ಶಿಕಾರಿಪುರ, ಜು.16:
ತಾಲೂಕಿನ ಕೊಟ್ಟ ಗ್ರಾಮದ ಸಮೀಪವಿರುವ ಕುಮದ್ವತಿ ನದಿ ದಂಡೆಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.

ಬುಧವಾರ ನೀರಿನಲ್ಲಿ ಹರಿದು ಬಂದಿದ್ದ ಮೃತದೇಹವನ್ನು ಸ್ಥಳೀಯರು ಗಮನಿಸಿದ್ದಾರೆ. ಮೃತರು 50 ರಿಂದ 55 ವರ್ಷ ವಯಸ್ಸಿನ ಗಂಡಸಾಗಿದ್ದು, ನೀಲಿ ಚಡ್ಡಿ ಮತ್ತು ಬಿಳಿ ಬಣ್ಣದ ಚೆಕ್ಸ್ ಅಂಗಿ ಧರಿಸಿದ್ದಾರೆ.

ಈ ಸಂಬಂಧ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರ ಗುರುತು ಪತ್ತೆಯಾಗಿಲ್ಲ.
ಮೃತರ ವಾರಸುದಾರರು ಅಥವಾ ಈ ಬಗ್ಗೆ ಮಾಹಿತಿ ಇರುವವರು ಶಿಕಾರಿಪುರ ಗ್ರಾಮಾಂತರ ಠಾಣೆಯನ್ನು ಸಂಪರ್ಕಿಸಬಹುದಾಗಿದೆ.
ಮೊಬೈಲ್: 9480803366
ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.