ಶಿವಮೊಗ್ಗ ; ಪ್ರಾಥಮಿಕ ಆರೋಗ್ಯದ ಕೇಂದ್ರಗಳು ಸೇರಿದಂತೆ ಜಿಲ್ಲೆಯ ತಾಲೂಕು ಕೇಂದ್ರದ ಆಸ್ಪತ್ರೆ ಗಳಲ್ಲಿ ವೈದ್ಯರ ಕೊರೆತೆ ಆಗದಂತೆ ನೋಡಿ ಕೊಳ್ಳಬೇಕು. ಖಾಲಿ ಇರುವ ವೈದ್ಯರ ಹುದ್ದೆಗಳಿಗೆ ಹೊರ ಗುತ್ತಿಗೆ ಆಧಾರದಲ್ಲಿ ನಿಗದಿತ ಕಾಲಮಿತಿಯೊಳಗೆ ಭರ್ತಿ ಮಾಡಬೇಕು, ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾಪಂಚಾಯತ್ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಶನಿವಾರ ಇಲಾಖೆಯ ಪ್ರಗತಿ ಪರಿಶೀಲನೆಸಭೆ ನಡೆಸಿದ ಅವರು, ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿನ ಖಾಲಿ ಇರುವ ವೈದ್ಯರ ಸಂಖ್ಯೆ, ಔಷಧಿ ಕೊರತೆ ಸೇರಿದಂತೆ ಮೂಲಭೂತ ಸಮಸ್ಯೆಗಳ ಸಮಗ್ರ ಮಾಹಿತಿ ಪಡೆದರು.
ಆರಂಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಟರಾಜ್ ಅವರು ಜಿಲ್ಲೆಯಲ್ಲಿರುವ ಸರ್ಕಾರಿ ಆಸ್ಪತ್ರೆಗಳು, ಖಾಲಿಇರುವ ಹುದ್ದೆಗಳ ಮಾಹಿತಿ ನೀಡಿದರು. ಖಾಲಿಹುದ್ದೆಗಳನ್ನು ನೇಮಕ ಮಾಡಲು ಪ್ರಯತ್ನಿಸಿದರೂ, ವೈದ್ಯ ವಿದ್ಯಾರ್ಥಿಗಳು ಮುಂದೆ ಬರುತ್ತಿಲ್ಲ, ಹಾಗಾಗಿ ನೇಮಕದಲ್ಲಿ ತೊಂದರೆಯಾಗಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಬೆಕ್ಕಿಗೆ ಬಿಸಿ ಬಿಸಿ ಹಾಲು ಕೊಟ್ಟಂತೆ ಮಾಡಬೇಡಿ, ವೈದ್ಯರಾಗಲು ಮುಂದೆ ಬಂದವರಿಗೆ ತಕ್ಷಣವೇ ನೇಮಕಾತಿ ಪತ್ರಕೊಡಬೇಕು. ಜಿಲ್ಲಾಧಿಕಾರಿಗಳ ಬಳಿಗೆ, ನಾಳೆ ಬನ್ನಿ ಎಂದು ಸುಮ್ಮನೆ ಸತಾಯಿಸಬೇಡಿ. ಆಸ್ಪತ್ರೆಗಳಲ್ಲಿ ವೈದ್ಯರಿಲ್ಲದಿದ್ದರೆ ಸಾಕಷ್ಡು ಸಮಸ್ಯೆ ಆಗುತ್ತದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಜನ ಸ್ನೇಹಿಯಾಗಿ ಮಾಡಲು ನಿಮ್ಮ ಮನ ಪರಿವರ್ತನೆಯೂ ಮುಖ್ಯ ಎಂದು ಸೂಚನೆ ನೀಡಿದರು.
ವೈದ್ಯರಾಗಲು ಮುಂದೆ ಬರುವಂತಹ ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುವಂತಹ ಕೆಲಸ ವೈದ್ಯರಿಂದಲೂ ಆಗಬೇಕೆಂದು ಸಲಹೆ ನೀಡಿದ ಸಚಿವರು, ಗಡಿ ಪ್ರದೇಶದಲ್ಲಿ ಕೆಲಸ ಮಾಡುವಂತಹ ವೈದ್ಯರಿಗೆ 15 ಸಾವಿರ ಹೆಚ್ಚುವರಿಯಾಗಿ ಕೊಡಲು ಯೋಚನೆ ಮಾಡಲಾಗಿದೆ. ಹಾಗೆಯೇ 60 ವರ್ಷದ ನಿವೃತ್ತಿಯ ಬಳಿಕವೂ ವೈದ್ಯರಿಗೆ 65-70ರ ತನಕ ಕೆಲಸಮಾಡುವ ಅವಕಾಶವನ್ನು ಸರ್ಕಾರ ಮಾಡಿದೆ. ಇದನ್ನು ಕೂಡ ಹೆಚ್ಚು ಪ್ರಚಾರಕ್ಕೆ ತನ್ನಿ. ಆಮೂಲಕ ವೈದ್ಯರ ಕೊರೆತಯನ್ನುನೀಗಿಸಿ ಎಂದುಸಲಹೆ ನೀಡಿದರು.
ಇದೇ ರೀತಿ ಕೆಎಫ್ಡಿ (ಕ್ಯಾಸನೂರು ಅರಣ್ಯ ರೋಗ) ಸೋಂಕಿತ ರೋಗಿಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ ಬಳಿಕ ಮಂಗಳೂರಿಗೆ ರೆಫರ್ ಮಾಡಿದ್ದ ಪ್ರಕರಣವನ್ನು ರಾಜ್ಯ ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಪ್ರಕರಣದ ಸಮಗ್ರ ತನಿಖೆಗೆ ಸಚಿವರು ಸೂಚನೆ ನೀಡಿದರು. ಸಭೆಯಲ್ಲಿ ಶಾಸಕರಾದ ಆರಗ ಜ್ಞಾನೇಂದ್ರ,ಎಸ್. ಎನ್. ಚನ್ನಬಸಪ್ಪ, ಡಿ.ಎಸ್. ಅರುಣ್, ನಿಗಮದ ಅಧ್ಯಕ್ಷೆ ಜಿ.ಪಲ್ಲವಿ, ಚೇತನ್ಕೆ ಗೌಡ, ಜಿಲ್ಲಾಧಿಕಾರಿ ಪ್ರಭುಲಿಂಗಕವಳಿಕಟ್ಟೆ ಇದ್ದರು.

ಟೀಕೆಗಳೆ ವಿಪಕ್ಷಗಳಿಗೆ ಆಕ್ಸಿಜನ್ : ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು, ಎಸ್ಐಆರ್ ವಿಚಾರದಲ್ಲಿ ಪ್ರತಿಪಕ್ಷಗಳ ಟೀಕೆಗೆ ಖಾರವಾಗಿ ಪ್ರತಿಕ್ರಿಯಿಸಿ, ಇದು ಕೇಂದ್ರ ಚುನಾವಣಾ ಆಯೋಗದ ಜವಾಬ್ದಾರಿ, ಇಲ್ಲಿ ರಾಜ್ಯ ಸರ್ಕಾರದ ಪಾತ್ರವಿಲ್ಲ, ಯಾರುಮತದಾನದಿಂದ ವಂಚಿತರಾಗಬಾರದು ಎನ್ನುವುದು ರಾಜ್ಯ ಸರ್ಕಾರದ ಉದ್ದೇಶ. ಪಶ್ಚಿಮ ಬಂಗಾಳದಂತೆ ಇಲ್ಲಿ ಆಗಲು ಬಿಡುವುದಿಲ್ಲ ಎಂದರು. ಟೀಕಿಸುವುದೇ ಪ್ರತಿಪಕ್ಷಗಳ ಆಕ್ಸಿಜನ್. ಅವರ ಟೀಕೆಗಳ ಬಗ್ಗೆ ಹೆಚ್ಚೇನೂ ಒತ್ತು ಕೊಡಬೇಕಿಲ್ಲ ಎಂದರು.
ಈಗ ಸದ್ಯಕ್ಕೆ ಯಾವುದೇ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಯೋಚನೆ ಇಲ್ಲ ಎಂದು ಮೆಗ್ಗಾನ್ ವೈದ್ಯರ ಕೊರತೆ ಪ್ರಶ್ನೆಗೆ ಉತ್ತರಿಸಿದರಲ್ಲದೆ, ಈಗಾಗಲೇ ಮೇಲ್ದರ್ಜೆಗೇರಿಸುವ ಆಸ್ಪತ್ರೆಯಲ್ಲಿನ ವೈದ್ಯರ ಕೊರತೆ, ಸಿಬ್ಬಂದಿ ನೇಮಕಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದರು.

ಕರಾವಳಿ ಕಂಬಳಕ್ಕೆ ಅನುಮತಿಬೇಡ ಎಂದು ಮೈಸೂರು ಸಂಸದರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು ಕರಾವಳಿಯವನಾಗಿ ಕಂಬಳದ ಅಭಿಮಾನಿಯಾಗಿದ್ದೇನೆ. ನಮ್ಮೂರಿನ ಸಂಪ್ರಾದಾಯಕ ಪರಂಪರೆಯಾಗಿದ್ದು, ಎಲ್ಲಾ ಜಾತಿವರ್ಗ ಸೇರಿ ಕಂಬಳದಲ್ಲಿ ಪಾಲ್ಲೊಳುತ್ತಾರೆ. ಅದು ಎಲ್ಲೆಡೆ ಆಗಲಿ ಎನ್ನುವುದು ನನ್ನ ಸದಾಶಯ. ಆದರೆ ಇದನ್ನು ದಸರಾ ಸಮಿತಿಯವರು ನಿರ್ಧಾರ ಮಾಡುತ್ತಾರೆ ಎಂದರು.