ಶಿವಮೊಗ್ಗ,ಡಿ.01: ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಟ್ರಸ್ಟ್ ವತಿಯಿಂದ ಗುಡ್ಡೇಕಲ್ ದೇವಸ್ಥಾನ ಆವರಣದಲ್ಲಿ ಡಿಸೆಂಬರ್ 3 ರಂದು ಸಂಜೆ 6 ಗಂಟೆಗೆ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಮಧ್ಯಾಹ್ನ 3 ಗಂಟೆಗೆ ಶಿವಮೊಗ್ಗದ ಗೋಪಿ ಸರ್ಕಲ್ ನಿಂದ ಕಾವಡಿಗಳು, ಪಂಬೈ ವಾದ್ಯ ಮತ್ತು ಮಂಗಳವಾದ್ಯದೊಂದಿಗೆ ಹೊರಟು ಮೈಲಾರೇಶ್ವರ ದೇವಾಲಯಕ್ಕೆ ತಲುಪಿ ಸಂಜೆ 4 ಗಂಟೆಗೆ ಮಹಿಳೆಯರಿಂದ ದೀಪಗಳ ಉತ್ಸವದೊಂದಿಗೆ ಮೆರವಣಿಗೆ ಹೊರಟು ಶ್ರೀ

ಬಾಲಸುಬ್ರಹ್ಮಣ್ಯಸ್ವಾಮಿಯ ದೇವಾಲಯಕ್ಕೆ ಆಗಮಿಸಿ ನಂತರ ಶ್ರೀ ಬಾಲಸುಬ್ರಹ್ಮಣ್ಯಸ್ವಾಮಿಗೆ ಮಹಾ ದೀಪಾರಾಧನೆ ನಡೆಯುವುದು.
ನಂತರ ಸಿಡಿಮದ್ದು ಬಾಣಬಿರುಸುಗಳ ಕಾರ್ಯಕ್ರಮ ಇರುತ್ತದೆ ಮತ್ತು ಮಯಿಲಾಡುದುರೈಯ ಮಯಿಲೈ ಅಮ್ಮನವರ ಕೀರ್ತಿಯ ಪಂಬೈ ಕಲೈ ಸಂಘ ಇವರಿಂದ ಭಕ್ತಿಗೀತೆ ಮತ್ತು ನೃತ್ಯಕಾರ್ಯಕ್ರಮ ಇರುವುದು ಎಂದು ಟ್ರಸ್ಟ್ ಅಧ್ಯಕ್ಷ ಪಿ.ರಘುಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.