ಶಿವಮೊಗ್ಗ: ಶಿವಮೊಗ್ಗದ ನೆಹರೂ ರಸ್ತೆಯಲ್ಲಿರುವ ಬಟ್ಟೆ ಅಂಗಡಿಯಲ್ಲಿ ಕಳ್ಳತನವಾಗಿದೆ.
ಲಾಕ್ ಡೌನ್ ನಿಂದಾಗಿ ಬಟ್ಟೆ ಅಂಗಡಿಗಳು ಕಳೆದ ಹಲವು ದಿನಗಳಿಂದ ಬಂದ್ ಆಗಿವೆ. ಈ ಹಿನ್ನಲೆಯಲ್ಲಿ ನೆಹರೂ ರಸ್ತೆಯಲ್ಲಿರುವ ಪೊಲೋ ಎಂಬ ಬಟ್ಟೆ ಅಂಗಡಿಯಲ್ಲಿ ಶೆಟರ್ ನ ಬೀಗ ಮುರಿದು ಕಳ್ಳರು ಕ್ಯಾಶ್ ಡ್ರಾದಲ್ಲಿದ್ದ 300 ರೂ ಹಾಗೂ ಬಟ್ಟೆಯನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಮಾಲೀಕ ಇಜಾಜ್ ಅವರ ದೂರಾಗಿದೆ.
ರಾಗಿಗುಡ್ಡದ ನಿವಾಸಿ ಇಜಾಜ್ ಅಹ್ಮದ್ ಖಾದ್ರಿಯವರು ಲಾಕ್ ಡೌನ್ ಆರಂಭವಾದಾಗಿನಿಂದ ಅಂಗಡಿ ಬಂದ್ ಮಾಡಿಕೊಂಡು ಹೋಗಿದ್ದಾರು. ಆದರೆ ಇಂದು ಈ ಘಟನೆ ನಡೆದಿದೆ. ಸ್ಥಳಕ್ಕೆ ಕೋಟೆ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

You missed

error: Content is protected !!