ಶಿವಮೊಗ್ಗ : ಜ.08 :
ಇಂದು ನಗರವೇ ಬೆಚ್ಚು ಬೀಳುವ ಸುದ್ದಿ ಹೊರಬಂದಿದೆ ನಮ್ಮನೆಲ್ಲ ರಕ್ಷಣೆ ಮಾಡಬೇಕಾದ ಟ್ರಾಫಿಕ್ ಪೊಲೀಸ್ ಮೊಹಮ್ಮದ್ ಜಕ್ರಿಯ ರವರು ಠಾಣೆ ಯಲ್ಲಿ ಆತ್ಮಹತ್ಯೆಗೆ ಶರಣಾಗಿರುವುದು ಖೇದಕರ ವಿಚಾರವಾಗಿದೆ ಎಂದು ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

ಈ ಕೂಡಲೇ ಜಿಲ್ಲಾ ರಕ್ಷಣಾಧಿಕಾರಿಗಳಾದ ಎಸ್ಪಿ ನಿಖಿಲ್ ಬಿ ಅವರು ಇವರ ಆತ್ಮಹತ್ಯೆಗೆ ಕಾರಣರಾದ ವ್ಯಕ್ತಿಗಳ ವಿರುದ್ಧ ತಕ್ಷಣ ಕ್ರಮ ತೆಗೆದುಕೊಂಡು ಶಿಕ್ಷೆಯನ್ನು ಕೊಡಿಸುವುದರ ಜೊತೆಗೆ ಒತ್ತಡದಲ್ಲಿರುವ

ಕೆಳ ಹಂತದ ಪೊಲೀಸ್ ಸಿಬ್ಬಂದಿಗಳಿಗೆ ಕೌನ್ಸಿಲಿಂಗ್ ಕೊಡಿಸುವುದರ ಮೂಲಕ ಆತ್ಮ ಸ್ಥೈರ್ಯ ಹೆಚ್ಚಿಸಬೇಕೆಂದು ಮಾನ್ಯ ಜಿಲ್ಲಾ ರಕ್ಷಣಾಧಿಕಾರಿಗಳಲ್ಲಿ ಮಾಧ್ಯಮ ಮೂಲಕ ಒತ್ತಾಯಿಸಿದ್ದಾರೆ