ಶಿವಮೊಗ್ಗ, ನವೆಂಬರ್. 24 : ಶಿವಮೊಗ್ಗ ಜಿಲ್ಲಾ ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ)ಕಾಯ್ದೆ 20415ರ ಸೆಕ್ಷನ್ 41(1)ರಡಿ ನೋಂದಾಯಿಸಲ್ಪಟ್ಟಿರುವ ತೆರೆದ ತಂಗುದಾಣ, ಸುರಭಿ ಮಹಿಳಾ ಮಂಡಳಿ, ಸೋಮಿನಕೊಪ್ಪ, ಶಿವಮೊಗ್ಗ ಅರೆನಗರ ಪ್ರದೇಶದಲ್ಲಿ ಅಲ್ಪಾವಧಿ ವಸತಿ ಹಾಗೂ ಸೇತುಬಂಧ ಶಿಕ್ಷಣದ ಅಗತ್ಯವಿರುವ ಮಕ್ಕಳಿಗೆ ಕಾರ್ಯನಿರ್ವಹಿಸುತ್ತಿದ್ದು, ಈ ತೆರದ ತಂಗುದಾಣದವು ಮಿಷನ್ ವಾತ್ಸಲ್ಯ

ಮರುಸೂಚಿಯನ್ವಯ ಕಾರ್ಯನಿರ್ವಹಿಸುತ್ತಿರುವ ಕುರಿತು ಪರಿಶೀಲಿಸಲು ರಾಷ್ಟ್ರೀಯ ಮಕ್ಕಳು ಹಕ್ಕುಗಳ ರಕ್ಷಣಾ ಆಯೋಗದ ನವದೆಹಲಿಯ ತಂಡವು ಜಿಲ್ಲೆಗೆ ಭೇಟಿ ನೀಡಿಗಾಗ ಸುರಭಿ ತೆರದ ತಂಗುದಾಣವು ನಿಯಮಾನುಸಾರ ಕಾರ್ಯನಿರ್ವಹಿಸದೇ ಇರುವುದರಿಂದ ರದ್ದುಗೊಳಿಸಲು

ವರದಿ ನೀಡಿರುತ್ತಾರೆ. ಆದ್ದರಿಂದ ಸುರಭಿ ತಂಗುದಾಣವು ದಿ: 31/10/2025 ರಿಂದ ಅನ್ವಯವಾಗುವಂತೆ ಬಾಲನ್ಯಾಯ ಕಾಯ್ದೆ, 2015 ಸೆಕ್ಷನ್ 41(7) ರ ಅನ್ವಯ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ರದ್ದುಪಡಿಸಿರುತ್ತಾರೆ ಎಂದು ಜಿಲ್ಲಾ ಮಕ್ಕಳ ರಕ್ಷಣ ಘಟಕ ಕಚೇರಿಯ ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, 100 ಅಡಿ ರಸ್ತೆ, ಸರ್ಕಾರಿ ವೀಕ್ಷಣಾಲಯ ಕಟ್ಟಡ, ಆಲ್ಕೊಳ, ಶಿವಮೊಗ್ಗ – ದೂ.ಸಂ.: 08182-295709 ನ್ನು ಸಂಪರ್ಕಿಸುವುದು.