ಶಿವಮೊಗ್ಗ: ಸಹ್ಯಾದ್ರಿ ಕಲಾತಂಡ, ಕಡೇಕೊಪ್ಪಲ ಪ್ರತಿಷ್ಠಾನ ವತಿಯಿಂದ ಏಪ್ರಿಲ್ 14 ರಿಂದ ಮೇ 1 ರವರೆಗೆ 13ನೇ ವರ್ಷದ ‘ಅಜ್ಜಿಯ ಅಂಗಳ ಅಜ್ಜನ ಜಗಲಿ’ ಮಕ್ಕಳ ಬೇಸಿಗೆ ರಂಗ ಶಿಬಿರವನ್ನು ಡಾ.ಲವ ಜಿ.ಆರ್. ರಂಗ ನಿರ್ದೇಶಕರು ಇವರ ನಿರ್ದೇಶನದಲ್ಲಿ ಸಹ್ಯಾದ್ರಿ ಕಾಲೇಜಿನ ಬಾಲಕರ ಹೊಸ ವಸತಿ ನಿಲಯದಲ್ಲಿ ಆಯೋಜಿಸಲಾಗಿದೆ.
‘ಅಜ್ಜಿಯ ಅಂಗಳ ಅಜ್ಜನ ಜಗಲಿ’ ಬೇಸಿಗೆ ರಂಗ ಶಿಬಿರವು ಪೂರ್ಣ ಪ್ರಮಾಣದ ರಂಗ ಶಿಬಿರವಾಗಿದ್ದು, ಶಿಬಿರದಲ್ಲಿ ರಂಗ ಶಿಕ್ಷಣದ ಮೂಲಕ ಮಕ್ಕಳ ಶೈಕ್ಷಣಿಕ ಮತ್ತು ಬೌದ್ಧಿಕ ಸಾಮಾರ್ಥ್ಯವನ್ನು ಗಟ್ಟಿಗೊಳಿಸುವ ಶಿಬಿರವಾಗಿರುತ್ತದೆ. ಹಳ್ಳಿಯ ಆಟಗಳು, ಹಾಡು, ಹಸೆ, ಕುಣಿತ, ಚಿತ್ರಕಲೆ, ಕ್ರಾಫ್ಟ್, ಏರೋಬಿಕ್ಸ್, ಯೋಗ, ರಂಗಾಟಗಳ ಮೂಲಕ ಸಾಮಾರ್ಥ್ಯದ ಅರಿವನ್ನು ನೀಡಲಾಗುವುದು. ರಾಜ್ಯದ ಪ್ರತಿಭಾವಂತ ಹಲವು ಕಲೆಗಳ ತಜ್ಞರು, ನೀನಾಸಂ ಪದವೀದರರು, ಜನಪದ ಮತ್ತು ಸಂಗೀತ ಕಲಾವಿದರು ತರಭೇತಿ ನೀಡುವರು.

ಮಕ್ಕಳ ಮನೋವಿಕಾಸಕ್ಕೆ ಅನ್ವಯಿಕ ವಿಜ್ಞಾನದ ಮೂಲಕ ಮನೋವಿಕಾಸಕ್ಕೆ ಬೇಕಾದ ರಂಗಾಟಗಳ ಮೂಲಕ, ರಂಗ ವಿಜ್ಞಾನವನ್ನು ಅಳವಡಿಸಿ ದೇಹ ಮತ್ತು ಮನಸ್ಸನ್ನು ಸಿದ್ದಗೊಳಿಸಿ ಪರಿಸರ ಮಹತ್ವ, ನೆನಪಿನ ಶಕ್ತಿ, ತರ್ಕ, ವೈಚಾರಿಕತೆಯನ್ನು ಹೇಳಿಕೊಡಲಾಗುವುದು.
ಮಾನವೀಯ ಮೌಲ್ಯ, ಬುದ್ದಿ ಪ್ರಧಾನ, ಬೋಧ ಪ್ರಧಾನ ಕಲಿಕೆ, ಅನ್ವಯಿಕ ರಂಗಶಿಕ್ಷಣದ ಮೂಲಕ ನಾಟಕಗಳನ್ನು ಕಲಿಸಿ, ಸಿದ್ಧಪಡಿಸಿದ ನಾಟಕಗಳನ್ನು ಮೇ 1 ರಂದು ರಂಗಾಯಣ ಶಿವಮೊಗ್ಗ ಇಲ್ಲಿ ನಾಟಕ ರಂಗ ಗೀತೆ, ಇತರ ಕಲೆಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ. 50 ಮಕ್ಕಳಿಗೆ ಮಾತ್ರ ಅವಕಾಶವಿರುತ್ತದೆ. ಹೆಸರು ನೋಂದಾಯಿಸಲು ದೂರಾವಾಣಿ ಸಂಖ್ಯೆ 9449201919 ಮತ್ತು 7619422679, ಹರ್ಷ ಸಿ.ಎಂ. 8884818529 ಇವರಲ್ಲಿ ಹೆಸರು ನೋಂದಾಯಿಸಲು ಶಿಬಿರದ ನಿರ್ದೇಶಕ ಡಾ.ಲವ ಜಿ.ಆರ್ ಪ್ರಕಟಣೆಯಲ್ಲಿ ಕೋರಿದ್ದಾರೆ.