ಶಿವಮೊಗ್ಗ : ರಾಷ್ಟ್ರಭಕ್ತರ ಬಳಗ ಮತ್ತು ಶ್ರೀ ಶನೈಶ್ಚರ ದೇವಾಲಯ ಸಮಿತಿ ಟ್ರಸ್ಟ್ವತಿಯಿಂದ ೬-೭-೨೦೨೬ರ ಸೋಮವಾರ ಬೆಳಿಗ್ಗೆ ೧೦ ಗಂಟೆಗೆ ಶುಭಮಂಗಳ ಸಮುದಾಯ ಭವನದ ಆವರಣದಲ್ಲಿ ಎಸ್ಐಆರ್ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಸೇವಾ ಕೇಂದ್ರ ಮತ್ತು ಸಹಾಯವಾಣಿ ಕೇಂದ್ರ ಉದ್ಘಾಟನೆಗೊಳ್ಳಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕದಲ್ಲಿ ಮತದಾರರ ವಿಶೇಷ ಪರಿಷ್ಕರಣೆ ಪ್ರಾರಂಭವಾಗಿ ಒಂದು ವಾರ ಪೂರೈಸುತ್ತಿದೆ. ಆದರೆ ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗದ ನಿರ್ಲಕ್ಷ್ಯದಿಂದ ರಾಜ್ಯ ಹಲವು ಕಡೆ ಎನ್ಯೂಮರೇಷನ್ ಫಾರಂ ವಿತರಣೆಯಲ್ಲಿ ಮತ್ತು ಭರ್ತಿಮಾಡುವಲ್ಲಿ ಅಕ್ರಮ ನಡೆಯುತ್ತಿದೆ. ನಿಯಮದ ಪ್ರಕಾರ ಬಿಎಲ್ಓಗಳು ಮತದಾರರ ಮನೆ ಬಾಗಿಲಿಗೆ

ಫಾರಂಗಳನ್ನು ತಲುಪಿಸಿ, ಅವರ ಇರುವಿಕೆಯನ್ನು ಪರಿಶೀಲಿಸಿ ಭರ್ತಿಮಾಡಲು ಹೇಳಬೇಕು. ಆದರೆ ಹಲವು ಕಡೆ ಒಂದು ಧರ್ಮದ ಶಾದಿ ಮಹಲ್ನಲ್ಲಿ ಒಂದು ಸಮುದಾಯದ ಜನರನ್ನು ಸೇರಿಸಿ ಅವರಿಗೆ ಫಾರಂ ವಿತರಿಸಿ, ಸಾಮೂಹಿಕವಾಗಿ ಭರ್ತಿಮಾಡುತ್ತಿರುವುದು ಆತಂಕಕಾರಿ ವಿಷಯವಾಗಿದ್ದು, ಕೇಂದ್ರ ಚುನಾವಣಾ ಆಯೋಗ ಯಾವ ಉದ್ದೇಶದಿಂದ ಎಸ್ಐಆರ್ ಮಾಡುತ್ತಿದೆಯೋ ಅದರ ತದ್ವಿರುದ್ಧವಾಗಿ ಮತದಾರರ ಪಟ್ಟಿಯಲ್ಲಿ ಸೇರಿಸುತ್ತಿರುವ ಕಾನೂನು ಬಾಹಿರ ಚಟುವಟಿಕೆಗಳು ಅವ್ಯಾಹತವಾಗಿ ನಡೆಯುತ್ತಿದ್ದು, ಈ ರೀತಿಯ ಅಕ್ರಮಗಳು ಶಿವಮೊಗ್ಗದಲ್ಲಿ ನಡೆಯದಂತೆ ನಿಗಾವಹಿಸಲು ರಾಷ್ಟ್ರಭಕ್ತರ ಬಳಗದವತಿಯಿಂದ ನಗರದ ಪ್ರತಿಯೊಂದು ಬೂತ್ಗಳಲ್ಲೂ ಬಿಎಲ್ಎಗಳನ್ನು ನೇಮಿಸಿ, ನೈಜ ಮತ್ತು ಉತ್ಕೃಷ್ಟ ಮತದಾರರ ಪಟ್ಟಿಯನ್ನು ತಯಾರಿಸಲು ನಮ್ಮ ಕಾರ್ಯಕರ್ತರು ನೆರವಾಗುತ್ತಿದ್ದಾರೆ ಎಂದರು.

ಅಲ್ಲದೆ ಎನ್ಯೂಮರೇಷನ್ ಫಾರಂ ಪಡೆದ ಹಿರಿಯ ನಾಗರೀಕರಿಗೆ, ಕೂಲಿ ಕಾರ್ಮಿಕರಿಗೆ ಕೊಳಗೇರಿ ನಿವಾಸಿಗಳಿಗೆ ಫಾರಂ ಭರ್ತಿಮಾಡಲು ತೊಂದರೆಯಾಗುತ್ತಿದ್ದು, ರಾಷ್ಟ್ರಭಕ್ತರ ಬಳಗ ಮತ್ತು ಶನೈಶ್ಚರ ದೇವಾಲಯ ಸಮಿತಿ ಸಹಯೋಗದೊಂದಿಗೆ ಶುಭ ಮಂಗಳ ಸಮುದಾಯ ಭವನದ ಆವರಣದಲ್ಲಿ ಸೇವಾ ಕೇಂದ್ರವನ್ನು ಆರಂಭಿಸಲಿದ್ದು, ಹಿರಿಯ ವಕೀಲರು, ಖ್ಯಾತ ಸಾಹಿತಿಗಳಾದ ಎಂ.ಆರ್.ಸತ್ಯನಾರಾಯಣ್ರವರು ಜುಲೈ ೬ರಂದು ಬೆಳಿಗ್ಗೆ ೧೦ಗಂಟೆಗೆ ಈ ಕೇಂದ್ರವನ್ನು ಉದ್ಘಾಟಿಸಿ, ಎಸ್ಐಆರ್ ಬಗ್ಗೆ ಮಾಹಿತಿ ನೀಡಲಿದ್ದಾರೆ. ಈ ಸಹಾಯವಾಣಿ ಕೇಂದ್ರವು ಸೆಪ್ಟಂಬರ್ ೪ರ ವರೆಗೆ ಕಾರ್ಯಾಚರಿಸಲಿದ್ದು, ಬೆಳಿಗ್ಗೆ ೯.೦೦ರಿಂದ ರಾತ್ರಿ ೯-೦೦ರ ವರೆಗೆ ಕಾರ್ಯನಿರ್ವಹಿಸಲಿದ್ದು, ಮತದಾರರು

ಎನ್ಯೂಮರೇಷನ್ ಫಾರಂ ತುಂಬಲು, ೨೦೦೨ರ ಮತದಾರರ ಪಟ್ಟಿಯ ಮಾಹಿತಿ ಪಡೆಯಲು, ವಿಧಾನಸಭಾ ಕ್ಷೇತ್ರ, ಕ್ರಮ ಸಂಖ್ಯೆ, ಭಾಗಸಂಖ್ಯೆ, ತಮ್ಮ ಬೂತ್ನ ಬಿಎಲ್ಓ ಅವರ ಹೆಸರು ಮತ್ತು ದೂರವಾಣಿ ಸಂಖ್ಯೆ ವಿವರ ಹಾಗೂ ಎಸ್ಐಆರ್ ಬಗೆಗಿನ ಯಾವುದೇ ಮಾಹಿತಿಗಾಗಿ ಖುದ್ಧಾಗಿ ಭೇಟಿ ನೀಡಬಹುದು. ಅಥವಾ ದೂರವಾಣಿ ಮೂಲಕ ಕರೆಮಾಡಿ, ಸಹಾಯಪಡೆಯಬಹುದು ಎಂದರು.
ದೂರವಾಣಿ ಸಂಖ್ಯೆ : ಶ್ರೀಕಾಂತ್, ಮೊ.೯೯೦೦೮೫೫೪೦೪, ಕುಬೇರಪ್ಪ, ಮೊ.೯೨೪೨೪೧೫೮೫೬, ಅರುಣ್, ಮೊ.೯೬೬೩೫೩೫೬೪೬, ಹರ್ಷ, ಮೊ.೭೦೨೬೮೯೨೧೨೩ಯನ್ನು ಸಂಪರ್ಕಿಸಬಹುದು ಎಂದರು.
ಸುದ್ದಿಗೋಷ್ಠಿಯಲ್ಲಿ ರಾಷ್ಟ್ರಭಕ್ತ ಬಳಗದ ಪ್ರಮುಖರಾದ ಕೆ.ಈ.ಕಾಂತೇಶ್, ಶ್ರೀಕಾಂತ್, ವಿ.ರಾಜು, ಶಿವಾಜಿ, ರಮೇಶ್ ಬಾಬು, ಶ್ರೀನಿವಾಸ್, ಮೋಹನ್ ಜಾದವ್, ಕುಬೇರಪ್ಪ ಮತ್ತಿತರರಿದ್ದರು.
ಅನೇಕ ಕಡೆ ಮದರಸಾ, ಮಸೀದಿ ಮತ್ತು ಕಲ್ಯಾಣ ಮಂದಿರಗಳಲ್ಲಿ ಸಾಮೂಹಿಕವಾಗಿ ಎಸ್ಐಆರ್ ಫಾರಂನ್ನು ವಿತರಿಸುತ್ತಿರುವುದು ಎಸ್ಐಆರ್ ಪ್ರಕ್ರಿಯೆಗೆ ವಿರುದ್ಧವಾಗಿದ್ದು, ರಾಜ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ರವರು ಈ ಬಗ್ಗೆ ಪತ್ರಿಕಾ ಸಂದರ್ಶನದಲ್ಲಿ ಒಪ್ಪಿಕೊಂಡಿದ್ದರೂ ಸಹ ಇದೂವರೆಗೆ ಒಬ್ಬರ ಮೇಲೂ ಕ್ರಮ ಜರುಗಿಸಿಲ್ಲ. ಮೂರೇ ದಿನಕ್ಕೆ ಕಾಂಗ್ರೆಸ್ಸಿನ ನಿಜಬಣ್ಣ ಬಯಲಾಗಿದೆ. ರಾಜ್ಯದ ಅನೇಕ ಭಾಗಗಳಲ್ಲಿ ಒಂದೇ ಸಮುದಾಯದ ಮತದಾರರನ್ನು ಗುಡ್ಡೆಹಾಕಿ, ಫಾರಂ ವಿತರಣೆ ಮತ್ತು ಭರ್ತಿಮಾಡುವ ಕೆಲಸ ನಡೆಯುತ್ತಿದೆ. ಈ ಅಕ್ರಮಗಳ ಬಗ್ಗೆ ಗಮನಕ್ಕೆ ತಂದರೂ ಇದೂವರೆಗೂ ಯಾರೊಬ್ಬರ ಮೇಲೂ ಕ್ರಮ ಆಗಿಲ್ಲ. ಅರೆಸ್ಟ್ ಮಾಡಿಲ್ಲ. ಈ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರದ ಅಧಿಕಾರಿಗಳೇ ಭಾಗವಹಿಸುತ್ತಿರುವುದರಿಂದ ಅವರಿಗೆ ಕ್ರಮ ಕೈಗೊಳ್ಳಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಿ ತೆರಳಲಿ. ಇಲ್ಲವಾದಲ್ಲಿ ಕೇಂದ್ರದ ಅಧಿಕಾರಿಗಳನ್ನು ಬಳಸಿಕೊಳ್ಳಿ. ಗೃಹಸಚಿವ ಪ್ರಿಯಾಂಕ್ ಖರ್ಗೆ ಕೂಡ ಸಾಮೂಹಿಕವಾಗಿ ಸಮುದಾಯ ಭವನಗಳಲ್ಲಿ ಎಸ್ಐಆರ್ ನಿಯಮಾವಳಿ ಉಲ್ಲಂಘಿಸಿದ್ದು ಕಂಡುಬಂದಲ್ಲಿ ಕಠಿಣಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಆದರೆ ಇದೂವರೆಗೂ ಯಾರ ಮೇಲೂ ಕ್ರಮ ಕೈಗೊಂಡಿಲ್ಲ. ಸರ್ಕಾರ ಕೂಡ ಮೌನವಹಿಸಿರುವುದು ಸಂಶಯ ಉಂಟುಮಾಡಿದೆ. ರಾಷ್ಟ್ರಭಕ್ತರ ಬಳಗ ಈ ಅಕ್ರಮಗಳಿಗೆ ಅವಕಾಶ ಕೊಡುವುದಿಲ್ಲ.
-ಕೆ.ಎಸ್.ಈಶ್ವರಪ್ಪ