


ದಿಢೀರ್ ದಾಳಿ ನಡೆಸಿದ ಎಸಿ ಡಾ. ಮೈತ್ರಿ–ತಹಶೀಲ್ದಾರ್ ವಿ.ಎಸ್. ರಾಜೀವ್, ಲಿಂಗರಾಜ್ ತಂಡ
ಶಿವಮೊಗ್ಗ,ಸೆ.21:
ಅಡಿಕೆಗೆ ಅಕ್ರಮವಾಗಿ ಕೃತಕ ಬಣ್ಣ, ರಾಸಾಯನಿಕ ದ್ರವ್ಯ ಬೆರೆಸಿ ಸಂಸ್ಕರಣೆ ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬುಳ್ಳಾಪುರದಲ್ಲಿ ಶಿವಮೊಗ್ಗ ಉಪವಿಭಾಗಾಧಿಕಾರಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದು, ಕೆಲ ಮೋಸಗಾರ ಅಡಿಕೆ ಬೇಯಿಸುವವರಿಗೆ ಹಾಗೂ ಮಾಮೂಲಿ ಮೇದುಕೊಂಡಿದ್ದ ಅಧಿಕಾರಿ, ನೌಕರರನ್ನ ಬೆಚ್ಚಿಬೀಳಿಸಿದೆ.




ಶಿವಮೊಗ್ಗ ಉಪವಿಭಾಗಾಧಿಕಾರಿ ಡಾ. ಮೈತ್ರಿ ಹಾಗೂ ತಹಶೀಲ್ದಾರ್ ವಿ.ಎಸ್. ರಾಜೀವ್, ತಹಸಿಲ್ದಾರ್ ಲಿಂಗರಾಜ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಬುಳ್ಳಾಪುರದಲ್ಲಿರುವ ಅಡಿಕೆ ಸಂಸ್ಕರಣೆ ಹಾಗೂ ಸಂಗ್ರಹಣಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿತು. ಇದು ಆಗ ಗೊತ್ತಾದ ಆರ್ ಐ ಶರವಣ, ವಿ.ಎ. ಶ್ರೀಧರ ಮೂರ್ತಿ ಆಗ ಓಡೋಡಿ ಬಂದಿದ್ದಾರೆ ಎನ್ನಲಾಗಿದೆ.

ಅಡಿಕೆಗೆ ಬಣ್ಣ ಬೆರೆಸಲಾಗುತ್ತಿದೆ ಎಂಬ ಅರೋಪದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಸಂಗ್ರಹಿಸಿಟ್ಟಿದ್ದ ಅಡಿಕೆ, ಸಂಸ್ಕರಣೆಗೆ ಬಳಸುವ ವಸ್ತುಗಳು ಹಾಗೂ ಇತರೆ ಸಾಮಗ್ರಿಗಳ ಬಗ್ಗೆ ಅಧಿಕಾರಿಗಳು ಮಾಹಿತಿ ಪಡೆದುಕೊಂಡರು.

ಅಡಿಕೆಗೆ ಕೃತಕ ಬಣ್ಣ ಅಥವಾ ಗುಣಮಟ್ಟಕ್ಕೆ ಧಕ್ಕೆ ಉಂಟುಮಾಡುವ ಯಾವುದೇ ವಸ್ತುಗಳನ್ನು ಅಕ್ರಮವಾಗಿ ಬಳಸಲಾಗುತ್ತಿದೆಯೇ ಎಂಬುದರ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿದರು. ಸ್ಥಳದಲ್ಲಿದ್ದ ಅಡಿಕೆ ಮಾದರಿಗಳನ್ನು ಪರಿಶೀಲಿಸಿ, ಅಗತ್ಯವಿದ್ದಲ್ಲಿ ಸಂಬಂಧಿಸಿದ ಇಲಾಖೆಯ ಮೂಲಕ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸುವ ಸಾಧ್ಯತೆ ಇದೆ. ಇದು ಬುಳ್ಳಾಪುರದಲ್ಲಿ ಮಲ್ಲಿಕಾರ್ಜುನ ಎಂಬುವರ ಜಾಗದಲ್ಲಿ ಮಿಥುನ್ ಎಂಬಾತ ಅಡಿಕೆ ಬೇಯಿಸುವ ಗೋಡನ್ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ.
ಅಡಿಕೆ ಬೆಳೆಗಾರರು ತಮ್ಮ ಉತ್ಪನ್ನವನ್ನು ಗುಣಮಟ್ಟದೊಂದಿಗೆ ಮಾರುಕಟ್ಟೆಗೆ ತರುವ ಮೂಲಕ ಉತ್ತಮ ಬೆಲೆ ಪಡೆಯುವ ನಿರೀಕ್ಷೆಯಲ್ಲಿರುತ್ತಾರೆ. ಇಂತಹ ಸಂದರ್ಭದಲ್ಲಿ ಅಡಿಕೆಗೆ ಕೃತಕ ಬಣ್ಣ ಬೆರೆಸಿ ಅದರ ನೈಸರ್ಗಿಕ ಬಣ್ಣ ಹಾಗೂ ಗುಣಮಟ್ಟವನ್ನು ಬದಲಾಯಿಸುವ ಆರೋಪಗಳು ರೈತರು ಮತ್ತು ಗ್ರಾಹಕರಲ್ಲಿ ಆತಂಕಕ್ಕೆ ಕಾರಣವಾಗಿವೆ.
ಈ ಹಿನ್ನೆಲೆಯಲ್ಲಿ ಅಡಿಕೆ ಸಂಸ್ಕರಣೆ ಹಾಗೂ ವ್ಯಾಪಾರದಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗುತ್ತಿದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಿದರು. ಅಕ್ರಮ ಚಟುವಟಿಕೆ ಕಂಡುಬಂದಲ್ಲಿ ಸಂಬಂಧಿಸಿದ ನಿಯಮಗಳಡಿ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.
ದಾಳಿ ಸಂದರ್ಭದಲ್ಲಿ ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದು, ಸ್ಥಳದಲ್ಲಿನ ದಾಖಲೆಗಳು ಮತ್ತು ಚಟುವಟಿಕೆಗಳ ಕುರಿತು ಮಾಹಿತಿ ಸಂಗ್ರಹಿಸಿದರು.
ಅಧಿಕಾರಿಗಳ ದಿಢೀರ್ ದಾಳಿಯಿಂದ ಅಡಿಕೆ ಸಂಸ್ಕರಣೆ ಮತ್ತು ವ್ಯಾಪಾರ ವಲಯದಲ್ಲಿ ಚರ್ಚೆ ಆರಂಭವಾಗಿದ್ದು, ಪರಿಶೀಲನೆಯ ನಂತರದ ವರದಿ ಹಾಗೂ ಮಾದರಿ ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ.
ಎಸಿ ಮೇಮ್ ತಂಡದ ಅಡಿಕೆ ತಯಾರಿ ಸ್ಕೀಮ್ ಮೋಸ ದೊಡ್ಡಮಟ್ಟದಲ್ಲಿ ಹೊರಬೀಳುವ ಸಾದ್ಯತೆ ಇದೆ ಎನ್ನಲಾಗಿದೆ. ಮತ್ತಷ್ಟು ಹುಡುಕಾಟದಲ್ಲಿ ತುಂಗಾತರಂಗ ಸಕ್ರಿಯ
ತುಂಗಾತರಂಗ
9448256283, 93806 53545