filter: 0; fileterIntensity: 0.0; filterMask: 0; hdrForward: 0; highlight: false; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: -1;weatherinfo: null;temperature: 34;







- ಗಜೇಂದ್ರ ಸ್ವಾಮಿ ಎಸ್.ಕೆ.
ಇಡೀ ಶಿಕ್ಷಣ ವ್ಯವಸ್ಥೆಯನ್ನು ನೋಡಿಕೊಳ್ಳಲು ಶಿಕ್ಷಣ ಇಲಾಖೆಯ ವಿವಿಧ ಕಚೇರಿಗಳು ರಾಜ್ಯದಲ್ಲೆಡೆ ಕಂಡುಬರುತ್ತವೆ. ಶಿವಮೊಗ್ಗ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಇಡೀ ರಾಜ್ಯದಲ್ಲಿ ಮಾದರಿಯಾದ ಅತ್ಯಂತ ಉತ್ತಮ ಸೌಂದರ್ಯ ಹಾಗೂ ವ್ಯವಸ್ಥಿತ ಅರಮನೆಯಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ಶಿವಮೊಗ್ಗ ಬಿ. ಹೆಚ್. ರಸ್ತೆಯ ಮೀನಾಕ್ಷಿ ಭವನ ಬಳಿ ಇರುವ ಬಿ ಇ ಓ ಕಚೇರಿ ಈಗ ನಯನ ಮನೋಹರವಾಗಿ ಸಿದ್ಧವಾಗಿದ್ದು ಅದೂ ಸಹ ಸರ್ಕಾರದ ಯಾವುದೇ ಅನುದಾನವನ್ನು ಪಡೆಯದೆ ಬಿ ಇ ಓ ರಮೇಶ್ ಸೇರಿದಂತೆ ಕಚೇರಿಯ ನೌಕರವರ್ಗ ಹಾಗೂ ಶಿಕ್ಷಕರು ಮತ್ತು ಉದಾರ ಮನಸ್ಸಿನ ಸ್ನೇಹಿತರು ಇಂತಹದೊಂದು ಸುಂದರವಾದ ಅಲಂಕಾರವನ್ನು ಕಚೇರಿಗೆ ಮಾಡಿಕೊಟ್ಟಿದ್ದು ಇದು ಎಲ್ಲಾ ಇಲಾಖೆಯ ಕಚೇರಿಗಳಿಗೆ ಮಾದರಿಯಾಗಿದೆ.









ಕಚೇರಿಯ ಒಳಾಂಗಣ ಹಾಗೂ ಹೊರಾಂಗಣವನ್ನು ಅತ್ಯಂತ ಸುಂದರವಾಗಿ ಸಿದ್ಧಪಡಿಸಲಾಗಿದೆ. ಬಣ್ಣ ಹಾಗೂ ಅಲ್ಲಲ್ಲಿ ಇದ್ದ ಬಹುತೇಕ ಹಾಳಾಗಿದ್ದ ಗೋಡೆಯನ್ನು ಸಿದ್ದಪಡಿಸಿದ್ದು ಅತ್ಯಂತ ವಿಶೇಷವಾಗಿ ಕಾಣುವಂತಹ ಆಕರ್ಷಕ ಬಣ್ಣ, ಟೈಲ್ಸ್ ಹಾಗೂ ಕಿಟಕಿಗಳಿಗೆ ಅಲಂಕಾರಿಕ ವಿನ್ಯಾಸವನ್ನು ನೀಡಲಾಗಿದೆ.- ಶಿಕ್ಷಣ ಇಲಾಖೆಯ ಅಧಿಕಾರಿಗಳು ಎಲ್ಲ ಶಾಲೆಗಳಿಗೆ ಭೇಟಿ ನೀಡುವ ಮೂಲಕ ಆ ಶಾಲೆಗಳ ಸ್ಥಿತಿಗತಿ ಶಿಕ್ಷಣದ ಗುಣಮಟ್ಟವನ್ನು ಪರಿಶೀಲಿಸುವುದು ಸಾಮಾನ್ಯ. ಇಂತಹ ಸಂದರ್ಭದಲ್ಲಿ ಶಾಲೆಯ ಸ್ವಚ್ಛತೆಯ ಬಗ್ಗೆ ತಿಳಿ ಹೇಳುವ ಅಧಿಕಾರಿಗಳು ತಮ್ಮ ಕಚೇರಿಯ ಬಗ್ಗೆ ಯೋಚಿಸಿದಾಗ ಏನು ಮಾಡಬಹುದು ಎಂಬ ಆಲೋಚನೆ ಬಂದ ಕೂಡಲೇ ಕೇವಲ ಮೂರು ತಿಂಗಳ ಅವಧಿಯಲ್ಲಿ ಸರ್ಕಾರದ ನೆರವಿಲ್ಲದೆ, ಉದಾರಿಗಳ ವಸ್ತು ಹಾಗೂ ಶ್ರಮದ ಸಹಾಯ ಬಳಸಿಕೊಂಡು ತಾವೂ ಸಹ ವಸ್ತು ಹಾಗೂ ಶ್ರಮವನ್ನು ನೀಡಿ “ನಮ್ಮ ಕಚೇರಿ” ಎಂಬ ಹಿರಿಮೆಯಲ್ಲಿ ಇಡೀ ಕಚೇರಿಯನ್ನು ಅತ್ಯಂತ ವ್ಯವಸ್ಥಿತವಾಗಿ ರೂಪಿಸುವಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಯಶಸ್ವಿಯಾಗಿದ್ದಾರೆ ಅವರ ತಂಡದ ಕಾರ್ಯ ಇತರರಿಗೆ ಮಾದರಿಯಾಗಿದೆ

ಬಿ ಇ ಓ ಕುಳಿತುಕೊಳ್ಳುವ ಕಚೇರಿಯ ಕೊಠಡಿ ಸೇರಿದಂತೆ ಎಲ್ಲಾ ಕೊಠಡಿಗಳಿಗೆ ಸಿಸಿ ಕ್ಯಾಮರಾ ಅಳವಡಿಸಲಾಗಿದೆ.- “ಸರ್ಕಾರಿ ಶಿಕ್ಷಕ” ಅನ್ನೋ ಪದಕ್ಕೆ ನಿಜವಾದ ಅರ್ಥ!
- *ಸರ್ಕಾರಿ ಶಾಲೆಯ ಚಿತ್ರಕಲಾ ಶಿಕ್ಷಕರಿಗೆ ಬಣ್ಣ ಕೊಟ್ಟು, ಕ್ಯಾನ್ವಾಸ್ ಕೊಟ್ಟು, ಸಮಯ ಕೊಟ್ಟರೆ…
- ಅವರು ಹಣಕ್ಕಾಗಿ ಅಲ್ಲ, ಮಕ್ಕಳಿಗಾಗಿ, ಶಿಕ್ಷಣಕ್ಕಾಗಿ ಬರೆಯುತ್ತಾರೆ.
- ಬೇರೆಡೆ ಪ್ರೊಫೆಷನಲ್ ಹತ್ರ ಬರೆಸಿದ್ದರೆ ಲಕ್ಷ ಲಕ್ಷ ಆಗುತ್ತಿತ್ತು.
- ಆದ್ರೆ ಇಲ್ಲಿ “ಪ್ರೀತಿ”ಯಿಂದ ಬಂದ ಕೆಲಸ.
- ಜೋಗ್ ಜಲಪಾತದ ಧುಮ್ಮಿಕ್ಕು
- ಕುವೆಂಪು, ಕುವೆಂಪು, ಅಂಬೇಡ್ಕರ್ ಅವರ ನೋಟ
- ಮಕ್ಕಳು ಓದುತ್ತಿರುವ ದೃಶ್ಯ
- ಕರ್ನಾಟಕದ ಸಂಸ್ಕೃತಿ
ಪ್ರತಿಯೊಂದು ಗೆರೆಗೂ ಒಬ್ಬ ಶಿಕ್ಷಕನ “ಇದು ನಮ್ಮ ಕಛೇರಿ” ಅನ್ನೋ ಹೆಮ್ಮೆ ಇರುತ್ತೆ.
ಬಿಇಓ ರಮೇಶ್ ಅವರು ಮಾಡಿದ ಅತ್ಯುತ್ತಮ ಕೆಲಸ ಇದೇ.
ಹೊರಗಿಂದ ತರೋ ಬದಲು, ನಮ್ಮಲ್ಲೇ ಇರೋ ಪ್ರತಿಭೆಗೆ ಅವಕಾಶ ಕೊಟ್ಟರು.
ಶಿಕ್ಷಕರಿಗೂ ಖುಷಿ, ಕಛೇರಿಗೂ ಕಳೆ.
ಹಣದಿಂದ ಕೊಳ್ಳೋಕೆ ಆಗದ “ಮನಮೋಹಕತೆ” ಅದಕ್ಕೆ ಬಂದಿದೆ.
“ಲೆಕ್ಕಕ್ಕೆ ಸಿಗದಷ್ಟು” ಮೌಲ್ಯ ಇದಕ್ಕೆ ಇದೆ.
ಆ ಚಿತ್ರಕಲಾ ಶಿಕ್ಷಕರಿಗೆ ನಮನಗಳು. - ಪಾರದರ್ಶಕವಾದ ಆಡಳಿತ ನೀಡಬೇಕು ಎಂಬ ಉದ್ದೇಶ ಇವರಾಗಿದೆ. ಜೊತೆಗೆ ಹಿಂದಿನ ಬಿಇಓಗಳ ವಿವರ, ಸಂವಿಧಾನ ಪ್ರತಿಜ್ಣೆ, ಡಾ. ಸರ್ವಪಲ್ಲಿ ರಾಧಾಕೃಷ್ಣ, ಗಾಂಧಿ, ಬಸವಣ್ಣ, ಅಂಬೇಡ್ಕರ್, ಕುವೆಂಪು ಮತ್ತಿತರ ಗಣ್ಯರನ್ನು ನೆನೆಯುವ ಚಿತ್ರಗಳ ಅಲಂಕಾರಿಕ ಪೋಟೋಗಳು ಕಂಡುಬರುತ್ತವೆ. ಎಲ್ಲಾಕಿಟಕಿ, ಬಾಗಿಲುಗಳಿಗೆ ಕರ್ಟನ್ ಅಳವಡಿಸಲಾಗಿದೆ. ಶಿಕ್ಷಕರಿಗೆ ನೀಡುವ ಮಾಹಿತಿ ಪೆಟ್ಟಿಗೆ ಸುಂದರವಾಗಿದೆ.
ಕಚೇರಿಯ ಹೊರಾಂಗಣ ಅತ್ಯಂತ ನಯನ ಮನೋಹರವಾಗಿದ್ದು, ಆಕರ್ಷಕವಾದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಶಿವಮೊಗ್ಗ ಎಂಬ ನಾಮಫಲಕ ಮನಮೋಹಕವಾಗಿದೆ.
ಅಂತೇಯೇ ಆವರಣದಲ್ಲಿದ್ದ ಗುಂಡಿ ಗೊಟರುಗಳ ಜಾಗಕ್ಕೆ ಕೆಂಪು ಮಣ್ಣನ್ನು ಹಾಕಿಸಿ, ಸುತ್ತಲೂ ಕಲ್ಲಿನ ಗೋಡೆಯನ್ನು ನಿರ್ಮಿಸಲಾಗಿದೆ. ಅದರ ಮೇಲೆ ಹಸಿರುಹುಲ್ಲಿನ ಹಾಸಿಗೆಯನ್ನು ಹಾಸಲಾಗಿದೆ ಎಂಬಂತೆ ಹುಲ್ಲನ್ನು ಬೆಳೆಸಲಾಗಿದೆ. ಆಕರ್ಷಕವಾದ ಅತ್ಯಂತ ಬೆಲೆ ಬಾಳುವ ಗಿಡಗಳನ್ನು ಸಹ ಇಲ್ಲಿ ನೆಡಲಾಗಿದೆ. ಅವುಗಳನ್ನು ಬೆಳೆಸುವ ಕಾರ್ಯ ಅದ್ಭುತವಾಗಿ ನಡೆಯುತ್ತಿದೆ. ಎರಡೇ ತಿಂಗಳಲ್ಲಿ ಈ ಕಾರ್ಯದಿಂದ ಇಡೀ ಜಿಲ್ಲೆಯೇ ಮೆಚ್ಚುವಂತಹ ಕಛೇರಿ ಇದಾಗಿದೆ.


ಅಂತೆಯೇ ಡಾ. ಸರ್ವಪಲ್ಲಿ ರಾಧಾಕೃಷ್ಣ ಅವರ ಪ್ರತಿಮೆಯನ್ನು ಇಡೀ ಕಚೇರಿಯ ಮಧ್ಯ ಭಾಗದಲ್ಲಿ ಹಾಗೂ ದ್ವಜ ಸ್ತಂಭದ ಹಿಂಭಾಗದಲ್ಲಿ ಅಳವಡಿಸಲಾಗಿದೆ.
ಅಂತೇಯೇ ರಾಷ್ಟ್ರ ಧ್ವಜವನ್ನು ಹಾರಿಸುವ ಧ್ವಜಸ್ತಂಬವನ್ನು ಮುಂದಣ ಜಾಗದಲ್ಲಿ ಮಾಡಿದ್ದು ನಯನ ಮನೋಹರವಾದ ವೇದಿಕೆಯನ್ನು ಅದಕ್ಕೆ ರೂಪಿಸಿಕೊಡಲಾಗಿದೆ. ಹಾಗೆಯೇ ಖಾಲಿ ಇದ್ದ ಗೋಡೆಗಳಿಗೆ ಬಣ್ಣ ಹೊಡೆಯುವ ಜೊತೆಗೆ ಆಕರ್ಷಕ ಚಿತ್ರಣಗಳನ್ನು ಮಕ್ಕಳ ಆಟೊಟಗಳ ನೋಟಗಳನ್ನು ನೀಡಲಾಗಿದೆ. ಕುವೆಂಪು, ಅಂಬೇಡ್ಕರ್, ಜೋಗ, ನಿಸಾರ್ ಅಹ್ಮದ್ ಅವರ ಮನೋಮೋಹಕ ಚಿತ್ರವನ್ನು ಸರ್ಕಾರಿ ಶಾಲೆಗಳ ಚಿತ್ರಕಲಾ ಶಿಕ್ಷಕರ ಬಿಡಿಸಿಕೊಟ್ಟಿದ್ದಾರೆ.
ಬೇರೆಯವರು ಈ ಚಿತ್ರ ಬಿಡಿಸಲು ಲಕ್ಷಾಂತರ ರೂಪಾಯಿ ಪಡೆಯುತ್ತಿದ್ದರು. ಆದರೆ ಚಿತ್ರಕಲಾ ಶಿಕ್ಷಕರು ಮನಮೋಹಕವಾದ ಚಿತ್ರಗಳನ್ನು ಎಲ್ಲಾ ಗೋಡೆಗಳು ಹಾಗೂ ಒಳಾಂಗಣದ ಕಾಂಪೌಂಡ್ ಗೆ ಬರೆದಿದ್ದಾರೆ. ಸುತ್ತಲೂ ಆಕರ್ಷಕವಾದ ಅಲಂಕಾರಿಕ ಸಸ್ಯಗಳನ್ನು ನೀಡಲಾಗಿದೆ. ಅವುಗಳಿಗೆ ನೀರು ಹಾಕಲು ಹಾಗೂ ಇತರ ವ್ಯವಸ್ಥೆಗೆ ಕಟ್ಟೆ ಕಟ್ಟಲಾಗಿದೆ.


ಇಷ್ಟೆಲ್ಲ ಕಾರ್ಯಗಳನ್ನು ಉದಾರ ಮನಸ್ಸಿನ ವ್ಯಕ್ತಿಗಳು ಮಾಡಿದ್ದು ಹೆಸರು ಹೇಳಲು ಅವರು ನಿರಾಕರಿಸಿರುವುದು ಅವರಲ್ಲಿರುವ ಗಟ್ಟಿತನಕ್ಕೆ ಹಾಗೂ ವ್ಯಕ್ತಿತ್ವಕ್ಕೆ ಬೆಲೆ ಕಟ್ಟಲಾಗದು ಎಂಬಂತಿದೆ.