ಸಾಂದರ್ಭಿಕ ಚಿತ್ರ
ಶಿವಮೊಗ್ಗ,ಆ.22:
ಶಿವಮೊಗ್ಗ ಗ್ರಾಮಾಂತರ ಭಾಗದ ಯಡವಾಲ, ರಟ್ಟೆಹಳ್ಳಿ ಹಾಗೂ ಹಿಟ್ಟೂರಿನ ಸುತ್ತಮುತ್ತಾ ಗ್ರಾಮಾಂತರ ಭಾಗದ ಕೆರೆಯ ಮಣ್ಣು ಹಾಗೂ ಜಮೀನಿನ ಮಣ್ಣನ್ನು ಅಕ್ರಮವಾಗಿ ತೆಗೆದು ಮಾರಾಟ ಮಾಡಲಾಗುತ್ತಿದೆ ಎಂಬ ಗಂಭೀರ ಅರೋಪಗಳು ಬಹಳ ಹಿಂದಿನಿಂದಲೂ ಸಾರ್ವಜನಿಕರಿಂದ ಕೇಳಿಬರುತ್ತಿದ್ದರೂ

ಸಂಬಂಧಿಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಇಲ್ಲಿ ದಾಳಿ ನಡೆಸಿ ಪ್ರಕರಣ ದಾಖಲಿಸಿದೇ, ಮೌನವಾಗಿಯೇ ಕಣ್ಮುಚ್ಚಿ ಮಲಗಿಬಿಟ್ಟಿದ್ದಾರೆಯೇ ಎಂಬುದು ಅನುಮಾನದ ಪಬ್ಲಿಕ್ ಪ್ರಶ್ನೆ ?

ಬಹಳ ದಿನದಿಂದಲೂ ಹಗಲು ರಾತ್ರಿ ಎನ್ನದೇ ಯಡವಾಲ, ಹಿಟ್ಟೂರು, ದೇವಕಾತಿಕೊಪ್ಪ , ಗೆಜ್ಜೇನಹಳ್ಳಿ ಭಾಗದ ರಸ್ತೆಗಳಲ್ಲಿ ಸಂಚಾರಿಸುವ ಕೆಲವು ಲಾರಿಗಳು ಯಾವುದೇ ಅನುಮತಿ ಪಡೆಯದೇ ಅಕ್ರಮ ಕೆರೆ, ಹಾಗೂ ಜಮೀನಿನ ಮಣ್ಣನ್ನು
ಸಾಗಿಸಿ ಖಾಸಗೀ ಲೇ ಔಟ್ಗೆ ಬಳಸಲಾಗುತ್ತಿದೆ ಎಂಬ ಸಾಕಷ್ಟು ಕೇಳಿಬರುತ್ತಿದ್ದು

ಶಿವಮೊಗ್ಗ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಪರಿಶೀಲನೆ ತಪಾಸಣೆ ಏಕೆ ನಡೆಸುತ್ತಿಲ್ಲ? ಇಲ್ಲೇನಾದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೂ ಕೂಡ ತಿಂಗಳಿಗೆ ಇಂತಿಷ್ಟು ಮಾಮೂಲಿ ಫೀಕ್ಸ್ ಅಗಿದೆಯಾ ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದ್ದು,
ಅಕ್ರಮ ಕೆರೆಯ ಮಣ್ಣು ದಂಧೆಯ ಹಿಂದಿರೋ ಮಹಾನ್ ವ್ಯಕ್ತಿಗಳು ಯಾರು?

ಇವರ ಮೇಲೆ ಪ್ರಕರಣ ಇಲ್ಲಿಯವರೆಗೂ ಏಕೆ ದಾಖಲಾಗಿಲ್ಲ? ಇವರು ಯಾರ ಅನುಮತಿ ಮೇರೆಗೆ ರಾಜಾರೋಷವಾಗಿ ಅಕ್ರಮ ಕೆರೆ ಹಾಗೂ ಜಮೀನಿನ ಮಣ್ಣನ್ನು ಖಾಸಗಿ ಲೇ ಔಟ್ಗೆ ಸಾಗಿಸುತ್ತಿದ್ದಾರೆ.
ಇಲ್ಲಿಯವರೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಇವರ ಮೇಲೆ ದಾಖಲಿಸಿದ ಪ್ರಕರಣಗಳೆಷ್ಟು ಎಂಬುದು ಇಲಾಖೆ ಸ್ಪಷ್ಟಪಡಿಸಬೇಕಾಗಿದೆ? ಈ ಹಿಂದೆ ಜಿಲ್ಲೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲು ಲೋಕಾಯುಕ್ತ ಇಲಾಖೆ ಶಿವಮೊಗ್ಗಕ್ಕೆ ಬಂದಂತೆ ಈಗಲೂ ಕೂಡ ಈ ಅಕ್ರಮ ಕೆರೆ ಮಣ್ಣು ದಂಧೆಗೆ ಕಡಿವಾಣ ಹಾಕಲೂ ಲೋಕಾಯುಕ್ತ ಇಲಾಖೆಯೇ ಬರಬೇಕಾ ?

ನೈಸರ್ಗಿಕ ಸಂಪತ್ತಾದ ಕೆರೆಯ ಮಣ್ಣನ್ನು ನಿಯಮಬಾಹಿರವಾಗಿ ತೆಗೆಯುವುದರಿಂದ ಕೃಷಿ ಭೂಮಿ, ಜಲಮೂಲಗಳು ಹಾಗೂ ಪರಿಸರದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಗಣಿಗಾರಿಕೆ ಚಟುವಟಿಕೆಗಳ ಮೇಲ್ವಿಚಾರಣೆಯ ಜವಾಬ್ದಾರಿ ಇದೆ. ಅಕ್ರಮ ಮಣ್ಣು ಗಣಿಗಾರಿಕೆ ಹಾಗೂ ಸಾಗಾಟದ ಕುರಿತು ಸ್ಥಳ ಪರಿಶೀಲನೆ ನಡೆಸಿ, ಅನುಮತಿ ಮತ್ತು ದಾಖಲೆಗಳನ್ನು ಪರಿಶೀಲಿಸಬೇಕು. ನಿಯಮ ಉಲ್ಲಂಘನೆ ಕಂಡುಬಂದರೆ ಅಂತವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ ಮಣ್ಣು ಸಾಗಿಸುವ ಲಾರಿಗಳ ಮೇಲೂ ತಪಾಸಣೆ ನಡೆಸಬೇಕು ಎಂಬುದು ಸಾರ್ವಜನಿಕರಿಂದ ಆಗ್ರಹ ಕೇಳಿಬರುತ್ತಿದ್ದು ಇನ್ನಾದರೂ ಶಿವಮೊಗ್ಗ ಗಣಿ ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ಯಡವಾಲ, ಹಿಟ್ಟೂರು, ರಟ್ಟೇಹಳ್ಳಿ ಭಾಗದಲ್ಲಿ ನಿಜವಾಗಿಯೂ ಅನುಮತಿ ಪಡೆದು ಮಣ್ಣು ತೆಗೆಯಲಾಗುತ್ತಿದೆಯೇ ? ಅಥವಾ ಅನುಮತಿ ಪಡೆಯದೇ ಮಣ್ಣು ತೆಗೆಯಲಾಗುತ್ತಿದೆ ಎಷ್ಟು ಪ್ರಮಾಣದಲ್ಲಿ ತೆಗೆಯಲಾಗುತ್ತಿದೆಯೇ?

ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳುತ್ತಾರಾ..? ಅಥವಾ ಹೀಗೆಯೇ ಮೌನವಾಗಿ ಇದ್ದು ಲೋಕಾಯುಕ್ತ ಇಲಾಖೆಯವರೇ ಜಿಲ್ಲೆಗೆ ಬಂದು ಈ ಅಕ್ರಮ ಮಣ್ಣು ದಂಧೆಗೆ ಕಡಿವಾಣ ಹಾಕಬೇಕಾ ?
ಕಾದು ನೋಡಬೇಕಾಗಿದೆ.
ಮುಂದಿನ ಭಾಗ ಬೇಕೆ?
ರಟ್ಟೆಹಳ್ಳಿ, ಯಡವಾಲ, ದೇವಕಾತಿಕೊಪ್ಪ ಹಾಗೂ ಗೆಜ್ಜೇನಹಳ್ಳಿ ಭಾಗದ ರಸ್ತೆಗಳ ಮೂಲಕ ಪ್ರತಿದಿನ ಹಗಲು-ರಾತ್ರಿ ಎನ್ನದೇ ಲಾರಿಗಳಲ್ಲಿ ಅಕ್ರಮವಾಗಿ ಮಣ್ಣು ಸಾಗಿಸಲಾಗುತ್ತಿದೆ.
ಬಹಳ ದಿನಗಳಿಂದ ಈ ಭಾಗದಲ್ಲಿ ಮಣ್ಣು ಸಾಗಾಟ ನಡೆಯುತ್ತಿದ್ದರೂ ಸಂಬಂಧಪಟ್ಟ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ರಸ್ತೆಗಳ ಮೇಲೆ ನಿರಂತರವಾಗಿ ಲಾರಿಗಳ ಸಂಚಾರ ನಡೆಯುತ್ತಿದ್ದರೂ ಅಧಿಕಾರಿಗಳ ಗಮನಕ್ಕೆ ಬಂದಿಲ್ಲವೇ? ಅಥವಾ ಮಾಹಿತಿ ಇದ್ದರೂ ದಾಳಿ ನಡೆಸುತ್ತಿಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
ಸಾಮಾನ್ಯರು ಮಣ್ಣು ಸಾಗಿಸಿದರೆ ತಕ್ಷಣ ಕಾನೂನು ಕ್ರಮ, ಪ್ರಭಾವಿಗಳ ವಿಚಾರದಲ್ಲಿ ಮಾತ್ರ ಮೌನವೇ? ಎಂಬ ಆಕ್ರೋಶವೂ ಕೇಳಿಬರುತ್ತಿದೆ. ಕಾನೂನು ಎಲ್ಲರಿಗೂ ಒಂದೇ ಆಗಿರಬೇಕು. ದೊಡ್ಡವರಿಗೊಂದು ಕಾನೂನು, ಚಿಕ್ಕವರಿಗೊಂದು ಕಾನೂನು ಎಂಬ ಭಾವನೆ ಸಾರ್ವಜನಿಕರಲ್ಲಿ ಮೂಡದಂತೆ ಅಧಿಕಾರಿಗಳು ಪಾರದರ್ಶಕವಾಗಿ ಕ್ರಮ ಕೈಗೊಳ್ಳಬೇಕಾಗಿದೆ.
- ಮಲ್ಲೇಶಪ್ಪ, ಬಸವರಾಜ್, ಸ್ಥಳೀಯರು