ಶಿವಮೊಗ್ಗ,ಆ.28:
ನಗರದ ಪುಷ್ಪ ಪರ್ಫಾಮಿಂಗ್ ಆರ್ಟ್ಸ್ ಸೆಂಟರ್ ಆಯೋಜನೆಯಲ್ಲಿ ಕಲಾಪ್ರೇಮಿಗಳಿಗೆ ಮುದನೀಡುವ ಎರಡು ವಿಶೇಷ ನೃತ್ಯ ಕಾರ್ಯಕ್ರಮಗಳು ಆ. 30ರ ಭಾನುವಾರದಂದು ವಿಜೃಂಭಣೆಯಿಂದ ಜರುಗಲಿವೆ.

ಅಂದು ಬೆಳಿಗ್ಗೆ 8:30 ರಿಂದ ಶಿವಮೊಗ್ಗದ ವಿಜಯನಗರದಲ್ಲಿನ ಪುಷ್ಪಾಂಜಲಿ ಸಭಾಂಗಣದಲ್ಲಿ ನೃತ್ಯಾರ್ಚನೆ-2026 ಶಾಸ್ತ್ರೀಯ ನೃತ್ಯ ಕಾರ್ಯಕ್ರಮವು ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಶಿವಮೊಗ್ಗದ ವಿ.ದುಶ್ಯಂತ್ ಎಸ್., ಸುಷ್ಮಾ ಶ್ರೀಧರ್ ಹಾಗೂ ತುಮಕೂರಿನ
ವಿ.ನಳಿನಕುಮಾರಿ ಭಾಗವಹಿಸಲಿದ್ದಾರೆ. ಕರ್ನಾಟಕ ಕಲಾಶ್ರೀ ಸಂಸ್ಥೆಯ ಪ್ರಾಚಾರ್ಯೆ ವಿ. ಪುಷ್ಪ ಕೃಷ್ಣಮೂರ್ತಿ ಉಪಸ್ಥಿತರಿರಲಿದ್ದಾರೆ. . ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ (ನವದೆಹಲಿ) ಹಾಗೂ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ (ಬೆಂಗಳೂರು) ಸಹಕಾರದೊಂದಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಅಂದು ಸಂಜೆ 4:00 ಗಂಟೆಗೆ ಸರಿಯಾಗಿ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಜನಪದ ನೃತ್ಯ ಕಲಾ ಉತ್ಸವ-2026 ಕಾರ್ಯಕ್ರಮವು ಅದ್ದೂರಿಯಾಗಿ ಜರುಗಲಿದೆ. ಈ ವೇದಿಕೆಯಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಿಂದ ವೈವಿಧ್ಯಮಯವಾದ ಭಾರತೀಯ ಜನಪದ ನೃತ್ಯ ಪ್ರದರ್ಶನವು ಪ್ರೇಕ್ಷಕರನ್ನು ಮಂತ್ರ ಮುಗ್ಧಗೊಳಿಸಲಿದೆ.

ಮುಖ್ಯ ಅತಿಥಿಗಳಾಗಿ ರಂಗಭೂಮಿ, ಭರತನಾಟ್ಯ, ಕಂಠದಾನ, ಕಿರುತೆರೆ ಹಾಗೂ ಬೆಳ್ಳಿತೆರೆಯ ಪ್ರತಿಷ್ಠಿತ ಕಲಾವಿದರಾದ ಬೆಂಗಳೂರಿನ ವಿ. ಭಾರದ್ವಾಜ್ ದಯಾನಿಧಿ ಆಗಮಿಸಲಿದ್ದಾರೆ. ಕರ್ನಾಟಕ ಕಲಾಶ್ರೀ ವಿ. ಪುಷ್ಪಕೃಷ್ಣಮೂರ್ತಿ ಅವರ ಉಪಸ್ಥಿತಿಯಲ್ಲಿ ನಡೆಯಲಿರುವ ಈ ಜನಪದ ಸಂಭ್ರಮಕ್ಕೆ ಕಲಾಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸುವಂತೆ ಕು.ಅಕ್ಷಿತ ವಿ. ಹಾಗೂ ಗುರು ಯೋಗೇಶ್ ಎನ್. ಹಾಗೂ ಶಿಷ್ಯವೃಂದದವರು ಕಲಾಭಿಮಾನಿಗಳನ್ನು ಕೋರಿದ್ದಾರೆ.