ನೆಟ್ ವರ್ಕ್ ಸಮಸ್ಯೆಗೆ ಹೈರಾಣಾದ ಹಿನ್ನೀರ ಜನತೆ: ಸ್ಪಂದಿಸದ ಶಾಸಕರು…!?
‘
ಜಿಲ್ಲೆಯ ಸಾಗರ ತಾಲೂಕಿನ ನೂತನ ಜಿ. ಪಂ ಕ್ಷೇತ್ರವಾದ ಕುದರೂರಿನ ಆಕ್ಕ ಪಕ್ಕದ ಚನ್ನಗೊಂಡ. ಕಟ್ಟಿನಕಾರು. ಬಿಳಿಗಾರು.ಹಾಗೂ ತುಮರಿ ಗ್ರಾಮದ ಕಳೂರು.ಮಾರಲಗೋಡು.ಅರಬಳ್ಳಿ. ಬೇದರಕೊಪ್ಪ ಗ್ರಾಮದ ಹಲವು ಹಳ್ಳಿಗಳಲ್ಲಿ ನೆಟ್ ವರ್ಕ್ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಕಳೆದೆರಡು ವರ್ಷಗಳಿಂದ ನೆಟ್ ವರ್ಕ್ ಸಮಸ್ಯೆ ಬಗ್ಗೆ ಗ್ರಾಮಸ್ಥರು ಶಾಸಕರು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಯಾವುದೇ ಸ್ಪಷ್ಟವಾದ ಆಶಾದಾಯಕ ಬೆಳವಣಿಗೆ ಆಳುವ ವರ್ಗದಿಂದ ಬಂದಿಲ್ಲ ಹೀಗಾಗಿ ಈಗಾಗಲೇ ಹಲವು ತಿಂಗಳುಗಳಿಂದ ಹೊರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು ಯುವಕರ ಪಡೆಯೊಂದಿಗೆ ತೀವ್ರವಾಗಿ ಕಾಡುತ್ತಿರುವ ನೆಟ್ ವರ್ಕ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹೋರಾಟ ಆರಂಭಿಸಿದ್ದಾರೆ.
ಪ್ರಮುಖವಾಗಿ ನೆಟ್ ವರ್ಕ್ ಸಮಸ್ಯೆವಯಿಂದ ಸರ್ಕಾರದ ಆನ್ ಲೈನ್ ಶಿಕ್ಷಣ ಹಾಗೂ ಹಲವಾರು ಸ್ವರ್ಧಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಈ ಭಾಗದ ವಿದ್ಯಾರ್ಥಿಗಳಿಗೆ ಆನಾನುಕೂಲವಾಗುತ್ತಿದ್ದು ಅಲ್ಲದೆ ಪಡಿತರರ ವಿತರಣೆ ಸಕಾಲಕ್ಕೆ ಸರಿಯಾಗಿ ಸಿಗುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪ. ಹೀಗಾಗಿ ನೂತನ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು. ರಾಜಕುಮಾರ.ಗೌತಮ್. ಉದಯ್. ಎಂಬವವರು ನೇತೃತ್ವದಲ್ಲಿ ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ “ನೋ ನೆಟ್ ವರ್ಕ್ ನೋ ವೋಟಿಂಗ್” ಅಭಿಯಾನದ ಮೂಲಕ ಸಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದ್ದು ಇನ್ನಾದರೂ ಸ್ಥಳೀಯ ಶಾಸಕರಾಗಲಿ ಅಥವಾ ತಾಲೂಕು ಆಡಳಿತ ಈ ಬಗ್ಗೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಮಾಣಿಕ ಪ್ರಯತ್ನ ಮಾಡಬೇಕು ಎಂಬುದು ಈ ಭಾಗದ ಜನರ ಒತ್ತಾಸೆಯಾಗಿದೆ