ಶಿವಮೊಗ್ಗ: ಆರ್ಎಸ್ಎಸ್ ಬಗ್ಗೆ ಮಾತನಾಡುವ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಒಬ್ಬ ಗೂಂಡಾ. ಜೈಲಿನಲ್ಲಿ ಇರಬೇಕಾದ ವ್ಯಕ್ತಿಗೆ ಆರ್ಎಸ್ಎಸ್ನ ಮಹತ್ವವೇನು ಗೊತ್ತು ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಟೀಕಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆರ್ಎಸ್ಎಸ್ ಬಗ್ಗೆ ಅರಿವು ಇಲ್ಲದವರೆ ಮಾತನಾಡ ತೊಡಗಿದ್ದಾರೆ. ಪ್ರಿಯಾಂಕ್ ಖರ್ಗೆ, ಮಲ್ಲಿಕಾರ್ಜುನ ಖರ್ಗೆ, ಯತೀಂದ್ರ, ಹರಿಪ್ರಸಾದ್ ಇವರಿಗೆಲ್ಲಾ ಆರ್ಎಸ್ಎಸ್ ಎಂದರೇನು, ರಾ? ಭಕ್ತಿ ಎಂದರೇನು ಎಂಬುದೇ ತಿಳಿದಿಲ್ಲ. ಬಿಜೆಪಿ ಗಣ್ಯರಾದ ವಾಜಪೇಯಿ, ಎಲ್.ಕೆ.ಅಡ್ವಾನಿ, ನರೇಂದ್ರ ಮೋದಿ ಇವರೆಲ್ಲರೂ ಆರ್ಎಸ್ಎಸ್ನಿಂದಲೇ ಬಂದವರು. ದೇಶವನ್ನು ಜಗತ್ತಿನಲ್ಲಿಯೇ ಮಾದರಿಯಾಗಿ ತೋರಿಸಲು ಹೊರಟವರು. ಇಂತಹ ಆರ್ಎಸ್ಎಸ್ ಬಗ್ಗೆ ಈ ಚಿಲ್ಲರೆ ವ್ಯಕ್ತಿಗಳು ಮಾತನಾಡುತ್ತಿರುವುದು ಅವರ ಯೋಗ್ಯತೆಯನ್ನ ತೋರಿಸುತ್ತದೆ ಎಂದು ಟೀಕಿಸಿದರು.

ಹಾಗೆಯೇ ಕಾಂಗ್ರೆಸ್ ರಾಷ್ಟ್ರೀಯ ಮುಖಂಡರಾದ ಸೋನಿಯಾ ಗಾಂಧಿ ಅವರು ವಂದೇ ಮಾತರಂ ಗೀತೆಯ ಬಗ್ಗೆ ಅವಮಾನ ಮಾಡಿರುವುದು ಇಡೀ ರಾ?ವೇ ತಲೆ ತಗ್ಗಿಸುವ ವಿಚಾರವಾಗಿದೆ. ವಂದೇ ಮಾತರಂ ಗೀತೆಗೆ ೧೫೦ ವ?ಗಳ ಇತಿಹಾಸವಿದೆ. ಸೋನಿಯಾ ಅವರಿಗೆ ಭಾರತದ ಸ್ವಾತಂತ್ರ್ಯ ಕಿಚ್ಚಿನ ಬಗ್ಗೆ ಯಾವ ಅರಿವು ಇಲ್ಲ. ಭಾರತದ ಸ್ವಾತಂತ್ರ್ಯಕ್ಕೂ ಅವರಿಗೂ ಯಾವ ಸಂಬಂಧವೂ ಇಲ್ಲ. ಹೋಗಲಿ ಅವರು ಭಾರತಕ್ಕೆ

ಬಂದ ಮೇಲಾದರೂ ಈ ರಾ?ದ ಮಹತ್ವದ ಬಗ್ಗೆ ಸ್ವಾತಂತ್ರ್ಯದ ಬಗ್ಗೆ ತಿಳಿದುಕೊಳ್ಳಬೇಕಿತ್ತು. ಸ್ವಾತಂತ್ರ್ಯದ ಹೋರಾಟದಲ್ಲಿ ವಂದೇ ಮಾತರಂ ಗೀತೆಯ ಪಾತ್ರದ ಬಗ್ಗೆ ಕೊನೆ ಪಕ್ಷ ಸೋನಿಯಾ ಗಾಂಧಿಯವರಿಗೆ ಅವರದೇ ಪಕ್ಷದ ಯಾರಾದರು ಕಾಂಗ್ರೆಸ್ ಮುಖಂಡರು ಪಾಠ ಹೇಳಲಿ. ಆಗಲಾದರೂ ಅವರಿಗೆ ಈ ಗೀತೆಯ ಸ್ಪೂರ್ತಿ ಅರ್ಥವಾಗಿ ರಾ?ದ ಜನತೆಗೆ ಕ್ಷಮೆ ಕೇಳುತ್ತಾರೆ. ಅಥವಾ ಕೇಳಬೇಕು ಎಂದರು.

ರಾ?ದಲ್ಲಿ ಬಿಜೆಪಿ ಶುದ್ಧೀಕರಣದ ಬಗ್ಗೆ ಮಾತನಾಡಿದ ಅವರು, ಕರ್ನಾಟಕದಲ್ಲೂ ಬಿಜೆಪಿಯ ಶುದ್ಧೀಕರಣ ಆಗಬೇಕು, ಆಗುತ್ತದೆ. ಅದಕ್ಕಾಗಿಯೇ ಬಿಜೆಪಿಯ ಶಿಸ್ತಿನ ಸಿಪಾಯಿಯಾದ ನಾನು ಕೂಡ ಕಾಯುತ್ತಿದ್ದೇನೆ ಎಂದರು.