ಶಿವಮೊಗ್ಗ ,ಜೂ.17:
ಕೊರೊನಾ ಸಂಕಷ್ಟ ಕಾಲದಲ್ಲಿ ಮಗಳ ಜನ್ಮದಿನವನ್ನು ವಿಭಿನ್ನ ರೀತಿಯಲ್ಲಿ ಆಚರಿಸಿದ ದಂಪತಿಗಳ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.
ಉದ್ಯಮಿ ಹಾಗೂ ಹಿರಿಯ ಪತ್ರಕರ್ತ ಗೋಪಾಲ ಎಸ್. ಯಡಗೆರೆ ಮತ್ತು ಲತಾ ದಂಪತಿಗಳು ತಮ್ಮ ಮಗಳು ಅನನ್ಯಳ ಹುಟ್ಟು ಹಬ್ಬದ ನಿಮಿತ್ತ ಪತ್ರಿಕಾ ವೃತ್ತಿಯಲ್ಲಿರುವವರಿಗೆ ಹಾಗೂ ಸಮಾಜದ ಬಡ ಜನರಿಗೆ
ಆಹಾರ ಕಿಟ್ ನೀಡುವುದರ ಮೂಲಕ ಕಷ್ಟದಲ್ಲಿದ್ದವರಿಗೆ ನೆರವಿನ ಹಸ್ತ ಚಾಚಿದ್ದಾರೆ.
ಮಗಳು ಅನನ್ಯ ಹುಟ್ಟು ಹಬ್ಬದಂದು ಸುಮಾರು 40 ಮಂದಿಗೆ ಆಹಾರ ಕಿಟ್ ವಿತರಣೆ ಮಾಡಿದರು. ಕೊರೊನಾ ಸಂಕಷ್ಟಕ್ಕೆ ಮಿಡಿದ ದಂಪತಿಗಳ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ. ಮಗಳ ಹುಟ್ಟು ಹಬ್ಬದ ಸಂಭ್ರಮಾಚರಣೆಯ ಬದಲು ಅದರ ಹಣದಲ್ಲಿ ಕೊರೋನಾ ಲಾಕ್ ಡೌನ್ ನಿಂದಾಗಿ ತೊಂದರೆಗೆ ಸಿಲುಕಿದವರಿಗೆ ಆಹಾರದ ಕೀಟಗಳನ್ನು ನೀಡುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಸಾಗರ ರಸ್ತೆಯಲ್ಲಿರುವ ಜಿ.ಆರ್. ಎಂಟರ್ಪ್ರೈಸಸ್ ಸಂಸ್ಥೆಯ ಕಚೇರಿ ಆವರಣದಲ್ಲಿ ಗುರುವಾರ ನಡೆದ ಸರಳ ಸಮಾರಂಭದಲ್ಲಿ ಆಹಾರ ಕಿಟ್ ವಿತರಣೆ ಸಮಾರಂಭ ನಡೆಯಿತು.
ಸಮಾರಂಭದಲ್ಲಿ ವಾರ್ತಾ ಇಲಾಖೆ ಹಿರಿಯ ಸಹಾಯಕ ಅಧಿಕಾರಿ ಶಫಿ ಸಾದುದ್ದೀನ್ ಮಾತನಾಡಿ, ಕೊರೋನ ಹಲವು ಸಂಕಷ್ಟಗಳನ್ನು ತಂದೊಡ್ಡಿದೆ. ಅನೇಕರು ಆರ್ಥಿಕವಾಗಿ ತೊಂದರೆಗೆ ಸಿಲುಕಿದ್ದಾರೆ. ಈ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿರುವವರಿಗೆ ತಮ್ಮ ಕೈಲಾದ ಸಹಾಯ ಮಾಡಬೇಕು ಎಂದು ಆಹಾರದ ಕಿಟ್ ವಿತರಿಸುತ್ತಿರುವುದು ನಿಜಕ್ಕೂ ಮಾದರಿ ಕಾರ್ಯ ಎಂದರು.
ಕಷ್ಟದ ಸಂದರ್ಭದಲ್ಲಿ ಸ್ಪಂದಿಸಬೇಕಾದ ಮಾನವ ಧರ್ಮ. ಈ ನಿಟ್ಟಿನಲ್ಲಿ ಪತ್ರಕರ್ತರಾದಂತಹ ಗೋಪಾಲ ಯಡಗೆರೆ ಅವರು ತಮ್ಮ ಸಹೋದ್ಯೋಗಿಗಳಿಗೆ ಸಹಾಯ ಹಸ್ತ ಚಾಚಿದ್ದಾರೆ. ಇದು ಇನ್ನಷ್ಟು ಮಂದಿಗೆ ಸ್ಪೂರ್ತಿಯಾಗಲಿ ಎಂದು ಆಶಿಸಿದರು.
ಹಿರಿಯ ಪತ್ರಕರ್ತ ಎಸ್. ಚಂದ್ರಕಾಂತ್ ಮಾತನಾಡಿ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಿಗೆ ಸಹಾಯ ಹಸ್ತ ಚಾಚಿರುವುದು ಅನುಕರಣೀಯ. ಗೋಪಾಲ್ ಯಡಗೆರೆ ಅವರ ಕಾರ್ಯ ಎಲ್ಲರಿಗೂ ಸ್ಪೂರ್ತಿ ನೀಡಲಿ. ದೇವರು ಅವರಿಗೆ ಇನ್ನಷ್ಟು ಸಹಾಯ ಮಾಡುವ ಶಕ್ತಿ ಕರುಣಿಸಲಿ ಎಂದು ಹೇಳಿದರು.

ಶಿವಮೊಗ್ಗ ಮಹಾನಗರ ಪಾಲಿಕೆ ಪ್ರಕಟಣೆ

  • ಕೊರೋನಾ ಮಹಾಮಾರಿ ರಾಜ್ಯಾದ್ಯಂತ ವ್ಯಾಪಿಸುತ್ತಿದೆ.
    ಕೋವಿಡ್ ಮಾರ್ಗಸೂಚಿ ತಪ್ಪದೇ ಪಾಲಿಸಿ, ಆರೋಗ್ಯದಿಂದಿರಿ. ರಾಜ್ಯ ಸರ್ಕಾರದಿಂದ ಮೇ. 10 ರಿಂದ ಜೂ.14 ರ ಬೆಳಿಗ್ಗೆ 6 ರವರೆಗೆ ಲಾಕ್ ಡೌನ್ ವಿಧಿಸಲಾಗಿರುತ್ತದೆ.
    ” ಯಾವುದೇ ಮದುವೆಗೆ ಗರಿಷ್ಟ 40 ಜನರಿಗೆ ಮಾತ್ರ ಅವಕಾಶ. ಪಾಸ್ ಕಡ್ಡಾಯ.
    ” ನಿಧನ-ಶವಸಂಸ್ಕಾರ ಐವರಿಗೆ ಮಾತ್ರ ಅವಕಾಶ.
  • ಪ್ರತಿದಿನ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ, ಮನೆಗೆ ಬೇಕಾದ ಅವಶ್ಯಕ ಸಾಮಾಗ್ರಿಗಳು, ಆಹಾರ, ದಿನಸಿ, ಹಣ್ಣು, ತರಕಾರಿ, ಮೀನು, ಮಾಂಸ ಹಾಗೂ ಮದ್ಯ , ಡೈರಿ ಮತ್ತು ಹಾಲಿನ ಬೂತ್ ಗಳು ಹೋಟೆಲ್ ಗಳಲ್ಲಿ ಪಾರ್ಸೆಲ್ ವ್ಯವಸ್ಥೆ ಕಾರ್ಯ ನಿರ್ವಹಿಸಲಿವೆ.
    ಶಿವಮೊಗ್ಗ ನಗರದ ಆರು ಭಾಗದಲ್ಲಿ ಮಾತ್ರ ತರಕಾರಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ.
  • ಬ್ಯಾಂಕ್, ಎಟಿಎಂ ತೆರೆದಿರುತ್ತದೆ.
  • ಅಗತ್ಯ ವೈದ್ಯಕೀಯ ಸೇವೆಗಳು ದಿನದ 24 ಗಂಟೆಗಳು ಕಾರ್ಯನಿರ್ವಹಿಸಲಿವೆ.
    *ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ.
    *ನೀವು ಆರೋಗ್ಯವಾಗಿರಿ – ಸಮಾಜವನ್ನು ಆರೋಗ್ಯವಾಗಿಡಿ.
  • ನಿಯಮ ಪಾಲನೆ ಮಾಡಿ – ದಂಡ ಪಾವತಿಯಿಂದ ದೂರವಿರಿ.


ಪ್ರೆಸ್ ಟ್ರಸ್ಟ್ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಹಲವರ ಬಳಿ ಹಣ ಇರುತ್ತದೆ. ಆದರೆ ದಾನಮಾಡುವ ಮನಸ್ಸು ಇರುವುದಿಲ್ಲ. ಇನ್ನು ಕೆಲವರು ಸೇವೆಯೇ ತಮ್ಮ ಜೀವನದ ಗುರಿ ಎಂದು ಭಾವಿಸಿ ಕೈಲಾದ ಸಹಾಯಕ್ಕೆ ಮುಂದಾಗುತ್ತಾರೆ. ಆ ಸಾಲಿಗೆ ಪತ್ರಕರ್ತರಾದಂತಹ ಗೋಪಾಲ್ ಯಡಗೆರೆಯವರು ಸೇರುತ್ತಾರೆ ಎಂದರು.
ಉದ್ಯಮಿ ಹಾಗೂ ಪತ್ರಕರ್ತರಾದಂತಹ ಗೋಪಾಲ ಯಡಗೆರೆ ಮಾತನಾಡಿ, ಕೊರೋನ ಸಂಕಷ್ಟಕ್ಕೆ ಸಿಲುಕಿರುವ ಅವರಿಗೆ ಅನೇಕರು ಸಹಾಯ ಹಸ್ತ ಚಾಚುತ್ತಿದ್ದಾರೆ. ಅದರಲ್ಲಿ ತಾವು ಕೂಡ ಭಾಗಿಯಾಗಬೇಕು ಎಂಬ ಹಂಬಲ ಇತ್ತು. ಹೀಗಾಗಿ ತಮ್ಮ ಮಿತಿಯಲ್ಲಿ ಈ ಒಂದು ಕಾರ್ಯ ನಡೆಸಿದ್ದೇನೆ ಎಂದು ಹೇಳಿದರು.
ಪತ್ರಿಕಾ ವೃತ್ತಿಯಲ್ಲಿರುವ ಹಲವರು ಕೋರೋಣ ಸಂಕಷ್ಟಕ್ಕೆ ಸಿಲುಕಿದ್ದಾರೆ. ವೃತ್ತಿಬಾಂಧವರಿಗೆ ತಮ್ಮ ಕೈಲಾದ ಸಹಾಯ ಮಾಡಬೇಕು ಎಂಬ ಉದ್ದೇಶ ನನ್ನದು. ಈ ಒಂದು ಕಾರ್ಯಕ್ಕೆ ನನ್ನ ಕುಟುಂಬ ಹಾಗೂ ಸ್ನೇಹಿತರು ಸಹಮತ ವ್ಯಕ್ತಪಡಿಸಿದರು. ಅಲ್ಲದೆ ಹಿಂದೆ ನನ್ನ ಮಗಳು ಅನನ್ಯಳ ಜನ್ಮದಿನವೂ ಇತ್ತು. ಮಗಳ ಜನ್ಮದಿನದ ನೆನಪಿಗಾಗಿ 40 ಜನರಿಗೆ ಕೈಲಾದ ನೆರವು ನೀಡಿದ್ದೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿ.ಆರ್. ಎಂಟರ್ಪ್ರೈಸಸ್ ವ್ಯವಸ್ಥಾಪಕರಾದ ಲತಾ ಯಡಗೆರೆ, ಜಿ. ಆರ್. ಎಂಟರ್ಪ್ರೈಸಸ್ ಮ್ಯಾನೇಜರ್ ಸುರೇಶ್, ಪತ್ರಕರ್ತರಾದ ಹುಲಿಮನೆ ತಿಮ್ಮಪ್ಪ, ಚಂದ್ರಹಾಸ್, ವೈದ್ಯನಾಥ್, ನಾಗರಾಜ ನೇರಿಗೆ, ಶಾಂತಕುಮಾರ್, ಅರವಿಂದ್, ಮೋಹನ್, ಹಾಗೂ ಮುರಳಿಧರ್, ಕಾರ್ತಿಕ್ ಮತ್ತಿತರರು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!