ಶಿವಮೊಗ್ಗ :- ಶ್ರೀ ಋಷಿ ಪ್ರಭಾಕರ್ ಗುರುಜಿಯವರ ಪ್ರಣಿತವಾದ ಧ್ಯಾನ, ಪ್ರಾಣಾಯಾಮ ಮತ್ತು ಯೋಗ ನಿದ್ರಾಭ್ಯಾಸದ ಮೂಲಕ ವ್ಯಕ್ತಿತ್ವ ವಿಕಸನಕ್ಕೆ ವಿಶೇಷ ಪರಿಚಯ ಕಾರ್ಯಕ್ರಮವನ್ನು ಜುಲೈ 12ರ ಭಾನುವಾರ ಸಂಜೆ 6ಗಂಟೆಗೆ ನಗರದ ಕೋಟೆ ರಸ್ತೆ ಕೋಟೆ ಬಯಲು ರಂಗಮಂದಿರದಲ್ಲಿ ಆಯೋಜಿಸಲಾಗಿದೆ.

ಈ ವಿಶೇಷ ಕಾರ್ಯಕ್ರಮದಲ್ಲಿ ನಿಮಗೆ ಸುಸ್ತಾಗುವ ಅನುಭವವಾಗು ತ್ತಿದೆಯೆ, ಕಾಯಿಲೆ ಏನೂ ಇಲ್ಲದಿದ್ದರೂ ನಿರುತ್ಸಾಹವಾಗುತ್ತಿದೆಯೆ, ಬೀಡಿ, ಸಿಗರೇಟ್, ಕಾಫಿ, ಟೀ, ತಂಬಾಕು, ಮಧ್ಯಪಾನ ಅಭ್ಯಾಸಗಳಿಂದ ಹೈರಾಣಾಗಿದ್ದೀರ. ನಿಮಗೆ ದೀರ್ಘ ಕಾಲದಿಂದ ಅಥವಾ ಇತ್ತೀಚೆಗೆ ಬಂದ ಬಿಪಿ-ಶುಗರ್, ಅಸ್ತಮ, ಸಂದಿ ನೋವು, ತಲೆ ನೋವು, ಗ್ಯಾಸ್ಟ್ರಿಟಿಕ್ಸ್ ಮತ್ತಿತರ ಯಾವುದಾದರೂ ಖಾಯಿಲೆ ಇದೆಯೇ. ಮನಸ್ಸಿನ ಏಕಾಗ್ರತೆ ನಿಯಂತ್ರಣದಲ್ಲಿಲ್ಲವೆ. ಮನಸ್ಸಿನಲ್ಲಿ ಯಾವಾಗಲೂ ಉದ್ವೇಗ ಒತ್ತಡದ

ಅನುಭವವಾಗುತ್ತಿದೆಯೇ ? ಮತ್ತು ಇನ್ನಿತರ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳುವ ಸದಾವಕಾಶವನ್ನು ಶಿವಮೊಗ್ಗದ ಜನತೆ ಪಡೆದುಕೊಳ್ಳಲು ಕೋರಲಾಗಿದೆ. ಮಾಹಿತಿಗೆ ಮೊ. 9986052851, 9342758707ರಲ್ಲಿ ಸಂಪರ್ಕಿಸಿ.