ಶಿವಮೊಗ್ಗ : ವಿದೇಶಿ ಮೂಲದಿಂದ ಅಂತರಾಷ್ಟ್ರೀಯ ಕರೆ ಬಂದಿರುವ ಕಾರಣ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಇಂದು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ನನ್ನ ದೂರವಾಣಿ ಸಂಖ್ಯೆ ೯೮೮೦೦೩೦೦೦೪ಕ್ಕೆ ದಿನಾಂಕ ೦೭-೦೧-೨೦೨೬ರಂದು ವಿದೇಶಿ ಮೂಲದಿಂದ ಅಂತರಾಷ್ಟ್ರೀಯ ಮೊಬೈಲ್ ದೂರವಾಣಿ ಸಂಖ್ಯೆ +೩೫೮೪೬೫೪೪೫೦೬೯ ಕರೆಬಂದಿದ್ದು, ಕಾಲ್ ಕಟ್ಮಾಡಿದ್ದು ನಾನು ಮತ್ತೆ ಆ ನಂಬರಿಗೆ ಸಂಪರ್ಕಿಸಿದಾಗ ಅವರು ಸಂಪರ್ಕವನ್ನು ಕಟ್ ಮಾಡಿದ್ದಾರೆ.
ಈ ಹಿಂದೆ ಕೂಡ ನನಗೆ ಎರಡು ಬಾರಿ ಈ ರೀತಿಯ ಕರೆ ಬಂದಿರುತ್ತದೆ. ಆಗ ಸೂಕ್ತ ತನಿಖೆ ಮಾಡಬೇಕೆಂದು ಹಾಗೂ ಹೆಚ್ಚಿನ ಭದ್ರತೆ ಒದಗಿಸಬೇಕೆಂದು ಸರಕಾರಕ್ಕೆ ಮನವಿ ಮಾಡಿದಾಗ ಎಕ್ಸ್ ಶ್ರೇಣಿಯ ಭದ್ರತೆಯನ್ನು ಒದಗಿಸಲಾಗಿತ್ತು. ಸಕಾರಣ ನೀಡದೆ ನಂತರ ನನ್ನ ಭದ್ರತೆಯನ್ನು ವೈ ಶ್ರೇಣಿಗೆ ಇಳಿಸಲಾಗಿದೆ. ನಾನು ಹಲವಾರು ಹಿಂದೂ ಸಂಘಟನೆಗಳಿಗೆ ಬೆಂಬಲವಾಗಿ ಕಾರ್ಯನಿರ್ವಹಿಸುತ್ತಿದ್ದು, ಇತ್ತೀಚೆಗೆ ಗೋವುಗಳ ರಕ್ಷಣೆಗೂ ಗೋವರ್ಧನ ಟ್ರಸ್ಟ್ ಮೂಲಕ ಸೇವೆ ಮಾಡುತ್ತಿರುವುದರಿಂದ ಕೆಲವು ರಾಷ್ಟ್ರದ್ರೋಹಿ ಮುಸಲ್ಮಾನರುಗಳಿಗೆ ಅಡ್ಡಿಯಾಗಿದೆ. ನನ್ನ ಬಗ್ಗೆ ಅವರಿಗೆ ಭಯ ಇದೆ. ಹಿಂದೆ ಕರೆ ಬಂದಾಗ ಪೊಲೀಸರಿಗೆ ತನಿಖೆ ಮಾಡುವಂತೆ ಮನವಿ ನೀಡಿದ್ದರೂ ಏನಾಯಿತು ಎಂಬುದರ ಬಗ್ಗೆ ಇದೂವರೆಗೂ ಮಾಹಿತಿ ಸಿಕ್ಕಿಲ್ಲ. ಆದರೆ ಹಿಂದೆ ನನಗೆ ಭದ್ರತೆಯನ್ನು ಒದಗಿಸಿದ್ದರು. ಈಗ ಭದ್ರತೆ ವಾಪಾಸ್ಸು ಪಡೆದಿದ್ದು ಮತ್ತೆ ಅಂತರಾಷ್ಟ್ರೀಯ ದೂರವಾಣಿ ಕರೆ ಬಂದಿದ್ದರಿಂದ ನನಗೆ ಭದ್ರತೆ ದೃಷ್ಟಿಯಿಂದ ಎಸ್ಕಾರ್ಟ್ ನೀಡಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಜಿಲ್ಲಾ ರಕ್ಷಣಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದ್ದೇನೆ.

ಜಿಲ್ಲಾ ರಕ್ಷಣಾಧಿಕಾರಿಗಳು ಕೂಡ ಇದಕ್ಕೆ ಸ್ಪಂದಿಸಿದ್ದು, ತನಿಖೆ ಮಾಡುವ ಭರವಸೆ ನೀಡಿದ್ದಾರೆ. ಮತ್ತು ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ. ಈಗಲೂ ಸಹ ನನ್ನ ಪ್ರಾಣಕ್ಕೆ ಬೆದರಿಕೆ ಇರುವ ಕಾರಣ ಎಕ್ಸ್ ಶ್ರೇಣಿಯ ಭದ್ರತೆಯನ್ನು ಮರುಸ್ಥಾಪಿಸಲು ತುರ್ತುಕ್ರಮ ಕೈಗೊಳ್ಳಬೇಕೆಂದು ಪ್ರಧಾನ ಮಂತ್ರಿ, ಕೇಂದ್ರ ಗೃಹ ಸಚಿವರು, ರಾಜ್ಯ ಮುಖ್ಯಮಂತ್ರಿಗಳು, ರಾಜ್ಯ ಗೃಹಮಂತ್ರಿಗಳು ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ನೀಡಿರುವುದಾಗಿ ಅವರು ತಿಳಿಸಿದ್ದಾರೆ.

ಮನವಿ ನೀಡುವ ಸಂದರ್ಭದಲ್ಲಿ ರಾಷ್ಟ್ರಭಕ್ತರ ಬಳಗದ ಪ್ರಮುಖರಾದ ಕೆ.ಈ. ಕಾಂತೇಶ್, ಈ.ವಿಶ್ವಾಸ್, ಮಹಾಲಿಂಗಯ್ಯ ಶಾಸ್ತ್ರೀ, ಶಂಕರ್ನಾಯ್ಕ, ಚನ್ನಬಸಪ್ಪ, ಚಿದಾನಂದ, ಕುಬೇರಪ್ಪ, ಲಿಂಗರಾಜ್ ಹಾಗೂ ರಾಷ್ಟ್ರಭಕ್ತ ಪ್ರಮುಖರು ತಿಳಿಸಿದರು.