ಶಿವಮೊಗ್ಗ,ಆ.28:
ಶಿವಮೊಗ್ಗ ಸಿಟಿ ಕೋ-ಆಪರೇಟಿವ್ ಬ್ಯಾಂಕ್ 2025-26 ನೇ ಸಾಲಿನಲ್ಲಿ 66.73 ಲಕ್ಷ ರೂ ನಿವ್ವಳ ಲಾಭ ಗಳಿಸಿದ್ದು. ಸದರಿ ಸಾಲಿಗೆ ಶೇ.10% ಡಿವಿಡೆಂಡ್ ಹಂಚಿಕೆ ಮಾಡಲು ದಿನಾಂಕ :09-08-2026 ರಂದು ನಡೆದ 2025-26 114 ಮಹಾ ಸಭೆಯಲ್ಲಿ ಒಪ್ಪಿಗೆಯಾಗಿರುತ್ತದೆ.

ಆದುದರಿಂದ ದಿನಾಂಕ 01-09-2026 ರಿಂದ ಮಾನ್ಯ ಸದಸ್ಯರುಗಳು ಬ್ಯಾಂಕಿನ ವ್ಯವಹಾರದ ವೇಳೆಯಲ್ಲಿ ಡಿವಿಡೆಂಡ್ ಪಡೆಯಬಹುದೆಂದು ಆಡಳಿತ ಮಂಡಳಿಯ ಪರವಾಗಿ ಬ್ಯಾಂಕಿನ ಅಧ್ಯಕ್ಷರಾದ ಕೆ ರಂಗನಾಥ್ ರವರು ತಿಳಿಸಿರುತ್ತಾರೆ.

ಡಿವಿಡೆಂಡ್ ಪಡೆಯುವ ಸದಸ್ಯರು ಕಡ್ಡಾಯವಾಗಿ ಬ್ಯಾಂಕಿನ ಪಾಸ್ಬುಕ್/ ಬ್ಯಾಂಕಿನ ಗುರುತಿನ ಚೀಟಿಯನ್ನು ಹಾಜರುಪಡಿಸತಕ್ಕದ್ದು. ಕೆ.ವೈ.ಸಿ. ನೀಡದ ಸದಸ್ಯರುಗಳು ತಪ್ಪದೇ ಆಧಾರ್ಕಾರ್ಡ್. ಪಾನ್ ಕಾರ್ಡ್ ಸಲ್ಲಿಸಲು ಈ ಮೂಲಕ ಕೋರಿದೆ. ಉಳಿತಾಯ ಖಾತೆಯನ್ನು ನಿರ್ವಹಿಸಲು

ಪಾನ್ ಕಾರ್ಡ್ ಕೂಡಾ ಕಡ್ಡಾಯವಾಗಿರುತ್ತದೆ. ಮಾನ್ಯ ಸದಸ್ಯರು ತಮ್ಮ ವಿಳಾಸ/ ದೂರವಾಣಿ ಸಂಖ್ಯೆ ಬದಲಾವಣೆ ಆಗಿದ್ದಲ್ಲಿ ಬ್ಯಾಂಕಿಗೆ ಅರ್ಜಿಯ ಮೂಲಕ ತಿಳಿಸತಕ್ಕದ್ದು ಎಂದಿದ್ದಾರೆ.