ಶಿವಮೊಗ್ಗ, ಜು.21:
ಶಿವಮೊಗ್ಗದ ಕೋಟೆ ರಸ್ತೆಯಲ್ಲಿರುವ ಕೋಟೆ ಆಂಜನೇಯ ಸ್ವಾಮಿ ದೇವಾಲಯಕ್ಕೆ ಇಂದು ಮುಜರಾಯಿ ಇಲಾಖೆ ಸಚಿವ ಕೋಟ‌ ಶ್ರೀನಿವಾಸ ಪೂಜಾರಿ ಮತ್ತು ಸಚಿವ ಈಶ್ವರಪ್ಪ ಭೇಟಿ ನೀಡಿದರು.
ಸೀತಾ ರಾಮ, ಆಂಜನೇಯ ಸ್ವಾಮಿ ದೇವರ ದರ್ಶನ ಪಡೆದ ಸಚಿವರಿಗೆ ಅರ್ಚಕರಿಂದ ಶಿವಮೊಗ್ಗದ ಹೆಸರು ಹೇಗೆ ಬಂತು ಎಂಬುದರ ಕುರಿತು ವಿವರಿಸಿದರು.ಈ ವೇಳೆ ಶಿವಮುಖ ಎಂದು ಶಿವಪ್ಪ ನಾಯಕನ ಹೆಸರಿಡಿ ಎಂದು ಕೋರಿದರು.
ಈ ಕುರಿತು ಸಚಿವ ಈಶ್ವರಪ್ಪನವರ ಬಳಿ ಮಾತನಾಡುವೆ ಎಂದು ತಿಳಿಸಿದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ನಂತರ ದೇವಸ್ಥಾನದ ಕಮಿಟಿಯೊಂದಿಗೆ ದೇವಸ್ಥಾನದ ಕುಂದುಕೊರತೆ ಕುರಿತು ಚರ್ಚಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು ಆಗಮ ವೇದ ಪಾಠಶಾಲೆಯ ಬೇಡಿಕೆ ಇದೆ. ಮಂಜೂರು ಮಾಡಲಾಗುವುದು.ಸೆಪ್ಟೆಂಬರ್ ತಿಂಗಳಲ್ಲಿ ಒಪ್ಪಿಗೆ ಈ ಬೇಡಿಕೆ ಈಡೇರಲಾಗುವುದು. ಕೋಟೆ ದೇವಸ್ಥಾನದ ಸಂಪೂರ್ಣ ಅಭಿವೃದ್ಧಿ ನಡೆಸಲಾಗುವುದು. ಯೋಜನೆ ರೂಪಿಸಿ ಸರ್ಕಾರಕ್ಕೆ ಕಳುಹಿಸಿದರೆ ಸರ್ಕಾರ ಒಪ್ಪಿಗೆ ನೀಡಲಿದೆ ಎಂದರು.
100 ದೇವಸ್ಥಾನದಲ್ಲಿ ಸಪ್ತಪದಿ ಕಾರ್ಯವನ್ನು ಪುನರ್ ಆರಂಭಿಸಲಾಗುವು. ಆಗಸ್ಟ್ ನಿಂದ ಡಿಸೆಂಬರ್ ವರೆಗೆ ಈ ಕಾರ್ಯಕ್ರಮ ನಡೆಯಲಿದ್ದು ವಧುವಿಗೆ ಮದುವೆಯಲ್ಲಿ 8 ಗ್ರಾಂ ಚಿನ್ನ 10 ಸಾವಿರ ಸೀರೆ, ಮಧುಮಗನ ಪರಿಕರ ನೀಡಲಾಗುವುದು. ಕೊರೋನ ತಿಂಗಳ ನಂತರ ಸಪ್ತಪದಿ ಯಶಸ್ವಿಯಾಗಿದೆ. ಧಾರ್ಮಿಕ ಪರಿಷತ್ ನವರು ಮೂಹೂರ್ತ ನಿಗದಿ ಪಡಿಸಿದರೆ ಒಪ್ಪಿಗೆನೀಡಲಾಗುವುದು ಎಂದರು.

By admin

ನಿಮ್ಮದೊಂದು ಉತ್ತರ

error: Content is protected !!