Shivamogga Rain


ಶಿವಮೊಗ್ಗ : ಜಿಲ್ಲೆಯಲ್ಲಿ ಇಂದು ಬೆಳಗಿನ ಜಾವ 5ರ ಹೊತ್ತಿಗೆ ಶುರುವಾದ ಮಳೆ 8.30ರ ವರೆಗೆ ಎಲ್ಲಿಯೂ ವಿರಾಮ ನೀಡದೇ ಅಬ್ಬರಿಸಿದೆ.
ಇಂದು ಬೆಳಗ್ಗೆ ಸುರಿದ ಮಳೆಗೆ ಪತ್ರಿಕೆ ಹಂಚುವವರಿಗೆ ಹಾಗೂ ಹಾಲು ವಿತರಿಸುವವರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೆಲವರು ಮಳೆಯಲ್ಲಿ ಪತ್ರಿಕೆ ಹಾಗೂ ಹಾಲನ್ನು ವಿತರಿಸುತ್ತಿದ್ದ ದೃಶ್ಯಗಳು ಸಹ ಕಂಡು ಬಂದವು.

ಅಬ್ಬರದ ಮಳೆ 8.45ರ ಹೊತ್ತಿಗೆ ಸ್ವಲ್ಪ ವಿರಾಮ ನೀಡಿತ್ತು. ಆದರೆ ಮತ್ತೆ ಮಳೆರಾಯ ಅಬ್ಬರಿಸುತ್ತಿದ್ದಾನೆ. ಸೊರಬ, ಭದ್ರಾವತಿ, ಸಾಗರ, ತೀರ್ಥಹಳ್ಳಿ ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿರುವ ವರದಿಗಳು ಸಹ ದಾಖಲಾಗಿದೆ.

ನಿನ್ನೆ ವಿರಾಮ ನೀಡಿದ್ದ ಮಳೆ ಇಂದು ಅಬ್ಬರದ ಮಳೆಗೆ ಹಳ್ಳ ಕೊಳ್ಳಗಳಲ್ಲಿ ನದಿಗಳಲ್ಲಿ , ಜಲಾಶಯಗಳಲ್ಲಿ ನಿರೀನ ಒಳ ಹರಿವಿನ ಪ್ರಮಾಣ ಜಾಸ್ತಿಯಾಗಿದೆ.

ಹಾಗೇಯೆ ಜೋಗ ಜಲಪಾತದಲ್ಲಿ ಜಲಪಾತವೇ ಕಾಣದ ರೀತಿ ಮಂಜು ದಟ್ಟವಾಗಿತ್ತು…

By admin

ನಿಮ್ಮದೊಂದು ಉತ್ತರ

error: Content is protected !!