:
ನಿಮ್ಮಿಬ್ಬರಿಗೆ ಗೌರವ, ಘನತೆ ಇದ್ದರೆ ನಿಮ್ಮಪ್ಪ ಯಾಕೆ ಜೈಲಿಗೆ ಹೋದರು ಅಂತ ಹೇಳಬೇಕು ಎಂದು ಸಚಿವ ಮಧು ಬಂಗಾರಪ್ಪ ಶಾಸಕ ಬಿ.ವೈ.ವಿಜಯೇಂದ್ರ ಹಾಗೂ ಸಂಸದ ಬಿ.ವೈ.ರಾಘವೇಂದ್ರರಿಗೆ ಸವಾಲು ಹಾಕಿದರು.
ಇಂದು ಪ್ರತಿಕಾಗೋಷ್ಠಿಯಲ್ಲಿ ಬಿ.ವೈ.ವಿಜಯೇಂದ್ರ, ಸಂಸದ ರಾಘವೇಂದ್ರ ಹಾಗೂ ಮಾಜಿ ಶಾಸಕ ಹರತಾಳು ಹಾಲಪ್ಪ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.

ಬಿ.ವೈ.ವಿಜಯೇಂದ್ರ ಕಾಂಗ್ರೆಸ್ನವರು ‘ಕಳ್ಳ ನನ್ನ ಮಕ್ಕಳು’ ಅಂತ ಕೀಳು ಮಟ್ಟದ ಭಾಷಣವನ್ನು ಧಾರ್ಮಿಕ ಕಾರ್ಯಕ್ರಮದಲ್ಲಿ ಮಾಡುತ್ತಾರೆ. ಇದೇ ಬಿಜೆಪಿಯ ಸಂಪ್ರದಾಯ. ಹೀಗೆಯೇ ಚುನಾವಣೆಯವರೆಗೂ ಇಂತಹ ಭಾಷಣ ಮಾಡುತ್ತಲೆ ಇರುತ್ತಾರೆ.

ಸೊರಬದ ದೇವರಾಜ ಎಂಬ ರೈತನ ಅಡಿಕೆ ತೋಟವನ್ನು ನಾಶವಾಗಿದೆ. ಇವರ ಬಸವರಾಜ ಬೊಮ್ಮಯಿ ಸರ್ಕಾರ ಹಕ್ಕುಪತ್ರ ನೀಡುವುದನ್ನು ರದ್ದು ಮಾಡಿದ್ದು, ಈಗ ಹಾಲಪ್ಪ ಮಾತನ್ನು ನಂಬಿಕೊಂಡು ರಾಜಕಾರಣ ಮಾಡಲು ಸಂಸದರು ಅಲ್ಲಿಗೆ ಹೋಗಿದ್ದಾರೆ. ಹಾಗಾದರೆ ತೋಟ ನಾಶವಾದಾಗ ರಾಘವೇಂದ್ರರವರು ಎಲ್ಲಿ ಹೋಗಿದ್ದರು?. ಫಸಲು ಮಾಡಿಲ್ಲ ಎಂದು ಕೋರ್ಟ್ಗೆ ಫೋಟೋ ಕಳಿಸಲು ಸಂಸದರ ಸಂಗಡಿಗರೆ ಇದನ್ನು ಮಾಡಿರಬೇಕು ಎಂದು ಕುಟುಕಿದರು.

ಚುನಾವಣೆ ಹತ್ತಿರ ಬಂದಾಗ ಇಂತಹ ರಾಜಕಾರಣ ಹೆಚ್ಚಾಗುತ್ತದೆ. ಬಿ.ವೈ.ರಾಘವೇಂದ್ರರು 4 ಬಾರಿ ಎಂಪಿ ಆಗಿದ್ದಾರೆ. ಮಾತನಾಡುವಾಗ ಜೆನ್ಯುನಿಟಿ ಇರಬೇಕು. ದಡ್ಡತನದಿಂದ ಮಾತನಾಡಬಾರದು. ಸಂಸದರು ಹಾಲಪ್ಪನಂತಹ ಶತದಡ್ಡನನ್ನು ನಂಬಿದ್ದಾರೆ. ಹಾವೇರಿಯಲ್ಲಿ ಗೊಬ್ಬರ ಕೇಳಿದ್ದಕ್ಕೆ ಯಡಿಯೂರಪ್ಪನವರು ರೈತರಿಗೆ ಗುಂಡು ಹೊಡೆಸಿರುವುದು ಮರೆತಿದ್ದಾರೆ. ಇವರಿಗೆ ರೈತರ ಶಾಲು ಹಾಕಲು ಯಾವ ಯೋಗ್ಯತೆಯೂ ಇಲ್ಲ ಎಂದರು.

ಬಿ.ವೈ. ವಿಜಯೇಂದ್ರ ಮತ್ತು ಬಿ.ವೈ.ರಾಘವೇಂದ್ರ ಈ ಇಬ್ಬರಿಗೂ ನಾವು ಶಿಕಾರಿಪುರದಲ್ಲಿ ಶಿಕಾರಿ ಮಾಡುತ್ತೇವೆಂದು ಭಯ ಭೀತರಾಗಿದ್ದಾರೆ. ಶಾಸಕ ಬಿ.ವೈ. ವಿಜಯೇಂದ್ರ ಶಿಕಾರಿಪುರಕ್ಕೆ ಇವರು ಬಂದು ರಾಜಕಾರಣ ಮಾಡ್ತಾರೆ ಅಂತ ಸದನದಲ್ಲಿ ಅಳ್ತಾರೆ. ಹಾಲಪ್ಪನೇ ಹೇಳ್ತಾರೆ ನಾನು ಮತ್ತು ಯಡಿಯೂರಪ್ಪ ಯಾಕೆ ಜೈಲಿಗೆ ಹೋದೆವೆಂದು. ಯಡಿಯೂರಪ್ಪ ಜೈಲಿಗೆ ಹೋಗಲು ಅವರ ಇಬ್ಬರು ಮಕ್ಕಳೆ ಕಾರಣ ಎಂದು ಆರೋಪಿಸಿದರು.
ಹರತಾಳು ಹಾಲಪ್ಪನವರ ವಿರುದ್ದ ಗುಡುಗಿದ ಸಚಿವರು, ಹಾಲಪ್ಪ ಒಂಥದ ಟೂರಿಂಗ್ ಟೆಂಟ್ ತರ ಎಲ್ಲಿ ಬೇಕಾದರೂ ಹಾಕ್ತಾರೆ. ಈಗ ಅದರೊಳಗೆ ಸಂಸದರು ಹೋಗಿದ್ದಾರೆ. ಇಷ್ಟು ವರ್ಷ ಜನರಿಗೆ ಸುಳ್ಳು ಹೇಳಿಕೊಂಡು ತಿರುಗಿದ್ದು, ಈಗ ಸಂಸದ ರಾಘವೇಂದ್ರ ಹತಾಶರಾಗಿದ್ದಾರೆ. ನಮ್ಮ ಮನೆಯಲ್ಲಿ ನೆಲವರಿಸುತ್ತಿದ್ದ ಹಾಲಪ್ಪನನ್ನು ಎಂಎಲ್ಎ ಮಾಡಿದವರು ನಾವು. ಈಗ ಹಾಲಪ್ಪ ಬಂಗಾರಪ್ಪನವರ ಫೋಟೋವನ್ನು ಮನೆಯಿಂದ ಆಚೆ ಹಾಕಿದ್ದಾರೆ. ಅದಕ್ಕೆ ಅವರ ಅಭಿಮಾನಿ ತಕ್ಕ ಉತ್ತರ ನೀಡಲಿದ್ದಾರೆ ಎಂದರು.