
ಶಿವಮೊಗ್ಗ,ಸೆ.3; ಶಿವಮೊಗ್ಗ ನಗರದಲ್ಲಿ ಬಿಜೆಪಿಯನ್ನು ಸೋಲಿಸಲು ಜೆಡಿಎಸ್, ಕಾಂಗ್ರೆಸ್ ನಂತಹ ಪಕ್ಷಗಳಿಂದಲೇ ಆಗಲಿಲ್ಲ. ಈಗ ಅಂತಹ ದುಸ್ಸಾಹಕ್ಕೆ ರಾಷ್ಟ್ರಭಕ್ತ ಬಳಗ ಕೈ ಹಾಕುತ್ತಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ವ್ಯಂಗ್ಯವಾಡಿದರು.
ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಾಮಾಜಿಕ ಜವಾಬ್ದಾರಿ ನಿರ್ವಹಿಸಲು ಹಾಗೂ ಹಿಂದೂತ್ವ ಕೆಲಸ ಮಾಡಲು ರೂಪಗೊಂಡಿದ್ದ ರಾಷ್ಟ್ರಭಕ್ತರ ಬಳಗ ಇವತ್ತು ರಾಜಕೀಯ ಮಾಡಲು ಮುಂದಾಗಿದೆ.

ರಾಷ್ಟ್ರಭಕ್ತ ಬಳಗ ಸ್ಥಾಪನೆಗೊಂಡಿದ್ದು ಒಂದು ಒಳ್ಳೆ ಉದ್ದೇಶಕೋಸ್ಕರ. ಸದನದಲ್ಲಿ ಈಶ್ವರಪ್ಪನವರನ್ನು ದೇಶದ್ರೋಹಿ ಎಂದು ಕರೆದ ಹಿನ್ನೆಲೆಯಲ್ಲಿ ಅದರ ವಿರುದ್ದ ಪ್ರತಿಭಟನಾ ರೂಪವಾಗಿ ಈ ಬಳಗ ಹುಟ್ಟಿಕೊಂಡಿತ್ತು. ಆದರೆ ಈಗ ರಾಜಕೀಯವಾಗಿ ದುರಪಯೋಗವಾಗುತ್ತಿದೆ. ದೇಶವನ್ನು ಕಟ್ಟುವಲ್ಲಿ ಶ್ರಮಿಸುತ್ತಿರುವ ಪಕ್ಷವನ್ನು ಸೋಲಿಸುವ ಹುನ್ನಾರದಲ್ಲಿ ರೂಪಗೊಳ್ಳುತ್ತಿದೆ. ಇದು ನೋವಿನ ಸಂಗತಿಯಾಗಿದೆ ಎಂದರು.

ಬಿಜೆಪಿ ಕಾರ್ಯಕರ್ತರೇ ರಾಷ್ಟ್ರಭಕ್ತ ಬಳಗದಲ್ಲಿರುವುದು. ಆ ಕಾರ್ಯಕರ್ತರ ಭಾವನೆಯನ್ನು ಅರಿತುಕೊಳ್ಳದೆ ಕೆ.ಎಸ್.ಈಶ್ವರಪ್ಪನವರು ಮಾತನಾಡುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರಿಂದ ರೂಪಗೊಂಡಿರುವ ಪಕ್ಷ. ಹಿಂದುತ್ವಕ್ಕೆ ಹಿಂದುತ್ವದ ಬದುಕಿಗೋಸ್ಕರ ಇರುವ ಪಕ್ಷ. 2028 ರ ಚುನಾವಣೆ ನಿಲ್ಲುವುದು ನಿಶ್ಚಿತ ಎನ್ನುತ್ತಿದ್ದಿರಾ ನಿಲ್ಲಿ ಬೇಡ ಅನ್ನುವುದಿಲ್ಲ. ಆದರೆ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸಬೇಡಿ. ಆದರೆ ಚುನಾವಣೆ ನೆಪದಲ್ಲಿ ರಾಷ್ಟ್ರಭಕ್ತ ಬಳಗವನ್ನು ದುರುಪಯೋಗ ಮಾಡಿಕೊಳ್ಳುವ ಮೂಲಕ ಬಿಜೆಪಿ ದುಸ್ತಿರಕ್ಕೆ ಕೈ ಹಾಕುತ್ತಿದ್ದಿರಾ. ಇದನ್ನು ನಾನು ನಿರೀಕ್ಷಿಸಿರಲಿಲ್ಲ. ಇದಕ್ಕೆ ಕಾರ್ಯಕರ್ತರು ಸುಮ್ಮನಿರುವುದಿಲ್ಲ. ನಿಮ್ಮನ್ನು ತಲೆಯ ಮೇಲೆ ಹೊತ್ತು ಮುಂದೆ ತಂದವರು ಬಿಜೆಪಿ ಕಾರ್ಯಕರ್ತರು ಎಂದು ಕಿಡಿಕಾರಿದರು.

ಬಿಜೆಪಿಯಲ್ಲಿ ವ್ಯವಸ್ಥೆ ಸರಿಯಿಲ್ಲವೆಂದರೆ ನಮ್ಮ ನಾಯಕರು ಸರಿ ಮಾಡುತ್ತಾರೆ. ಅಂತಹ ನಾಯಕತ್ವ ನಮ್ಮಲ್ಲಿದೆ. ಇದು ಕಾರ್ಯರ್ತರು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಬೆಳೆಸಿರುವ ಪಕ್ಷ. ಹಾಗಾಗಿ ಬಿಜೆಪಿಯ ಗುಣಮಟ್ಟ ಗಟ್ಟಿಯಾಗಿ ಬೇರೂರಿದೆ. ಯಾವ ಪಕ್ಷ ಇದನ್ನು ಚಿದ್ರ ಮಾಡುವ ಕೆಲಸ ಮಾಡಿದರು ಅದು ನಡೆಯುವುದಿಲ್ಲ. ಇದು ಸೋಲನ್ನು ನೋಡಲು ಇಷ್ಟ ಪಡದ ಪಕ್ಷ. ಬಿಜೆಪಿಯನ್ನ ಸೋಲಿಸಲು ಕಾಂಗ್ರೆಸ್ಯಿಂದಾನೆ ಆಗಿಲ್ಲ. ಇನ್ನು ನಿಮ್ಮಿಂದ ಆಗುತ್ತೆದೆಯಾ ಎಂದು ಟೀಕಿಸಿದರು.
ಇತ್ತೀಚಿನ ರಾಜಕೀಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ವೈಚಾರಿಕ ಸಂಘರ್ಷ ನಡೆಯುತ್ತಿದೆ. ಆದರೆ ಸದಾ ಹಿಂದುತ್ವ ಎನ್ನುವ ನೀವೇ ಹಿಂದುತ್ವಕ್ಕೆ ಕೊಡಲಿ ಪೆಟ್ಟು ಹಾಕುತ್ತಿದ್ದಿರಾ. ಬಿಜೆಪಿ ಪಕ್ಷ ಸೇರ್ಪಡೆಗೆ ನಾಯಕರಿಂದ ಕರೆ ಬಂದಿದೆ ಎನ್ನುತ್ತಿರಾ, ಇತ್ತ ಮಗನನ್ನು ಬಿಜೆಪಿ ವಿರುದ್ದ ಚುನಾವಣೆ ನಿಲ್ಲಿತ್ತೇನೆ ಎನ್ನುತ್ತಿರಾ. ರಾಜಕೀಯವಾಗಿ ಪಕ್ಷಕ್ಕೆ ಬುದ್ದಿ ಕಲಿಸುವ ಯೋಚನೆ ಮಾಡುತ್ತಿದ್ದೀರಾ. ಇದನ್ನು ಕಾರ್ಯಕರ್ತನಾಗಿ ನಾನು ಸಮರ್ಥವಾಗಿ ಎದುರಿಸುತ್ತೇನೆ. ಬಿಜೆಪಿ ಯಾವುದೇ ಆತಂಕ ಇಲ್ಲ. ಆದರೆ ನಿಮ್ಮ ನಡೆ ಮತು ನುಡಿಗೂ ವ್ಯತ್ಯಾಸವಿದೆ ಎಂದು ಕುಟುಕಿದರು.
ಪಕ್ಷಕ್ಕೆ ಅವರನ್ನು ಮತ್ತೇ ಸೇರ್ಪಡೆ ಮಾಡಿಕೊಳ್ಳಲು ಬಿಜೆಪಿಯ ಹಿರಿಯ ನಾಯಕರು ಕರೆದಿರುವ ಕುರಿತು ನನಗೆ ಮಾಹಿತಿ ಇಲ್ಲ. ಆದರೆ ಅವರು ಬರುವ ನಿರೀಕ್ಷೆಯಲ್ಲಿ ಕಾರ್ಯಕರ್ತರು ಕಾಯುತ್ತಿದ್ದೇವೆ. ಅವರ ಬಿಜೆಪಿಗೆ ಮತ್ತೇ ಬಂದರೆ ತಲೆ ಮೇಲೆ ಹೊತ್ತು ತಿರುಗುತ್ತೇವೆ. ನಮಗೆ ಪಕ್ಷದ ನಿಲುವೆ ಮುಖ್ಯ, ಉಳಿದ ಸಂಗತಿ ನಶ್ವರ. ಪಕ್ಷ ನಿಮಗೆ ಚುನಾವಣೆಗೆ ಟಿಕೆಟ್ ನೀಡದರೆ ಚೆನ್ನಿ ಏನು ತೊಂದರೆ ಇಲ್ಲ. ಆದರೆ ಪಕ್ಷದ ಭದ್ರ ಬುನಾದಿಯನ್ನು ಅಲುಗಾಡಲು ಬೀಡುವುದಿಲ್ಲ. ರಾಷ್ಟ್ರೀಯ ಪಕ್ಷದಲ್ಲಿ ಏಕಾಪಾಪ್ರಾಭಿನಯ ಮಾಡಲು ಆಗುವುದಿಲ್ಲ ಎಂದರು.
ಬಿಜೆಪಿ ಶುದ್ದಿಕರಣ ಕುರಿತು ಪ್ರತಿಕ್ರಿಯಿಸಿ, ಕೆ.ಎಸ್.ಈಶ್ವರಪ್ಪನವರು ಶುದ್ದಿಕರಣವನ್ನು ಮನೆಯೊಳಗೆ ಇದ್ದುಕೊಂಡೆ ಮಾಡಬೇಕು. ಅದಕ್ಕೆ ಕೈ ಜೋಡಿಸಬೇಕು ಎಂದರು.
2028ರಲ್ಲಿ ನಡೆಯುವ ಚುನಾವಣೆ ಬಿಜೆಪಿಯ ಚುನಾವಣೆ. ಕಾಂಗ್ರೆಸ್ಸೊ ಅಥವಾ ಬಿಜೆಪಿಯೋ ನೋಡೆ ಬಿಡೋಣ ಶಿವಮೊಗ್ಗದಲ್ಲಿ ಬಿಜೆಪಿಯಲ್ಲಿ ಭದ್ರವಾಗಿ ಬೇರೂದಿದೆ. ಹಿಂದುತ್ವವೂ ಬೇರೂರಿದೆ ಎಂದರು.
ಈ ಸಂದರ್ಭದಲ್ಲಿ ಅನೇಕರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
=