ಬೆಳಗಾವಿ, ವಿಧಾನಮಂಡಲದ ಅಧಿವೇಶನ, ಡಿ.12:
ಆಯನೂರು ಹೋಬಳಿಯ ಮಳಲಗೊಪ್ಪ ಗ್ರಾಮದ ಸರ್ವೆ ನಂಬರ್ 2 ರ ಜಮೀನು 1950 ರಿಂದ ತಪ್ಪಾಗಿ ಮಂಜೂರಾತಿ ಆಗಿರುವುದರ ಬಗ್ಗೆ ಹಾಗೂ ಕಾನೂನು ಕ್ರಮಗಳು ಉಲ್ಲಂಘನೆಯ ಬಗ್ಗೆ ಇಂದು ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಶಾರದಾ ಪೂರ್ಯಾನಾಯ್ಕ್ ಗಂಭೀರವಾಗಿ ಆರೋಪಿಸಿ ಸೂಕ್ತ ಕ್ತಮಕ್ಕೆ ಒತ್ತಾಯಿಸಿದರು.

ಸದನದಲ್ಲಿ ಮಾತನಾಡಿದ ಅವರು, ಈ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳಲು ಸಭಾಧ್ಯಕ್ಷರಿಗೆ ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಜಂಗಲ್ ಖರಾಬು ಜಮೀನು ಹೊಂದಿರುವವರಿಗೆ ಪೌತಿ ಖಾತೆ ಮಾಡಲು ತಹಶೀಲ್ದಾರ್ ಅರಣ್ಯ ಇಲಾಖೆಯಿಂದ ಎನ್ ಓ ಸಿ ತೆಗೆದುಕೊಂಡು ಬನ್ನಿ ಎನ್ನುತ್ತಾರೆ. ಅವರಿಗೊಂದು ನ್ಯಾಯವಾದರೆ ರೈತರಿಗೊಂದು ನ್ಯಾಯ ಇದೆಯಾ ಎಂದು ಸದನದಲ್ಲಿ ಪ್ರಶ್ನಿಸಿ ಗಮನಸೆಳೆದರು.