ಶಿವಮೊಗ್ಗ: ಜೆಸಿಐ ಶಿವಮೊಗ್ಗ ಅನಿಕೇತನ ವತಿಯಿಂದ, ಅಧ್ಯಕ್ಷರಾದ ಜೆಸಿ ಸಂದೇಶ್ ಎಂ. ಅವರ ನೇತೃತ್ವದಲ್ಲಿ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಮಾನ್ಯ ಶಾಸಕರಾದ ಶಾರದಾ ಪೂರ್ಯನಾಯಕ್ ಅವರನ್ನು ಸೌಜನ್ಯವಾಗಿ ಭೇಟಿ ಮಾಡಿ ಕೌಶಲಾಭಿವೃದ್ಧಿ ಮತ್ತು ನಾಯಕತ್ವ ತರಬೇತಿ ಕುರಿತಂತೆ ಮನವಿ ಸಲ್ಲಿಸಲಾಯಿತು.

ಗ್ರಾಮೀಣ ಪಿಯು ಹಾಗೂ ಪದವಿ ಕಾಲೇಜುಗಳಲ್ಲಿ 10 ದಿನಗಳ ಕೌಶಲ್ಯಾಭಿವೃದ್ಧಿ ಮತ್ತು ನಾಯಕತ್ವ ತರಬೇತಿ ಕಾರ್ಯಕ್ರಮ ನಡೆಸಲು ಅಗತ್ಯವಾದ ಅನುಮತಿ ಹಾಗೂ ಸಹಕಾರ ಕೋರಿ ಮನವಿಪತ್ರವನ್ನು ಸಲ್ಲಿಸಲಾಯಿತು.

ಈ ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರದ ಶಿಕ್ಷಣ ಮಂಡಳಿ ಹಾಗೂ ಕೌಶಲ್ಯಾಭಿವೃದ್ಧಿ ಮಂಡಳಿಯ ಸಹಯೋಗದಲ್ಲಿ ಆಯೋಜಿಸಲು ನೆರವಾಗುವಂತೆ ಈ ಸಂದರ್ಭದಲ್ಲಿ ಚರ್ಚಿಸಲಾಯಿತು.
ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳಲ್ಲಿ ನಾಯಕತ್ವ, ವ್ಯಕ್ತಿತ್ವ ವಿಕಾಸ, ಡಿಜಿಟಲ್ ಕೌಶಲ್ಯ, ಉದ್ಯೋಗಾರ್ಹತೆ ಹಾಗೂ ವೃತ್ತಿ ಮಾರ್ಗದರ್ಶನವನ್ನು ಬೆಳೆಸುವ ಗುರಿಯನ್ನು ಜೆಸಿಐ ಅನಿಕೇತನ ಹೊಂದಿದ್ದು, ಅವಕಾಶ ಕಲ್ಪಿಸಲು ಕೋರಲಾಯಿತು.

ಮನವಿಯನ್ನು ಸ್ವೀಕರಿಸಿದ ಶಾಸಕ ಶಾರದಾ ಪೂರ್ಯಾನಾಯ್ಕ್ ಅವರು ಈ ಕುರಿತಂತೆ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜೆಸಿಐ ಶಿವಮೊಗ್ಗ ಅನಿಕೇತನ ಕಾರ್ಯದರ್ಶಿ ನಂದಿನಿ ಸಾಗರ, ಖಜಾಂಚಿ ನಿಧಿ, ಮಾರ್ಗದರ್ಶಕ ಹೊನ್ನಾಳಿ ಚಂದ್ರಶೇಖರ್, ಸದಸ್ಯರಾದ ದೀಪಕ್ ಪೂರ್ಯಾನಾಯ್ಕ್, ಸೂರ್ಯದೇವ್ ಹಾಜರಿದ್ದರು.