ಶಿವಮೊಗ್ಗ : ಪ್ರೆಸ್ ಟ್ರಸ್ಟ್ನಿಂದ ಪತ್ರಿಕೆ ಮುದ್ರಣ ಕ್ಷೇತ್ರದ ಸಾಧಕ ಸನ್ಮಾನಕ್ಕೆ ಭಾಜನರಾದ ತುಂಗಾತರಂಗ ದಿನಪತ್ರಿಕೆ ಸಂಪಾದಕ ಎಸ್.ಕೆ. ಗಜೇಂದ್ರಸ್ವಾಮಿ ಅವರಿಗೆ ಇಂದು ಮದ್ಯಾನ್ಹ ಶಿವಮೊಗ್ಗ ಗಾಂಧಿಬಜಾರ್ ಕಟ್ಟಡ ಮಾಲಿಕರ ಮತ್ತು ವರ್ತಕರ ಸಂಘ ಆತ್ಮೀಯವಾಗಿ ಸನ್ಮಾನಿಸಿ

ಅಭಿನಂದಿಸಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಹಾಗೂ ಜಿಲ್ಲಾ ಕಾಂಗ್ರೆಸ್ ನಾಯಕ ಎ. ಹೆಚ್. ಸುನಿಲ್, ಉಪಾಧ್ಯಕ್ಷ ನಟರಾಜ್, ಪ್ರಧಾನಕಾರ್ಯದರ್ಶಿ ಮಧುಸೂದನ್, ಕಾರ್ಯದರ್ಶಿ ಸದಾನಂದ್, ನಿರ್ದೇಶಕರಾದ ರಾಘವೇಂದ್ರ, ಆಶೀಸ್ ಜೆ. ಶೇಟ್, ಸತೀಶ್, ಅಶೋಕ್, ಅರುಣ್ ಹಾಗೂ ಇತರರಿದ್ದರು.


