ಶಿವಮೊಗ್ಗ: ಈಗಿನ ಕೇಂದ್ರ ಚುನಾವಣಾ ಆಯೋಗ (ಸಿಇಸಿ) ಬಿಜೆಪಿ ಏಜಂಟ್ ಎಂದು ಕಾಂಗ್ರೆಸ್ ಟೀಕೆ ಮಾಡುವ ಮೊದಲು ಈ ಹಿಂದೆ ಈ ಚುನಾವಣಾ ಆಯೋಗವನ್ನು ಕಾಂಗ್ರೆಸ್ ಹೇಗೆ ನಿಯಂತ್ರಣದಲ್ಲಿಟ್ಟುಕೊAಡಿತ್ತು ಎಂಬ ಇತಿಹಾಸವನ್ನು ಅದು ಅರಿತುಕೊಳ್ಳದೆ ವಿನಾಕಾರಣ ಸಿಇಸಿ ಮೇಲೆ ಗೂಬೆ ಕೂರಿಸುವ ಯತ್ನ ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ತರಾಟೆಗೆ ತೆಗೆದುಕೊಂಡರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೇಶದ ಸುಮಾರು 24 ರಾಜ್ಯಗಳಲ್ಲಿ ಬಿಜೆಪಿ-ಮಿತ್ರ ಪಕ್ಷಗಳು ಅಧಿಕಾರದಲ್ಲಿವೆ. ಅದರಲ್ಲೂ 15 ರಾಜ್ಯಗಳಲ್ಲಿ ನೇರವಾಗಿ ಬಿಜೆಪಿ ಅಧಿಕಾರದಲ್ಲಿದ್ದು ಕಾಂಗ್ರೆಸ್ ಕೇವಲ 4-5 ರಾಜ್ಯಗಳಲ್ಲಿ ಮಾತ್ರ ಅಧಿಕಾರದಲ್ಲಿದೆ. ಇದನ್ನು ಕಾಂಗ್ರೆಸ್ ಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ ಎಂದ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ದೇಶದ ಸಾಂವಿಧಾನಿಕ ಸಂಸ್ಥೆಗಳ ಮೇಲೆ, ಮಾನ್ಯ ಸವೋಚ್ಛ ನ್ಯಾಯಾಲಯಗಳ ಮೇಲೆ ನಂಬಿಕೆ ಇಲ್ಲ. ವಿದೇಶಗಳಿಗೆ ಹೋಗಿ ಈ ಸಂಸ್ಥೆಗಳ ಗೌರವವನ್ನು ಬೀದಿಗೆ ತಂದು ಮಾನ ಹರಾಜಾಕುತ್ತಿದ್ದಾರೆ. ಈ ಸಂಸ್ಥೆಗಳ ಸ್ಥೆöÊರ್ಯವನ್ನು ಕುಗ್ಗಿಸುವ ವಿಪಲ ಯತ್ನ ಮಾಡುತ್ತಿದ್ದಾರೆ. ವಿನಾ ಕಾರಣ ಅವುಗಳ ಮೇಲೆ ತಪ್ಪು ಹೊರಿಸುವುದೇ ಕಾಂಗ್ರೆಸ್ ಕೆಲಸವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಈಗ ಕೇಂದ್ರ ಚುನಾವಣಾ ಆಯೋಗ (ಸಿಇಸಿ) ಎಸ್.ಐ.ಆರ್. ಪ್ರಕ್ರಿಯೆಯನ್ನು ಆರಂಭಿಸಿದೆ. ಅರ್ಹ ಮತದಾರರನ್ನು ಮತ ಪಟ್ಟಿಯಲ್ಲಿಡುವುದೇ ಇದರ ಉದ್ಧೇಶವಾಗಿದೆ. ಕೇಂದ್ರ ಸರ್ಕಾರದ ಯಾವುದೇ ಹಸ್ತಕ್ಷೇಪ ಇದರಲ್ಲಿ ಇಲ್ಲದಿದ್ದರೂ ಸಿಇಸಿ ಬಿಜೆಪಿಯ ಏಜಂಟ್ ಎಂದು ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ಈ ಹಿಂದೆ ಆಯೋಗದ ಮುಖ್ಯಸ್ಥರಾಗಿದ್ದ ಕೆ.ವಿ.ಕೆ.ಸುಂದರA ಅವರಿಗೆ ಕಾಂಗ್ರೆಸ್ ಪದ್ಮ ಭೂಷಣ ನೀಡಿದ್ದು, ಆರ್.ಕೆ.ತ್ರಿವೇದಿ ಅವರಿಗೆ ರಾಜ್ಯಸಭಾ ಸದಸ್ಯರನ್ನಾಗಿಸಿದ್ದು, ರಮಾದೇವಿ ಅವರನ್ನು ರಾಜ್ಯಪಾಲರನ್ನಾಗಿ ಮಾಡಿದ್ದು, ಟಿ.ಎನ್.ಶೇಷನ್ ಅವರನ್ನು ಕಾಂಗ್ರೆಸ್ ನಿಂದ ಸ್ಪರ್ಧೆಗಿಳಿಯುವಂತೆ ಮಾಡಿದ್ದು, ಎಂ.ಎಸ್.ಗಿಲ್ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದ್ದಲ್ಲದೆ ಅವರಿಗೆ ಸಚಿವ ಸ್ಥಾನ ನೀಡಿದ್ದು, ಜೆ.ಎಂ.ಲಿAಗ್ಡೋ ಅವರನ್ನು ಕಾಂಗ್ರೆಸ್ ಗೆ ಸೇರ್ಪಡೆಗೊಳಿಸಿಕೊಂಡಿದ್ದು, ಗೋಪಾಲಸ್ವಾಮಿ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ನೀಡಿದ್ದರ ಇತಿಹಾಸವೇ ಕಾಂಗ್ರೆಸ್ ಚುನಾವಣಾ ಆಯೋಗವನ್ನು ಹೇಗೆ ನಡೆಸಿಕೊಂಡಿತ್ತು ಎಂಬುದನ್ನು ತಿಳಿಸುತ್ತದೆ ಎಂದು ಕಿಡಿ ಕಾರಿದರು.

ಎಸ್.ಐ.ಆರ್.ಬಗ್ಗೆ ಕಾಂಗ್ರೆಸ್ ದೇಶಾದ್ಯಂತ ಸುಖಾಸುಮ್ಮನೆ ಅನುಮಾನ, ಗೊಂದಲ ಸೃಷ್ಟಿಸುತ್ತಿದೆ. ಎಸ್.ಐ.ಆರ್. ಮುಗಿದ ನಂತರವೇ ಪಶ್ವಿಮ ಬಂಗಾಳ, ಬಿಹಾರ್, ನೆರೆಯ ತಮಿಳುನಾಡು, ಕೇರಳದಲ್ಲಿ, ಚುನಾವಣೆಗಳು ನಡೆದಿವೆ. ಅಲ್ಲಿ ಕಾಂಗೆಸ್ ಅಧಿಕಾರಕ್ಕೆ ಬರಲೇ ಇಲ್ಲ. ಅಲ್ಲಿ ಇವರಿಗೆ ತೊಂದರೆ ಆಗಿಲ್ಲವೆ ಎಂದು ಪ್ರಶ್ನಿಸಿದ ಅವರು ಓಟ್ ಚೋರಿ ಎನ್ನುವ ಕಾಂಗ್ರೆಸ್ಸಿಗೆ ಜನರೇ ಚೋರ (ಕಾಂಗ್ರೆಸ್)ರಿಗೆ ಓಟ್ ಹಾಕಬಾರದು ಎಂದು ತೀರ್ಮಾನಿಸಿದ್ದಾರೆ.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಕಾರ್ಯದರ್ಶಿ ಹರಿಕೃಷ್ಣ, ಪ್ರಮುಖರಾದ ಸಿ.ಎಚ್.ಮಾಲತೇಶ್, ಎನ್.ಮಂಜುನಾಥ್, ಚಂದ್ರಶೇಖರ್ ಇದ್ದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರಿನಲ್ಲಿ ನಡೆದ ವೀರಶೈವ ಲಿಂಗಾಯತ ಮಠಾಧೀಶರ ಧರ್ಮಸಭೆಯಲ್ಲಿ ಅವಮಾನಕರ ಮಾತನ್ನಾಡಿದ್ದಾರೆ. ಅದನ್ನು ಬಲವಾಗಿ ಖಂಡಿಸುತ್ತೇನೆ. ಎಸ್.ಐ.ಆರ್.ಬಗ್ಗೆ ಕಾಂಗ್ರೆಸ್ ಆರೋಪ ಮಾಡುತ್ತಿದೆ. ಹಾಗಾದರೆ ಮರಣ ಹೊಂದಿದವರ ಹೆಸರನ್ನು ಮತಪಟ್ಟಿಯಿಂದ ತೆಗೆದುಹಾಕುವುದು ಬೇಡವಾ? ಸ್ಥಳಾಂತರಗೊAಡವರ ಹೆಸರನ್ನು ಸೇರಿಸುವುದು ಬೇಡವಾ? ಅರ್ಹ ಮತದಾರರನ್ನು ಪಟ್ಟಿಗೆ ಸೇರ್ಪಡೆಗೊಳಿಸುವುದು ಬೇಡವಾ? ವಿಶೇಷವಾಗಿ ವಿದೇಶಿಯರ, ನುಸುಳುಕೋರರ ಹೆಸರನ್ನು ಪಟ್ಟಿಯಿಂದ ಕೈಬಿಡುವುದು ಬೇಡವಾ? ಎಂಬುದನ್ನು ಕಾಂಗ್ರೆಸ್ ಸ್ಪಷ್ಟಪಡಿಸಬೇಕು.
—ಡಾ.ಧನಂಜಯ ಸರ್ಜಿ, ಶಾಸಕ
————–