ಶಿಕಾರಿಪುರ,ಮಾ.04:
ಯುವ ನಾಯಕರು, ಶಿಕ್ಷಣ ಸಚಿವರು, ಹಾಗು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪನವರ ಹುಟ್ಟು ಹಬ್ಬದ ಪ್ರಯುಕ್ತ ಉಳ್ಳಿ ಫೌಂಡೇಶನ್ ವತಿಯಿಂದ ಶಿಕಾರಿಪುರ ತಾಲೂಕಿನ ಕಲ್ಮನೆ ಗ್ರಾಮದ ಸರ್ಕಾರಿ ಶಾಲೆಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಾಮಗ್ರಿ ವಿತರಣೆ, ಸಿಹಿ ಹಂಚಿ, ಕೇಕ್ ಕತ್ತರಿಸುವ ಮೂಲಕ ಅರ್ಥ ಪೂರ್ಣವಾಗಿ ಹುಟ್ಟು ಹಬ್ಬ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಉಳ್ಳಿ ಫೌಂಡೇಶನ್ ಅದ್ಯಕ್ಷರು ಹಾಗು ಪುರಸಭಾ ಸದಸ್ಯರಾದ ಉಳ್ಳಿ ದರ್ಶನ್ ರವರು, ನಮ್ಮ ನಾಯಕರು, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪನವರ ಹುಟ್ಟು ಹಬ್ಬವನ್ನು ಇಂದು ಅರ್ಥ ಪೂರ್ಣವಾಗಿ ಆಚರಿಸಿದ್ದು, ಯುವ ಶಕ್ತಿಯ ಆಶಾಕಿರಣ ಹಾಗು ಬಡವರ ಬಂಧು ನಮ್ಮ ನಾಯಕರು ಮದಣ್ಣನವರು, ಶಿಕ್ಷಣ ಸಚಿವರಾದ ಮೇಲೆ ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಪಾರದರ್ಶಕ ಆಡಳಿತ ಮಾಡುತಾ, ಶಿಕ್ಷಣದಿಂದ ಯಾರು ವಂಚಿತರಾಗದಂತೆ ದಿಟ್ಟ ಹೆಜ್ಜೆಯ ಜೊತೆಗೆ, ಮಕ್ಕಳಿಗೆ ಪೌಷ್ಠಿಕಾಂಶದ ಕೊರತೆ ಆಗದಂತೆ ವಾರದ ಮೂರು ದಿನ ರಾಗಿ ಮಾಲ್ಟ್ ವಿತರಣೆ, ಹಾಗು ಶಾಲೆಗಳ ದುರಸ್ತಿ ಮುಂತಾದ ಅಭಿವೃದ್ದಿ ಕೆಲಸ ಮಾಡುವ ಮೂಲಕ ಮಾದರಿ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ, ಅವರ ಕಾರ್ಯ ಶ್ಲಾಘನೀಯ ಎಂದರು. ಅದೇ ರೀತಿ ಅವರ ಆಶಯದಂತೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಾಮಗ್ರಿ ಗಳನ್ನು ನೀಡಿ ಅವರಿಂದ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ಅರ್ಥ ಪೂರ್ಣವಾಗಿ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸುರೇಶ್ ಗುಡ್ಡಳ್ಳಿ, ಬಡಗಿ ಪಾಲಾಕ್ಷಪ್ಪ, ದಯಾನಂದ ಗಾಮ, ವೀರೇಶ್ ಜೋಗಿಹಳ್ಳಿ, ಕುಮಾರ್, ರಾಜೀವ್, ಪರಶುರಾಮ್, ಎನ್ ಎಸ್ ಯು ಐ ಅಧ್ಯಕ್ಷ ಸಮೀರ್, ಅಹಮದ್ ಖಾನ್, ಎಸ್ ಡಿ ಎಂ ಸಿ ಅಧ್ಯಕ್ಷ ತಮ್ಮಣ್ಣ, ನಾಗರಾಜ್ ಕೆ. ಎಂ, ಗಣಪತಿ, ಅಮ್ಜದ್ ಖಾನ್, ಫೈರೋಜ್, ಮಂಜುನಾಥ್ ಟಿ ವಿ, ಶರತ್, ಸಾಮ್ರಾಟ್ ಯು ಕೆ, ಊರಿನ ಗ್ರಾಮಸ್ಥರು ಮುಂತಾದವರು ಪಾಲ್ಗೊಂಡಿದ್ದರು.