ಶಿವಮೊಗ್ಗ,ಅ.06:
ಆಶ್ರಯ ಯೋಜನೆಗಳು ತ್ವರಿತವಾಗಿ ಪೂರ್ಣಗೊಳಿಸುವ ಕುರಿತು ರಾಷ್ಷ್ರ ಭಕ್ತರ ಬಳಗ ಕೆ.ಎಸ್.ಈಶ್ವರಪ್ಪ ನವರ ನೇತೃತ್ವದಲ್ಲಿ ಮಹಾನಗರ ಪಾಲಿಕೆಯ ಆಯುಕ್ತರಾದ ಮಯಾಣ್ಣ ಗೌಡರಿಗೆ ಭೇಟಿ ಮಾಡಿ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಸಂಗ್ರಹ ಮಾಡಿ ಶೀಘ್ರದಲ್ಲೇ ಪೂರ್ಣಗೊಳಿಸದಿದ್ದರೆ ಭಾರೀ ಹೋರಾಟ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿದರು.

ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೋರೇಷನ್ ವತಿಯಿಂದ ಗೋಪಿಶೆಟ್ಟಿಕೊಪ್ಪದಲ್ಲಿ 1296 ಮನೆಗಳ ನಿರ್ಮಾಣಕ್ಕೆ 2018ರಲ್ಲಿ ಚಾಲನೆ ದೊರೆತಿದ್ದು, ಇದುವರೆಗೂ ಒಂದೇ ಒಂದು ಮನೆ ಪೂರ್ಣಗೊಂಡಿಲ್ಲ. ಹಸ್ತಾಂತರ ಮಾಡಿಲ್ಲ. ಸುಮಾರು 836 ಫಲಾನುಭವಿಗಳಿಂದ 8 ಸಾವಿರದಂತೆ ಮತ್ತು 300 ಫಲಾನುಭವಿಗಳಿಂದ 80 ಸಾವಿರ ಸಂಗ್ರಹ ಮಾಡಿ 8 ವರ್ಷಗಳೇ ಕಳೆದಿವೆ. ಗುತ್ತಿಗೆದಾರನಿಗೆ ಈಗಾಗಲೇ 11 ಕೋಟಿ ರೂ. ಪಾವತಿ ಆಗಿದೆ. ಆತ ಸ್ಥಳದಲ್ಲಿದ್ದ ಕಾರ್ಮಿಕರನ್ನು ಮತ್ತು ಮಿಷನರಿಗಳನ್ನು ಹೊತ್ತೊಯ್ದಿದ್ದಾನೆ. ಸರ್ಕಾರ ಮತ್ತು ನಿಗಮ ಯಾಕೆ ಸುಮ್ಮನಿದೆ ಎಂದು ಈಶ್ವರಪ್ಪನವರು ತರಾಟೆಗೆ ತೆಗೆದುಕೊಂಡರು.
ಅಲ್ಲದೇ, ನಿಗಮದ ಎಂಡಿ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಈಗಾಗಲೇ ಕೇಂದ್ರದಿAದ ಬಂದ ಹಣವನ್ನು ಕೂಡ ಬೇರೆ ಉದ್ದೇಶಕ್ಕೆ ಬಳಸಲಾಗಿದೆ. ಫಲಾನುಭವಿಗಳಿಗೆ ಅನ್ಯಾಯವಾಗಿದೆ. ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಿ ಇಲ್ಲವಾದರೆ ಫಲಾನುಭವಿಗಳೊಂದಿಗೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಗೋವಿಂದಾಪುರದಲ್ಲಿ ಕೂಡ ಈಗಾಗಲೇ 4000 ಮನೆಗಳಲ್ಲಿ 1200 ಮನೆ ಪೂರ್ಣಗೊಂಡಿವೆ. ಕೇವಲ 400 ಮನೆಗಳಿಗೆ ಮಾತ್ರ ಮೂಲಭೂತ ಸೌಲಭ್ಯ ಕಲ್ಪಿಸಲಾಗಿದೆ. ಉಳಿದ ಫಲಾನುಭವಿಗಳಿಗೆ ಇನ್ನೂ ಬ್ಯಾಂಕ್ ಸಾಲ ಆಗಿಲ್ಲ ಯಾಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾಗಾರ್ಜುನ ಕನ್ಸ್ಟçಕ್ಷನ್ ಕಂಪನಿ ಕೆಲಸ ನಿಲ್ಲಿಸಿ ಜಾಗ ಖಾಲಿ ಮಾಡಿದೆ. ಯಾಕೆ ಹೀಗೆ ಆಗುತ್ತಿದೆ. ಈಗಾಗಲೇ ಉಸ್ತುವಾರಿ ಸಚಿವರೊಂದಿಗೆ ಮಾತನಾಡಿದ್ದೇನೆ. ಅವರು ಅಧಿಕಾರಿಗಳೊಂದಿಗೆ ಮತ್ತು ಸಂಬಂಧಪಟ್ಟ ಎಲ್ಲ ಸಚಿವರೊಂದಿಗೂ ಮಾತುಕತೆಗೆ ದಿನ ನಿಗದಿ ಪಡಿಸುವುದಾಗಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದಾರೆ. ಅದಕ್ಕೂ ಮೊದಲು ಇಲ್ಲಿನ ವಿಳಂಬಕ್ಕೆ ಕಾರಣವೇನು ಎಂದು ಎಲ್ಲ ಅಧಿಕಾರಿಗಳೊಂದಿಗೆ ಚರ್ಚಿಸಿ ಅ. 26ರೊಳಗೆ ಸರಿಪಡಿಸುವಂತೆ ತಿಳಿಸಿದರು.

ಆಯುಕ್ತ ಮಾಯಣ್ಣಗೌಡ ಮಾತನಾಡಿ, ಈಗಾಗಲೇ ಫಲಾನುಭವಿಗಳಿಗೆ ಬ್ಯಾಂಕ್ ಸಾಲಕ್ಕೆ ಇ-ಸ್ವತ್ತು ಕಡ್ಡಾಯವಾಗಿರುವುದರಿಂದ ಪಾಲಿಕೆಯಿಂದ 605 ಮನೆಗಳ ದಾಖಲೆಗಳನ್ನು ನೀಡಿದ್ದು, ಗ್ರಾಮ ಪಂಚಾಯಿತಿಯಿಂದ ಕೇವಲ 150 ಇ-ಸ್ವತ್ತು ಆಗಿದೆ. ಅಲ್ಲಿ ಬೇಕಾದ ಶಾಶ್ವತ ವಿದ್ಯುತ್, ನೀರು ಮತ್ತು ಯುಜಿಡಿ ಪೂರ್ಣಗೊಳಿಸಲು 15 ಕೋಟಿ ರೂ. ಅವಶ್ಯಕತೆ ಇದ್ದು, ಸರ್ಕಾರದ ಗಮನಕ್ಕೆ ತರಲಾಗಿದೆ. ಪಾಲಿಕೆ ವತಿಯಿಂದ 5 ಕೋಟಿ ತಕ್ಷಣ ನೀಡಲು ನಾವು ಸಿದ್ಧರಿದ್ದು, ಗುತ್ತಿಗೆದಾರರು ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದರು.
ಈ ಬಗ್ಗೆಯೂ ಗುತ್ತಿಗೆದಾರರೊಂದಿಗೆ ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಈಶ್ವರಪ್ಪ ಅವರು ಮಾತನಾಡಿ, ಪರಿಸ್ಥಿತಿಯ ಗಂಭೀರತೆ ವಿವರಿಸಿದ್ದಾರೆ. ಅ. 27ರೊಳಗೆ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ಸೇರಿ ಆಶ್ರಯ ಯೋಜನೆಯ ಫಲಾನುಭವಿಗಳಿಗೆ ಮನೆ ನೀಡಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಮೇಲಿನ ತುಂಗಾ ನಗರದ 300ಕ್ಕೂ ಹೆಚ್ಚು ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಬಾಕಿ ಇದ್ದು, ಕ್ರಮಕೈಗೊಳ್ಳಲು ಸೂಚಿಸಿದರು.

ಆದಿಚುಂಚನಗಿರಿ ಶ್ರೀಗಳಿಗೆ ಜನುಮದಿನದ ಅಭಿನಂದನೆ
ತರಳಬಾಳು ಬಡಾವಣೆ ಶುಭಶ್ರೀ ಕಲ್ಯಾಣ ಮಂದಿರ ಬಳಿ ಪಾರ್ಕ್ ಹಾಗೂ ಬೀದಿ ದೀಪ ಸಮಸ್ಯೆ ಮತ್ತು ಮಿಳಘಟ್ಟದಿಂದ ಲಕ್ಷ್ಮೀ ಕ್ಯಾಂಟೀನ್ ವರೆಗೆ ರಸ್ತೆ ಅಗಲೀಕರಣವಾದಾಗ ಕೆಲವು ಫಲಾನುಭವಿಗಳಿಗೆ ಇನ್ನೂ ಪರಿಹಾರ ದೊರಕದೇ ಇರುವುದರ ಬಗ್ಗೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಕೆ. ಈ. ಕಾಂತೇಶ್, ಮಹಾನಗರ ಪಾಲಿಕೆ ಮಾಜಿ ಮೇಯರ್ ಸುವರ್ಣ ಶಂಕರ್, ಮಾಜಿ ಉಪ ಮೇಯರ್ ಲಕ್ಷೀ ಶಂಕರ ನಾಯ್ಕ್, ಮಹಾನಗರ ಪಾಲಿಕೆ ಸದ್ಯಸರಾದ ಈ. ವಿಶ್ವಾಸ್, ಅನಿತಾ, ಸೀತಾಲಕ್ಷ್ಮಿ ಶಿವಾಜಿ, ರಾಜು ಪ್ರಮುಖರಾದ ಕೆಂಪ್ಪಮ್ಮ, ಸಂದ್ಯಾ, ಶಂಕರ್, ಮಣಿ, ಪ್ರದೀಪ್ ಕವಾಡ್, ಕುಬೇರಪ್ಪ, ಪ್ರಕಾಶ್, ವಿಕಾಸ್ ಇದ್ದರು.