ಶಿವಮೊಗ್ಗ : ಖಾಯಂ ನಿವಾಸಿ ಪ್ರಮಾಣ ಪತ್ರ ನೀಡುವ ಮೂಲಕ ರಾಜ್ಯ ಸರ್ಕಾರ ಎಸ್ಐಆರ್ ಪ್ರಕ್ರಿಯೆಯನ್ನು ದುರ್ಬಲಗೊಳಿಸುವ ಹುನ್ನಾರಕ್ಕೆ ಮುಂದಾಗಿದೆ. ಇದನ್ನು ಬಿಜೆಪಿ ಬಲವಾಗಿ ಖಂಡಿಸುತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್ ಆರೋಪಿಸಿದರು.
ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದದ್ಯಾಂತ ಎಸ್ಐಆರ್ ಪ್ರಕ್ರಿಯೆ ಸುಗಮವಾಗಿ ನಡೆಯುತ್ತಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಇದರ ಬಗ್ಗೆ ಗೊಂದಲ ಸೃಷ್ಟಿ ಆಗುತ್ತಿದೆ. ಅದು ರಾಜ್ಯ ಸರ್ಕಾರದಿಂದಲೇ ನಡೆಯುತ್ತಿದೆ ಎಂದು ಕುಟುಕಿದರು.

ಕೇಂದ್ರ ಚುನಾವಣಾ ಆಯೋಗವು ಎಸ್ಐಆರ್ ಆರಂಭ ಮಾಡಿದ ಸಂದರ್ಭದಿಂದ ಇದರ ಬಗ್ಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಯಾವು ರೀತಿ ನಡೆದುಕೊಳ್ಳುತ್ತಿದೆಯೆಂದು ರಾಜ್ಯ ಜನರು ನೋಡುತ್ತಿದ್ದಾರೆ. ಕೇಂದ್ರ ಚುನಾವಣಾ ಆಯೋಗವು ಮತದಾರರಿಗೆ ಎಸ್ಐಆರ್ ಫಾರಂ ಅನ್ನು ೨೦೦೨ರ ಮತಪಟ್ಟಿಯ ಮೂಲಕ ಯಾವ ರೀತಿ ತುಂಬಬೇಕೆಂಬುದನ್ನು ಸಹ ತಿಳಿಸಿದೆ. ಆದರೆ ಈಗ ಕಾಂಗ್ರೆಸ್ ಹೊಸ ನಿಯಮವನ್ನು ಮಾಡಲು ಹೊರಟ್ಟಿದ್ದು, ಇದು ಸುಗಮವಾಗಿ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆಯ ದಾರಿ ತಪ್ಪಿಸುವ ಉದ್ದೇಶವಾಗಿದೆ ಎಂದರು.
ರಾಜ್ಯದಲ್ಲಿರುವ ನಿವಾಸಿಗಳಿಗೆ ಖಾಯಂ ವಾಸ ದೃಢಿಕರಣ ಪತ್ರಕೊಡಲು ಕಾಂಗ್ರೆಸ್ ಮುಂದಾಗಿದ್ದು, ಇದರ ಹಿಂದೆ ಎಸ್ಐಆರ್ ಪ್ರಕ್ರಿಯೆಯನ್ನು ದುರ್ಬಲ ಮಾಡಲು ಹುನ್ನಾರ ಇದೆ. ಬೇರೆ ದೇಶದ ನಾಗರೀಕರು ಮದುವೆಯಾಗಿ ಇಲ್ಲಿ ವಾಸಿಸುತ್ತಿದ್ದರೆ ಅವರಿಗೂ ಖಾಯಂ ವಾಸಿ ದೃಢೀಕರಣ ಪತ್ರ ಕೊಡುತ್ತಿರುವುದು ಅಕ್ರಮವಾಗಿದೆ ಎಂದರು.

ಮಾಜಿ ವಿಧಾನನ ಪರಿಷತ್ ಸದಸ್ಯ ಆರ್.ಕೆ. ಸಿದ್ರಾಮಣ್ಣ ಮಾತನಾಡಿ, ಕೇಂದ್ರ ಚುನಾವಣಾ ಆಯೋಗದ ಕಡೆಯಿಂದ ಎಸ್ಐಆರ್ ಪ್ರಕ್ರಿಯೆ ಸರಿಯಾದ ರೀತಿಯಲ್ಲಿ ನಡೆಯುತ್ತಿದೆ. ಆದೆ ರಾಜ್ಯ ಸರ್ಕಾರದ ಈ ನಿರ್ಣಯ ಇದಕ್ಕೆ ಅಡ್ಡಿ ಮಾಡುತ್ತಿದೆ. ಪರಿಶೀಲನೆ ಮಾಡದೆ ಕೆಳದವರಿಗೆಲ್ಲಾ ಖಾಯಂ ವಾಸಿ ದೃಢೀಕರಣ ಪತ್ರ ಕೊಡ್ತಾ ಇದಾರೆ. ಬೇರೆ ದೇಶದಲ್ಲಿ ಇಲ್ಲಿ ವಾಸ ಮಾಡುತ್ತಿರುವವರೆಗು ಕೊಡ್ತಾ ಇದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಕೇಂದ್ರ ಗೃಹ ಇಲಾಖೆಗೆ ಪತ್ರವನ್ನು ಬರೆದಿದ್ದೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರುಗಳಾದ ಆರ್.ಕೆ. ಸಿದ್ಧರಾಮಣ್ಣ, ಮಾಜಿ ಎಂಎಲ್ಎ ರೂಪಾಲಿ ನಾಯಕ್, ಎಸ್.ದತ್ತಾತ್ರಿ, ಸಂತೋಷ್ ಬಳ್ಳಕೆರೆ, ಹರಿಕೃಷ್ಣ, ಮಾಲತೇಶ್, ಚಂದ್ರಶೇಖರ್, ಎಸ್.ಮಂಜುನಾಥ್ ಇದ್ದರು.