ಶಿವಮೊಗ್ಗ, ಜು.17
ನಗರದ ವಿನೋಬನಗರದಲ್ಲಿರುವ ಶ್ರೀ ಶಿವಗಂಗಾ ಯೋಗ ಕೇಂದ್ರದ ಅಭಿವೃದ್ಧಿಗೆ ಕೆ.ಎಸ್.ಈ ಕುಟುಂಬದಿಂದ
ಶಿವಗಂಗಾ ಯೋಗ ಕೇಂದ್ರದ ಗೌರವ ಅಧ್ಯಕ್ಷರಾದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳ ಮತ್ತು ಬೆಕ್ಕಿನಕಲ್ಮಠದ (ಆನಂದಪುರ) ಯೋಗಗುರು ಡಾ. ರುದ್ರಾರಾಧ್ಯರು ಸಮ್ಮುಖದಲ್ಲಿ
ಆರ್ಥಿಕ ನೆರವು ನೀಡಲಾಯಿತು.

ಈ ಸಂದರ್ಭದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಮಾಜಿ ಶಾಸಕ ರುದ್ರೇಗೌಡ, ರಾಷ್ಟ್ರಭಕ್ತರ ಬಳಗದ ಕೆ.ಈ.ಕಾಂತೇಶ್ ಹಾಗೂ ಯೋಗ ಕೇಂದ್ರದ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಯೋಗ ಕೇಂದ್ರದ ಅಭಿವೃದ್ಧಿಗೆ ಸಹಕಾರ ನೀಡಿದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪರ ಕುಟುಂಬದ ಕಾರ್ಯ ಶ್ಲಾಘನೀಯ ಎಂದು ಸ್ವಾಮೀಜಿಗಳು ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಆನಂದ್, ವಿಶ್ವನಾಥಯ್ಯ, ಜಗದೀಶ್, ಮೋಹನ್, ಉಮೇಶ್ ಆರಾಧ್ಯ, ಪರಮೇಶ್, ಓಂಕಾರಿ, ಆನಂದ ಮೂರ್ತಿ, ಹರೀಶ್ ಮೊದಲಾದವರು ಉಪಸ್ಥಿತರಿದ್ದರು.