ಶಿಕಾರಿಪುರ: ನಾಳಿನ ಶ್ರೀಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಶಿಕಾರಿಪುರದ ಪರಶುರಾಮ್ ಹಾಗೂ ಸುವರ್ಣ ದಂಪತಿಗಳ ಪುತ್ರಿಯರಾದ ಅಪ್ಸರಾ ಮತ್ತು ಅನ್ವಿತಾ ರಾಧೆಯ ವೇಷ ಧರಿಸಿ ಸಂಭ್ರಮಿಸಿದರು.

ಬಣ್ಣಬಣ್ಣದ ಸಾಂಪ್ರದಾಯಿಕ ಉಡುಗೆ, ಆಭರಣ ಹಾಗೂ ಅಲಂಕಾರದಲ್ಲಿ ಕಂಗೊಳಿಸಿದ ಪುಟಾಣಿ ಬಾಲಕಿಯರು ರಾಧೆಯ ವೇಷದಲ್ಲಿ ಎಲ್ಲರ ಗಮನ ಸೆಳೆದರು

ಶ್ರೀಕೃಷ್ಣನ ಬಾಲಲೀಲೆ ಹಾಗೂ ರಾಧಾ-ಕೃಷ್ಣರ ಪ್ರೀತಿಯ ಸಂಕೇತವಾಗಿ ಮಕ್ಕಳು ರಾಧೆಯ ವೇಷ ತೊಟ್ಟು ಜನ್ಮಾಷ್ಟಮಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದರು.