ಶಿವಮೊಗ್ಗ: ರಾಜಸ್ಥಾನ ಕೋಟದ ಬನ್ಸಲ್ ಕ್ಲಾಸಸ್ ವತಿಯಿಂದ ನಗರದ ಕೋಟೆ ರಸ್ತೆಯ ವಾಸವಿ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಭಾನುವಾರ 10ನೇ ತರಗತಿಯ ವಿದ್ಯಾರ್ಥಿಗಳಿಗೆ ತ್ರಿವಿಕ್ ಫೌಂಡೇಶನ್ ಅಡಿಯಲ್ಲಿ ವೀಸಾ ಪರೀಕ್ಷೆಯನ್ನ ನಡೆಸಿದರು.
ವೀಸಾದ ಉದ್ದೇಶ ಪ್ರತಿಭಾನ್ವಿತ ಯುವ ಮನಸ್ಸುಗಳನ್ನ ಗುರುತಿಸುವುದು ಹಾಗೂ ಅವರಿಗೆ ವೃತ್ತಿ ಮಾರ್ಗದರ್ಶನ, ವಿದ್ಯಾರ್ಥಿ ವೇತನ, ಮತ್ತು IIT, JEE ಹಾಗೂ NEET ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ರಚನಾತ್ಮಕ ಮಾರ್ಗದರ್ಶನವನ್ನು ನಡೆಸುವುದಾಗಿತ್ತು. ಶಿವಮೊಗ್ಗದ

ಪರೀಕ್ಷೆಯಲ್ಲಿ 320ಕ್ಕೂ ಹೆಚ್ಚು ವಿದ್ಯಾರ್ಥಿಗಳು 125 ಪೋಷಕರು ಹಾಗೂ 35 ಸಿಬಂದಿವರ್ಗ ಒಟ್ಟಾರೆ 500 ಮಂದಿ ಭಾಗವಹಿಸಿದ್ದರು.
ಪರೀಕ್ಷೆಯನ್ನು ಸರಿಯಾದ ಮೇಲ್ವಿಚಾರಣೆ ಓ.ಎಂ.ಆರ್ ಆಧಾರಿತ ಮೌಲ್ಯಮಾಪನ ಮತ್ತು ತರಬೇತಿ ಪಡೆದ ಮೇಲ್ವಿಚಾರಕರ ಮೇಲ್ವಿಚಾರಣೆಯೊಂದಿಗೆ ಹೆಚ್ಚು ಸಂಘಟಿತ ರೀತಿಯಲ್ಲಿ ನಡೆಸಲಾಯಿತು.

ತ್ರಿವಿಕ್ ಫೌಂಡೇಡಿಷನ್ ಟ್ರಸ್ಸಿನ ಬನ್ಸಾಲ ಸಮೂಹ ಸಂಸ್ಥೆಯವರು ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಕನಸಿನ ವೃತ್ತಿ ಜೀವನವನ್ನು ಸಾಧಿಸಲು ಉತ್ತಮ ಗುಣಮಟ್ಟದ ಶಿಕ್ಷಣ ಬಲವಾದ ಮಾರ್ಗದರ್ಶನ ಮತ್ತು ಶೈಕ್ಷಣಿಕ ಉತ್ಕೃಷ್ಟತೆಯನ್ನು ಒದಗಿಸಲು ಬನ್ಸಲ್ ಕ್ಲಾಸ್ಟ್ ಬದ್ಧವಾಗಿದೆ ಎಂಬುದಾಗಿ ತಿಳಿಸಿದರು. ಇದರ ಯಶಸ್ವಿಗೆ ಕಾರಣರಾದ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಹಾಗೂ ವಾಸವಿ ಪಬ್ಲಿಕ್ ಶಾಲೆಯ ಎಲ್ಲಾ ಆಡಳಿತ ಮಂಡಳಿಯವರಿಗೆ ಧನ್ಯವಾದಗಳನ್ನು ತಿಳಿಸಿದರು.g