ಶಿವಮೊಗ್ಗ,ಸೆ.29:
ಶಿವಮೊಗ್ಗ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಗೋಪಾಳದ ಶ್ರೀ ರಾಮಕೃಷ್ಣ ವಿದ್ಯಾನಿಕೇತನ

ಸಂಯುಕ್ತಾಶ್ರಯದಲ್ಲಿ ಅಕ್ಟೋಬರ್ ಮೂರರಂದು ಗೋಪಾಳದ ಕ್ರೀಡಾ ಸಂಕೀರ್ಣದಲ್ಲಿರುವ ಈಜುಕೊಳದಲ್ಲಿ “ಜಿಲ್ಲಾ ಮಟ್ಟದ ಈಜು ಸ್ಪರ್ಧೆ” ನಡೆಯಲಿದೆ.

14ವರ್ಷದೊಳಗಿನ ಹಾಗೂ 17 ವರ್ಷದೊಳಗಿನ ವಯೋಮಿತಿಯ ಎರಡೂ ವಿಭಾಗದ ಜಿಲ್ಲಾ ಮಟ್ಟದ ಈಜು ಸ್ಪರ್ಧೆ ನಡೆಯಲಿದೆ.

ಜಿಲ್ಲೆಯ ಎಲ್ಲಾ ತಾಲೂಕಿನ ಈಜು ಸ್ಪರ್ಧಾಳುಗಳು ಈಜು ಸಮವಸ್ತ್ರದಿಂದಿಗೆ ಟಿಪಿಓ ರವರ ಸಹಿಯ ಸಾಮರ್ಥ್ಯ ಪ್ರಮಾಣ (ಎಲಿಜಬಿಲಿಟಿ

ಸರ್ಟಿಪಿಕೇಟ್) ಪತ್ರದೊಂದಿಗೆ ಅಕ್ಟೋಬರ್ ಮೂರರ ಬೆಳಗ್ಗೆ ಒಂಬತ್ತು ಮೂವತ್ತಕ್ಕೆ ಸರಿಯಾಗಿ ಈಜುಕೊಳದ ಅಧಿಕಾರಿಗಳ ಬಳಿ ಹೆಸರು ನೊಂದಣಿ ಮಾಡಿಸಿಕೊಳ್ಳಲು ಸೂಚಿಸಲಾಗಿದೆ.