ಶಿವಮೊಗ್ಗ/ತೀರ್ಥಹಳ್ಳಿ: ಕಸ್ತೂರಿ ರಂಗನ್ ವರದಿ ಕುರಿತು ತೀರ್ಥಹಳ್ಳಿಯಲ್ಲಿ ಶನಿವಾರ ಆಯೋಜಿಸಿದ್ದ ಸಾರ್ವಜನಿಕರೊಂದಿಗೆ ಮುಖ್ಯಮಂತ್ರಿಯ ನೇರ ಸಂವಾದ ಸಭೆಯ ವೇದಿಕೆಯಲ್ಲಿ ಕೆಲ ಕಾಲ ಗಲಾಟೆಯ ವಾತಾವರಣ ನಿರ್ಮಾಣವಾಯಿತು.

ಮುಖ್ಯಮಂತ್ರಿಗಳು ರಾಜ್ಯದಲ್ಲಿ ಅನೇಕ ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೆ ವಂದೇ ಮಾತರಂ ಗೀತೆಯನ್ನು ಕೇವಲ ಎರಡೇ ಚರಣಕ್ಕೆ ಸಿಮೀತಗೊಳಿಸುವ ಮೂಲಕ ಜನರ ಭಾವನೆ ಧಕ್ಕೆ ಉಂಟಾಗಿದೆ ಎಂದು ಶಿವಮೊಗ್ಗ ನಗರ ಶಾಸಕ ಎಸ್ ಎನ್ ಚನ್ನಬಸಪ್ಪ ವಂದೇ ಮಾತರಂ ಎರಡೇ ಚರಣಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಅವರ ಮಾತು ಕೇಳಿದ ಸಾಗರ ಶಾಸಕ ಬೇಳೂರು ಗೋಪಾಕೃಷ್ಣ ಕೂಡಲೇ ಇದರ ವಿರುದ್ದ ವೇದಿಕೆಯ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.

ಇದರಿಂದ ವೇದಿಕೆ ಮೇಲೆ ಕೆಲ ಕಾಲ ಬಿಗುವಿನ ವಾತಾವಣರ ಸೃಷ್ಠಿಯಾಯಿತು. ವೇದಿಕೆಯ ಮೇಲೆ ಇಡೀ ಕಾಂಗ್ರೆಸ್ ಮುಖಂಡರು ಚನ್ನಬಸಪ್ಪನನ್ನು ಮುತ್ತಿಗೆ ಹಾಕಿ ಮಾತನ್ನು ನಿಲ್ಲಿಸಲು ಪ್ರಯತ್ನ ಪಟ್ಟರು. ಮೈದಾನದಲ್ಲಿ ನೆರೆದಿದ್ದ ಕಾಂಗ್ರೆಸ್ ಕಾರ್ಯಕರ್ತರು ಕೂಡ ಚನ್ನಬಸಪ್ಪನ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು. ಇಡೀ ಸಂವಾದದ ಮೈದಾನ ಡಿಕೆ ಡಿಕೆ ಎಂದು ಘೋಷಣೆ ಮೊಳಗಿಸುವ ಮೂಲಕ ಚನ್ನಬಸಪ್ಪರ ಆಕ್ಷೇಪಣೆಗೆ ವಿರೋಧ ವ್ಯಕ್ತಪಡಿಸಿದರು.