ಶಿವಮೊಗ್ಗ, ಜು.೧೫:
ತಿಲಕ್ ನಗರದಲ್ಲಿರುವ ಶ್ರೀರಾಘವೇಂದ್ರ ಸ್ವಾಮಿ ಸೇವಾ ಸಮಿತಿಗೆ ಮೂರು ಅಂತಾರಾ ಷ್ಟ್ರೀಯ ಐಎಸ್ಓ ಪ್ರಮಾಣೀಕರಣಗಳು ಲಭಿಸಿರುವುದು ಸಮಿತಿ ಎಲ್ಲಾ ಸದಸ್ಯರು, ದಾನಿಗಳು ಹಾಗೂ ಭಕ್ತರಿಗೆ ಹೆಮ್ಮೆ ತಂದಿದೆ ಎಂದು ಸಮಿತಿಯ ಕಾರ್ಯದರ್ಶಿ ಹೆಚ್.ವಿ.ಸುರೇಶ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಮಿತಿಯು ಹಲವು ವರ್ಷ ಗಳಿಂದ ಶ್ರೀ ರಾಘವೇಂದ್ರ ಸ್ವಾಮಿಗಳ ಆರ್ಶೀ ವಾದದೊಂದಿಗೆ ಧಾರ್ಮಿಕ, ಸಾಮಾಜಿಕ ಹಾಗೂ ಜನಪಯೋಗಿ ಸೇವಾ ಕಾರ್ಯ ಗಳನ್ನು ನಿಷ್ಠೆಯಿಂದ ನಡೆಸಿಕೊಂಡು ಬರುತ್ತಿ ರುವುದನ್ನು ಗುರುತಿಸಿ ಪ್ರಮಾಣೀಕರಣಗಳ ಲಭಿಸಿವೆ ಎಂದರು.

ಸಮಿತಿಯ ಗುಣ್ಣಮಟ್ಟದ ನಿರ್ವಹಣಾ ವ್ಯವಸ್ಥೆ, ಪರಿಸರ ನಿರ್ವಹಣಾ ವ್ಯವಸ್ಥೆ ಹಾಗೂ ಔದ್ಯೋಗಿಕ ಆರೋಗ್ಯ ಮತ್ತು ಸಂರಕ್ಷಣಾ ನಿರ್ವಹಣಾ ವ್ಯವಸ್ಥೆ ಗಳನ್ನು ಗುರುತಿಸಿ ಪ್ರಶಸ್ತಿ ಲಭಿಸಿದೆ. ಸಂಸ್ಥೆಯ ಆಡಳಿತದಲ್ಲಿ ಪಾರದರ್ಶಕತೆ, ಗುಣಮಟ್ಟ, ಪರಿಸರ ಕಾಳಜಿ, ಸುರಕ್ಷತೆಯ ಬಗ್ಗೆ ಸಮಿತಿಯ ಬದ್ದತೆಯನ್ನು ಜಾಗತಿಕ ಮಟ್ಟದಲ್ಲಿ ದೃಢೀಕರಿಸುವ ಮಾನ್ಯಗಳಾಗಿವೆ ಎಂದರು.

ಸಮಿತಿಯು ಮಠದ ಸೇವಾ ನಿರ್ವ ಹಣಾ, ಭಕ್ತರ ಸೇವೆ, ಧಾರ್ಮಿಕ ಹಾಗೂ ಸಾಂಸ್ಕೃತಿ ಕಾರ್ಯಕ್ರಮಗಳಿ, ವೈದ್ಯಕೀಯ ಶಿಬಿರಗಳು ಹಾಗೂ ಶಾಲಾ ದತ್ತು ಯೋಜನೆಗಳನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸುತ್ತಿರುವುದನ್ನು ಈ ಪ್ರಮಾಣೀಕರಣವು ದೃಢ ಪಡಿಸಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಜನಪರ, ಸೇವಾ ಮೂಲಕ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಿತಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸೇವಾ ಸಮಿತಿಗಳನ್ನಾಗಿ ರೂಪಿ ಸುವ ಸಂಕಲ್ಪವನ್ನು ಹೊಂದಿದ್ದೇವೆ ಎಂದರು.
ಐಎಸ್ಓ ಪ್ರಮಾಣೀಕರಣವು ನಮ್ಮ ಸಾಧನೆ ಸಾಧನೆಯ ಅಂತ್ಯವಲ್ಲ. ಇನ್ನಷ್ಟು ಜವಾಬ್ದಾರಿಯುತ, ಪಾರದರ್ಶಕ ಹಾಗೂ ಸಮಾಜಮುಖಿ ಸೇವೆಗೆ ಹೊಸ ಆರಂಭವಾಗಿದೆ. ಈ ಪ್ರಶಸ್ತಿಯನ್ನು ಸಾರ್ವಜನಿಕವಾಗಿ ಉಡುಪಿಯ ಅಧಮಾರು ಮಠದ ಸ್ವಾಮೀಜಿ ವಿಶ್ವಪ್ರಿಯ ತೀರ್ಥ ಶ್ರೀಪಾದಂಗಳವರು ಮಠದಲ್ಲಿ

ಸೋಮವಾರ ನಡೆದ ಭಾಗವತ ಪ್ರವಚನ ಕಾರ್ಯಕ್ರಮದಲ್ಲಿ ಅನಾವರಣಗೊಳಿಸಿದರು ಎಂದರು.
ಪ್ರತಿಕಾಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಎಂ.ಡಿ. ಲಕ್ಷ್ಮೀಕಾಂತ, ಖಜಾಂಚಿ ಗುರುಪ್ರ ಸಾದ್, ನಿರ್ದೇಶಕರಾದ ಶ್ರೀನಿವಾಸ್, ಪಿ.ಆರ್. ಜೋಷಿ, ನಾಗರಾಜ್, ಶಿವರಾಂ ಹೆಬ್ಬಾರ್, ಮಠದ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ರಾಘವೇಂದ್ರ ಮೂರ್ತಿ, ಭಕ್ತರಾದ ಆ.ನಾ.ವಿಜಯೇಂದ್ರ ರಾವ್, ವಾದಿರಾಜ್ ಇನ್ನಿತರರು ಉಪಸ್ಥಿತರಿದ್ದರು.