ಶಿವಮೊಗ್ಗ: ಮತದಾರರ ವಿಶೇ? ಸಮಗ್ರ ಪರಿ?ರಣೆ(ಎಸ್ಐಆರ್) ಸಂಬಂಧಿಸಿದಂತೆ ನಗರದ ಮತದಾರರಿಗೆ ಮತ್ತ? ನೆರವು ನೀಡುವ ಉದ್ದೇಶದಿಂದ ಆ.೩೦ ರಂದು ಪೇಸ್ ಕಾಲೇಜಿನ ಸಭಾಂಗಣದಲ್ಲಿ ರಾ? ಭಕ್ತರ ಬಳಗದಿಂದ ನಗರದ ಎಲ್ಲಾ ೨೮೮ ಬೂತ್ಗಳ ಬಿಎಲ್ಎ ಸಭೆಯನ್ನು ಏರ್ಪಡಿಸಲಾಗಿದೆ ಎಂದು ರಾ? ಭಕ್ತರ ಬಳಗದ ಮುಖ್ಯಸ್ಥ ಕೆ.ಈ.ಕಾಂತೇಶ್ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎಸ್ಐಆರ್ ಪ್ರಕ್ರಿಯೆ ಇದೀಗ ಮುಗಿದಿದೆ. ಆದರೆ ಕರಡು ಮತದಾರರ ಪಟ್ಟಿ ಆ.೨೪ ರಂದು ಪ್ರಕಟಗೊಳ್ಳಲಿದೆ. ಅದರಲ್ಲಿ ಹೆಸರಿಲ್ಲದ ಮತದಾರರನ್ನು ಗುರುತಿಸಿ ಮತ್ತೆ ಮರು ಸೇರ್ಪಡೆಗೊಳಿಸುವ ಕಾರ್ಯ ಆಗಬೇಕಾಗಿದೆ. ಇದಕ್ಕಾಗಿ ರಾ? ಭಕ್ತರ ಬಳಗ ನಗರದ ೨೮೮ ಬೂತ್ಗಳಲ್ಲಿಯೂ ಪ್ರತಿ ಬೂತ್ಗೆ ಇಬ್ಬರು ಮಹಿಳೆ ಕಾರ್ಯಕರ್ತರು ಮತ್ತು ಇಬ್ಬರು ಪುರು? ಕಾರ್ಯಕರ್ತರನ್ನು ಗುರುತಿಸಲಾಗಿದೆ. ಅವರಿಗೆ ಸೂಕ್ತ ಸಲಹೆ ನೀಡಿ ತರಬೇತಿಗೊಳಿಸಬೇಕು. ಈ ಹಿನ್ನೆಲೆಯಲ್ಲಿ ಬಿಎಲ್ಎ ಸಭೆಯನ್ನು ಆಯೋಜಿಸಲಾಗಿದೆ ಎಂದರು.

ಪ್ರತಿ ಬೂತ್ನಲ್ಲಿಯೂ ಇರುವ ನಮ್ಮ ಕಾರ್ಯಕರ್ತರು ಕರಡು ಪ್ರತಿ ಲಭ್ಯವಾದ ಕೂಡಲೇ ಅದರ ಆಧಾರದಲ್ಲಿ ಬಿಎಲ್ಒ ಜೊತೆಗೂಡಿ ಪ್ರತಿ ಮನೆಗೂ ಭೇಟಿ ನೀಡಿ ಮತಪಟ್ಟಿಯಿಂದ ಯಾರು ವಂಚಿತರಾಗಿದ್ದಾರೆ. ಅವರನ್ನು ಮರು ಸೇರ್ಪಡೆಗೊಳಿಸಲು ಯಾವ ದಾಖಲೆಗಳು ಬೇಕು ಎಂಬ ವಿವರಗಳನ್ನು ತಿಳಿದು ಅವರಿಗೆ ನೆರವು ನೀಡಿ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಬೇಕಾದ ದಾಖಲೆಗಳನ್ನ ಮತ್ತು ಅನುಸರಿಸಬೇಕಾದ ನಿಯಮಗಳನ್ನ ತಿಳಿಸಲಿದ್ದಾರೆ. ಇದು ಯಾರು ಅರ್ಹ ಮತದಾರರು ಪಟ್ಟಿಯಿಂದ ಕೈಬಿಟ್ಟು ಹೊಗದಂತೆ ಸೇರ್ಪಡೆಗೊಳಿಸಲು ಅನುಕೂಲವಾಗುತ್ತದೆ ಎಂದರು.

ಈಗಾಗಲೇ ರಾಜ್ಯದಲ್ಲಿ ೫,೫೪,೩೨,೩೧೪ ಮತದಾರರಲ್ಲಿ ೧,೦೮,೭೫,೩೦೪ ಮತಗಳನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಹಾಗೇ ಶಿವಮೊಗ್ಗ ನಗರದಲ್ಲಿಯೂ ಕೂಡ ೨,೭೭,೦೯೮ ಮತಗಳಿದ್ದು, ಈಗ ೫೬,೪೬೩ ಮತಗಳನ್ನು ಪಟ್ಟಿಯಿಂದ ಕೈ ಬಿಡಲಾಗಿದೆ. ಇದರಲ್ಲಿ ಮೃತ ಪಟ್ಟವರು ಸ್ಥಳಾಂತಗೊಂಡವರು ಎರಡು ಕಡೆ ಇರುವವರು ಇದ್ದಾರೆ. ಇದನ್ನೇಲ್ಲಾ ತೆಗೆದರು ಕೂಡ ಇನ್ನು ಅರ್ಹ ಮತದಾರರು ಇರುತ್ತಾರೆ. ಅವರನ್ನು ಪಟ್ಟಿಗೆ ಸೇರ್ಪಡೆಗೊಳಿಸುವ ಕಾರ್ಯವನ್ನು ರಾ? ಭಕ್ತ ಬಳಗ ಮಾಡುತ್ತಿದೆ ಎಂದರು.