ಶಿವಮೊಗ್ಗ : ಮಲೆನಾಡು ಭಾಗದ ಶಿವಮೊಗ್ಗದ ಮೊದಲ ವಸತಿಯುತ ಕೋಚಿಂಗ್ ಸೆಂಟರ್ ಆದ ದೇಶ್ ನೀಟ್ ಅಕಾಡೆಮಿಯು ಚೊಚ್ಚಲ ಪ್ರಯತ್ನದಲ್ಲಿಯೇ ಅದ್ಬುತ ಸಾಧನೆ ಮಾಡಿದ್ದು, ೨೦೨೫ನೇ ಸಾಲಿನ ನೀಟ್ ಪರೀಕ್ಷೆಯಲ್ಲಿ ದಾಖಲಾತಿ ಪಡೆದ ಅಕಾಡೆಮಿಯ ೧೨೦ ವಿದ್ಯಾರ್ಥಿಗಳಲ್ಲಿ ೬೯ ವಿದ್ಯಾರ್ಥಿಗಳು ವೈದ್ಯಕೀಯ ಕ್ಷೇತ್ರಕ್ಕೆ ಆಯ್ಕೆಯಾಗಿ ವಿವಿಧ ಕೋರ್ಸ್ಗಳಿಗೆ ಪ್ರವೇಶ ಪಡೆದಿದ್ದಾರೆ ಎಂದು ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕ ಅವಿನಾಶ್ ಎ.ಆರ್. ತಿಳಿಸಿದರು.


ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೨೫ರಲ್ಲಿ ಶಿವಮೊಗ್ಗದ ಗಂಧರ್ವ ನಗರದಲ್ಲಿ ಆರಂಭವಾದ ದೇಶ್ ನೀಟ್ ಅಕಾಡೆಮಿ ನೀಟ್ ಪರೀಕ್ಷೆಯ ಮೊದಲ ಬ್ಯಾಚ್ನಲ್ಲಿ ಮೊದಲ ಪ್ರಯತ್ನದಲ್ಲಿಯೇ ಯಶಸ್ಸು ಕಂಡಿದೆ ಎಂದರು.
ದಾಖಲಾತಿ ಪಡೆದ ೧೨೦ ವಿದ್ಯಾರ್ಥಿಗಳಲ್ಲಿ ೬೯ ವಿದ್ಯಾರ್ಥಿಗಳು ವೈದ್ಯಕೀಯ ಕ್ಷೇತ್ರಕ್ಕೆ ಪ್ರವೇಶ ಪಡೆದಿದ್ದು, ಶೇ.೪೧ರಷ್ಟು ಫಲಿತಾಂಶವನ್ನು ಮುಡಿಗೇರಿಸಿಕೊಂಡಿರುವ ಅಕಾಡೆಮಿಯು ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಫಲಿತಾಂಶ ಕೊಡುವುದರ ಬಗ್ಗೆ ಗುರಿ ಹೊಂದಿದೆ ಎಂದರು.
ವೈದ್ಯಕೀಯ ಕ್ಷೇತ್ರಕ್ಕೆ ಆಯ್ಕೆಯಾಗಿರುವ ೬೯ ವಿದ್ಯಾರ್ಥಿಗಳಲ್ಲಿ ಎಂಬಿಬಿಎಸ್-೩೯, ಬಿಎಎಂಎಸ್-೧೭, ಡಿಡಿಎಸ್-೧೦ ಹಾಗೂ ವೆಟರ್ನರಿ-೩ ಆಯ್ಕೆಯಾಗಿದ್ದಾರೆ. ಎಂಬಿಬಿಎಸ್ನಲ್ಲಿ ಆಯ್ಕೆಯಾಗಿರುವ ೧೭ ವಿದ್ಯಾರ್ಥಿಗಳಲ್ಲಿ ಶಿವಮೊಗ್ಗದ ಸಿಮ್ಸ್ನಲ್ಲಿ ಪ್ರವೇಶ ಪಡೆದಿದ್ದಾರೆ. ಉನ್ನತ ಮಟ್ಟದ ಸಾಧನೆಯಿಂದ ಅಕಾಡೆಮಿಗೆ ಕೀರ್ತಿ ತಂದುಕೊಟ್ಟಿರುವ ಹಾಗೂ ವೈದ್ಯಕೀಯ ಕನಸು ಕಂಡು ಶ್ರಮಿಸಿದ ಪ್ರತಿಯೊಬ್ಬ ವಿದ್ಯಾರ್ಥಿಗಳ ಸಾಧನೆಗೆ ಅಕಾಡೆಮಿ ಅಭಿನಂದಿಸುತ್ತದೆ ಎಂದರು.

ಉನ್ನತ ಮಟ್ಟದ ಶೈಕ್ಷಣಿಕ ಸಾಧನೆಯಿಂದ ವಿದ್ಯಾರ್ಥಿಗಳು ಅಕಾಡೆಮಿಗೆ ಕೀರ್ತಿ ತಂದಿದ್ದಾರೆ ಎಂದ ಅವರು, ೨೦೨೬-೨೭ನೇ ಸಾಲಿನ ಶೈಕ್ಷಣಿಕ ತೃತೀಯ ವರ್ಷದ ಕ್ರಾಷ್ ಕೋರ್ಸ್ ಮತ್ತು ಲಾಂಗ್ ಟರ್ಮ್ ತರಬೇತಿಗೆ ಪ್ರವೇಶ ಆರಂಭವಾಗಿದ್ದು, ಆಸಕ್ತರು ಹೆಸರು ನೋಂದಯಿಸಿಕೊಳ್ಳಬಹುದು. ದೇಶಾದ್ಯಂತ ನೀಟ್ ತರಬೇತಿಯಲ್ಲಿ ಪ್ರಮುಖ ಹೆಸರಾಗಲು ಶ್ರಮಿಸಲಾಗುತ್ತಿದೆ ಎಂದರು.
ಡಿ.೨೭ರ ಸಂಜೆ ೫ ಗಂಟೆಗೆ ಅಕಾಡೆಮಿಯ ಆವರಣದಲ್ಲಿ ದೇಶ್ ಸಿಂಧೂರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿಯ ಪ್ರಧಾನ ವ್ಯವಸ್ಥಾಪಕ ಎಸ್.ಪ್ರದೀಪ, ಮಾರ್ಕೆಟಿಂಗ್ ಮ್ಯಾನೇಜರ್ ನಾಗರಾಜ್ ಆಚಾರ್, ಪ್ರಾಧ್ಯಾಪಕರುಗಳಾದ ಬ್ರಹ್ಮ ಗಾಯಕ್ವಾಡ್, ಗೋವರ್ಧನ್, ಯುಗಂದರ್, ಕ್ಯಾಂಪಸ್ನ ಕೋ ಆರ್ಡಿನೇಟರ್ ವಿಜಯ್ಕುಮಾರ್ ಹಾಜರಿದ್ದರು.