ಹೃದಯದ ಆರೋಗ್ಯವೆಂದರೆ ಕೇವಲ ಒಂದು ಅಂಗದ ಆರೈಕೆಯಲ್ಲ, ಅದು ಒಂದು ಕುಟುಂಬದ ಭರವಸೆ, ಪ್ರೀತಿಪಾತ್ರರ ಬದುಕು ಮತ್ತು ಭವಿಷ್ಯದ ಕನಸುಗಳೊಂದಿಗೆ ಬೆಸೆದುಕೊಂಡಿರುವ ಮಹತ್ವದ ಜವಾಬ್ದಾರಿ. ಈ ಜವಾಬ್ದಾರಿಯನ್ನು ಸಮರ್ಪಣೆಯಿಂದ ನಿಭಾಯಿಸುತ್ತಿರುವ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಹೃದಯ ಚಿಕಿತ್ಸಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆಯನ್ನು ದಾಖಲಿಸಿದೆ.
ಡಿಸೆಂಬರ್ 31, 2012ರಂದು ಸೇವೆ ಆರಂಭಿಸಿದ ಆಸ್ಪತ್ರೆಯ ಕಾರ್ಡಿಯಾಲಜಿ ಮತ್ತು ಕಾರ್ಡಿಯಾಕ್ ಸರ್ಜರಿ ವಿಭಾಗಗಳು, ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನ, ಸುಸಜ್ಜಿತ ಮೂಲಸೌಕರ್ಯ ಹಾಗೂ ಅನುಭವಿ ವೈದ್ಯರ ತಂಡದ ನೆರವಿನಿಂದ ಸಾವಿರಾರು ಹೃದಯ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆಯನ್ನು ಒದಗಿಸಿವೆ.

30.000 ಕ್ಕೂ ಹೆಚ್ಚು ಆಂಜಿಯೋಗ್ರಾಮ್:
ಹೃದಯದ ರಕ್ತನಾಳಗಳಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ನಿಖರವಾಗಿ ಪತ್ತೆಹಚ್ಚುವಲ್ಲಿ ಆಂಜಿಯೋಗ್ರಾಮ್ ಪ್ರಮುಖ ಪಾತ್ರ ವಹಿಸುತ್ತದೆ. ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಇದುವರೆಗೆ 30,000ಕ್ಕೂ ಹೆಚ್ಚು ಕೊರೊನರಿ ಆಂಜಿಯೋಗ್ರಾಮ್ (CAG) ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ.

15,000ಕ್ಕೂ ಹೆಚ್ಚು ಆಂಜಿಯೋಪ್ಲಾಸ್ಟಿ ಚಿಕಿತ್ಸೆ:
ಹೃದಯದ ರಕ್ತನಾಳಗಳಲ್ಲಿ ಉಂಟಾಗುವ ಬ್ಲಾಕೇಜ್ಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯುವುದು ಅತ್ಯಂತ ಮುಖ್ಯ. ಆಸ್ಪತ್ರೆಯಲ್ಲಿ ಇದುವರೆಗೆ 15,000ಕ್ಕೂ ಹೆಚ್ಚು ಆಂಜಿಯೋಪ್ಲಾಸ್ಟಿ (PTCA/ಸ್ಟೆಂಟಿಂಗ್) ಪ್ರಕ್ರಿಯೆಗಳನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ.
ಇದರ ಜೊತೆಗೆ, ಹೃದಯದ ರಕ್ತನಾಳಗಳಲ್ಲಿನ ರಕ್ತಪ್ರವಾಹ ಮತ್ತು ಬ್ಲಾಕೇಜ್ನ ಪರಿಣಾಮವನ್ನು ಮೌಲ್ಯಮಾಪನ ಮಾಡಲು ಬಳಸುವ TAVI, PPI & Leadless Pacemaker ಸೇರಿದಂತೆ 5,000ಕ್ಕೂ ಹೆಚ್ಚು ಇತರೆ ಹೃದಯ ಸಂಬಂಧಿತ ಪ್ರಕ್ರಿಯೆಗಳನ್ನು ಕೈಗೊಳ್ಳಲಾಗಿದೆ.

3500ಕ್ಕೂ ಹೆಚ್ಚು ಹೃದಯ ಶಸ್ತ್ರಚಿಕಿತ್ಸೆಗಳು:ಕೇವಲ ಚಿಕಿತ್ಸೆಗಳಷ್ಟೇ ಅಲ್ಲದೆ, ಸಂಕೀರ್ಣ ಹೃದಯ ಸಮಸ್ಯೆಗಳಿಗೆ ಶಸ್ತ್ರಚಿಕಿತ್ಸಾ ಚಿಕಿತ್ಸೆಯಲ್ಲಿಯೂ ಆಸ್ಪತ್ರೆ ತನ್ನ ಪರಿಣತಿಯನ್ನು ತೋರಿಸಿದೆ. 3500ಕ್ಕೂ ಹೆಚ್ಚು ಕಾರ್ಡಿಯಾಕ್ ಸರ್ಜರಿಗಳನ್ನು (CTVS) ಯಶಸ್ವಿಯಾಗಿ ನೆರವೇರಿಸಿರುವುದು ಆಸ್ಪತ್ರೆಯ ಹೃದಯ ಚಿಕಿತ್ಸಾ ಸೇವೆಯ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ.

ಅತ್ಯಾಧುನಿಕ ಮೂಲಸೌಕರ್ಯ: ತ್ವರಿತ ಚಿಕಿತ್ಸೆಗೆ ಬಲ-
ಹೃದಯ ಚಿಕಿತ್ಸೆಯಲ್ಲಿ ಸಮಯ ಅತ್ಯಂತ ಅಮೂಲ್ಯ. ಇದನ್ನು ಗಮನದಲ್ಲಿಟ್ಟುಕೊಂಡು ಆಸ್ಪತ್ರೆಯಲ್ಲಿ 2 ಅತ್ಯಾಧುನಿಕ ಕ್ಯಾಥ್ ಲ್ಯಾಬ್ಗಳು ಕಾರ್ಯನಿರ್ವಹಿಸುತ್ತಿವೆ. ಹೃದಯ ಶಸ್ತ್ರಚಿಕಿತ್ಸೆಗಳಿಗೆ 2 ಪ್ರತ್ಯೇಕ ಕಾರ್ಡಿಯಾಕ್ ಸರ್ಜರಿ ಆಪರೇಷನ್ ಥಿಯೇಟರ್ಗಳು ಲಭ್ಯವಿವೆ.
ಇದಲ್ಲದೆ, ಹೃದಯ ರೋಗಿಗಳ ತೀವ್ರ ನಿಗಾ ಮತ್ತು ನಿರಂತರ ಮೇಲ್ವಿಚಾರಣೆಗಾಗಿ 15ಕ್ಕೂ ಹೆಚ್ಚು ಹೃದಯ ಚಿಕಿತ್ಸಾ CCU ಬೆಡ್ಗಳ ಸೌಲಭ್ಯವನ್ನು ಆಸ್ಪತ್ರೆ ಹೊಂದಿದೆ.

ಪರಿಣತಿಯೊಂದಿಗೆ ಬೆಸೆದ ಮಾನವೀಯ ಆರೈಕೆ:
ಈ ಸಾಧನೆಗಳ ಹಿಂದೆ ಅತ್ಯಾಧುನಿಕ ತಂತ್ರಜ್ಞಾನ ಮಾತ್ರವಲ್ಲ, ರೋಗಿಗಳ ಆರೋಗ್ಯಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿರುವ ಪರಿಣಿತ ವೈದ್ಯರ ತಂಡವಿದೆ.

ಕಾರ್ಡಿಯಾಲಜಿ ವಿಭಾಗದಲ್ಲಿ
ಡಾ. ಶ್ರೀವತ್ಸ ನಾಡಿಗ, ಡಾ. ಅಶ್ವಲ್ ಎ ಜೆ ಮತ್ತು ಡಾ. ಶರತ್ ಸಂಗನಗೌಡ ಅವರು ರೋಗಿಗಳ ಹೃದಯ ಆರೋಗ್ಯದ ಆರೈಕೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಕಾರ್ಡಿಯಾಕ್ ಸರ್ಜರಿ ವಿಭಾಗದಲ್ಲಿ
ಡಾ. ಬಾಲಸುಬ್ರಮಣಿ ಆರ್., ಡಾ. ವಿಕ್ರಮ್ ಎಂ ಜೆ ಮತ್ತು ಡಾ. ಅರುಣ್ ಕೆ ಆರ್ ಅವರು ಸಂಕೀರ್ಣ ಹೃದಯ ಶಸ್ತ್ರಚಿಕಿತ್ಸೆಗಳನ್ನು ಮುನ್ನಡೆಸುತ್ತಿದ್ದಾರೆ.

ಪ್ರತಿಯೊಂದು ಹೃದಯ ಬಡಿತದಲ್ಲೂ ಒಂದು ಭರವಸೆ:
ಹೃದಯ ಸಂಬಂಧಿತ ಸಮಸ್ಯೆ ಎದುರಾದಾಗ ರೋಗಿ ಮತ್ತು ಕುಟುಂಬಕ್ಕೆ ಅಗತ್ಯವಾಗಿರುವುದು ಕೇವಲ ಚಿಕಿತ್ಸೆ ಮಾತ್ರವಲ್ಲ ನಿಖರ ರೋಗ ನಿರ್ಣಯ, ಪರಿಣಿತ ವೈದ್ಯಕೀಯ ಮಾರ್ಗದರ್ಶನ, ಅತ್ಯಾಧುನಿಕ ಸೌಲಭ್ಯಗಳು ಮತ್ತು ಆತ್ಮವಿಶ್ವಾಸ ಮೂಡಿಸುವ ಆರೈಕೆ.
ಈ ಎಲ್ಲ ಅಂಶಗಳನ್ನು ಒಂದೇ ಸೂರಿನಡಿ ಒದಗಿಸುವ ಮೂಲಕ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹೃದಯ ಚಿಕಿತ್ಸಾ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ.
30,000+ ಆಂಜಿಯೋಗ್ರಾಮ್ | 15,000+ ಆಂಜಿಯೋಪ್ಲಾಸ್ಟಿಗಳು | 5,000+ ಇತರೆ ಹೃದಯ ಪ್ರಕ್ರಿಯೆಗಳು | 3,500+ ಕಾರ್ಡಿಯಾಕ್ ಸರ್ಜರಿಗಳು
ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ — ಹೃದಯದ ಆರೈಕೆಯಲ್ಲಿ ಪರಿಣತಿ, ತಂತ್ರಜ್ಞಾನ ಮತ್ತು ಭರವಸೆಯ ಸಮನ್ವಯ.
3000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ BLS ತರಬೇತಿ:
ಶಿವಮೊಗ್ಗ: ವಿಶ್ವ ಹೃದಯ ದಿನಾಚರಣೆ ಅಂಗವಾಗಿ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಶಿವಮೊಗ್ಗ ವತಿಯಿಂದ ಸೆ. 22ರಿಂದ 28ರವರೆಗೆ ನಗರದ ವಿವಿಧ ಪಿಯು ಹಾಗೂ ಪದವಿ ಕಾಲೇಜುಗಳ 3000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮೂಲಭೂತ ಜೀವ ರಕ್ಷಕ ಕೌಶಲ್ಯ (BLS) ತರಬೇತಿ ನೀಡಲಾಯಿತು.
ಆಸ್ಪತ್ರೆಯ ವೈದ್ಯರು ಹಾಗೂ ತರಬೇತಿ ತಂಡವು ವಿದ್ಯಾರ್ಥಿಗಳಿಗೆ ಹೃದಯಾಘಾತ, ಹೃದಯ ಸ್ತಂಭನ ಸೇರಿದಂತೆ ತುರ್ತು ಸಂದರ್ಭಗಳಲ್ಲಿ ಕೈಗೊಳ್ಳಬೇಕಾದ ಪ್ರಾಥಮಿಕ ಕ್ರಮಗಳ ಕುರಿತು ಆರೋಗ್ಯ ಜಾಗೃತಿ ಮಾತುಕತೆ ನಡೆಸಿದರು. ಬಳಿಕ BLS ತರಬೇತಿ ಮೂಲಕ ತುರ್ತು ಸಂದರ್ಭದಲ್ಲಿ ಜೀವ ಉಳಿಸುವ ಮೂಲಭೂತ ಕೌಶಲ್ಯಗಳನ್ನು ಪ್ರಾಯೋಗಿಕವಾಗಿ ಪರಿಚಯಿಸಲಾಯಿತು.
ಹೃದಯ ಸ್ತಂಭನ ಸಂಭವಿಸಿದ ಸಂದರ್ಭದಲ್ಲಿ ಸಕಾಲದಲ್ಲಿ CPR ಸೇರಿದಂತೆ ಸೂಕ್ತ ಪ್ರಥಮ ಚಿಕಿತ್ಸಾ ಕ್ರಮಗಳನ್ನು ಕೈಗೊಳ್ಳುವುದರಿಂದ ಜೀವ ಉಳಿಸುವ ಸಾಧ್ಯತೆ ಹೆಚ್ಚುತ್ತದೆ. ಯುವಜನರಲ್ಲಿ ಈ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.