
ಶಿವಮೊಗ್ಗ, ನ.23:
ಶಿವಮೊಗ್ಗದ ಹಿರಿಯ ಪತ್ರಕರ್ತ ಸಿವಿ ರಾಘವೇಂದ್ರರಾವ್ ಇಂದು ಬೆಂಗಳೂರಿನಲ್ಲಿ ನಿಧನರಾಗಿರುತ್ತಾರೆ.
ಶ್ರೀಯುತರ ಅಂತಿಮ ಸಂಸ್ಕಾರ ಶಿವಮೊಗ್ಗದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಟೈಮ್ಸ್ ಆಫ್ ಇಂಡಿಯಾ ವರದಿಗಾರರಾಗಿದ್ದ ಉಪನ್ಯಾಸಕರು ಆಗಿದ್ದ ದುರ್ಗಿಗುಡಿ ರಾಘವೇಂದ್ರ ಸ್ವಾಮಿ ಮಠದ ಆಡಳಿತ ಮಂಡಳಿ ಅಧ್ಯಕ್ಷರು ಸದಸ್ಯರು ಆಗಿದ್ದರು. ಇಂದು ಬೆಳಿಗ್ಗೆ 8 ಗಂಟೆಗೆ ಬೆಂಗಳೂರಿನಲ್ಲಿ ನಿಧನರಾಗಿದ್ದು ಅವರ ಪಾರ್ಥಿವ ಶರೀರ ಶಿವಮೊಗ್ಗದ ಮೇದಾರ ಕೇರಿಯ ಹಿಂಬಾಗದ ಕೀರ್ತಿನಗರದ ನಿವಾಸಕ್ಕೆ ಸಂಜೆ 5:00 ಗಂಟೆಗೆ ಬರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿದ್ದು, ಮೃತರು ಪತ್ನಿ ಓರ್ವ ಪುತ್ರ ಹಾಗೂ ಓರ್ವ ಪುತ್ರಿ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಸರಳ, ಸಜ್ಜನಿಕೆಯ, ಅಹಂ ಇಲ್ಲದ ಸಿವಿಆರ್ ತುಂಗಾತರಂಗ ದಿನಪತ್ರಿಕೆಯ ಹೊಸತನದ ಜವಾಬ್ದಾರಿ ಹೊತ್ತಿದ್ದ ನಮ್ಮ ತಂಡಕ್ಕೆ ಸಾಕಷ್ಟು ಸಲಹೆ ನೀಡಿ 2011 ರಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಅತೀ ಹೆಚ್ಚು ಪ್ರಸರಣವನ್ನು ಕಲಿಸಿದ ಗುರುಗಳವರು.
ಸಿವಿಆರ್ ಇನ್ನಿಲ್ಲ/ ಕಂಬನಿ
ಶಿವಮೊಗ್ಗದ ನಿವೃತ್ತ ಅಧ್ಯಾಪಕರು- ಹಿರಿಯ ಪತ್ರಕರ್ತರೂ ಆದ ಸಿ.ವಿ. ರಾಘವೇಂದ್ರರಾವ್ ನಿಧನ/ ಅವರಿಗೆ ತುಂಗಾತರಂಗ ಬಳಗದ ಅಕ್ಷರ ಕಂಬನಿ.